ಕಲಬುರಗಿ: ಗ್ರಾಮೀಣ ಮೀಸಲು ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ರವರು ಲಿಂಗಾಯತ ಸಮಾಜದ ವಿರೋಧಿ ಎಂದು ಪ್ರತಿಭಟನೆ ಮಾಡಿದ ರವಿ ಬಿರಾದಾರ ವಿರೋಧ ನಾಲವಾರಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತರ, ಬಡವರ, ಯುವಕರ ಆಶಾ ಕಿರಣ ವಾಗಿರುವ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ತೇಜೂವಧೆಗೆ ಯತ್ನಿಸಿರುವುದ ಖಂಡನೀಯವಾಗಿದೆ ಎಂದು ಕರವೇ ಕಾವಲುಪಡೆ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್ ಪತ್ರಿಕಾ ಪ್ರಕಟಣೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬಸವರಾಜ ಮತ್ತಿಮೂಡ ಎಲ್ಲಾ ಸರ್ವ ಜನಾಂಗದ ಅಭಿವೃದ್ಧಿಗಾಗಿ ಹಗಲು ರಾತ್ರಿ ಕೆಲಸವನ್ನು ಮಾಡುತ್ತಿರುವ ಜನ ಸೇವಕ ಇವರು ವಿರೋಧ ಮಾತನಾಡುವುದು, ಬಿರಾದಾರ ನಿಲ್ಲಿಸಬೇಕು ಎಂದು ಕಿವಿಮಾತನ್ನು ಆಡಿದ್ದಾರೆ.