ಕಲಬುರಗಿ: ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಹಡಗೀಲ್ ಹಾರುತಿ ಗ್ರಾಮದಲ್ಲಿರುವ ನೆಟೆ ರೋಗ ಪೀಡೆಯಿಂದ ಹಾಳಾಗಿರುವ ತೊಗರಿ ಹೊಲಗದ್ದೆಗಳಿಗೆ ಶುಕ್ರವಾರ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ವೀಕ್ಷಿಸಿದರು. ನಂತರ ಹಡಗೀಲ್ ಹಾರುತಿ ರೈತರೊಂದಿಗೆ ಮಾತನಾಡಿ ಹಾನಿಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡರು.
ತಗೊರಿ ರೈತರಾದ ಮಹಾದೇವಪ್ಪ ಪಾಟೀಲ್, ಅಣ್ಣಾರಾಯ ಶಹಾಬಾದಿ, ರಮೇಶ ತಳಕೇರಿ, ಮೆಹೆಬೂಬ್ ಪಟೇಲ್, ಶಿವಯ್ಯ ಗುತ್ತೇದಾರ್, ಮಲ್ಲಣ್ಣ ಶಾಬಾದಿ, ಚಂದ್ರಶಾ ಮಳ್ಳಿ, ಶರಮು ಪೂಜಾರಿ, ತಿಪ್ಪಣ್ಣ ಮಡಿವಾಳ, ಜಗನ್ನಾಥ ಪಡಶೆಟ್ಟಿ ಇವರೆಲ್ಲರೂ ಅಲ್ಲಂಪ್ರಭು ಪಾಟೀಲರೊಂದಿಗೆ ಮಾತುಕತೆ ನಡೆಸಿ ಹಾಳಾದ ತೊಗರಿ ಬೇಸಾಯದ ಸಂಪೂರ್ಣ ವಿವರ ನೀಡಿದರು.
ಮಲೆಗೆ ಬಿತ್ತಿದ ತೊಗರಿ ಹಾಳಾಗಿ 2 ಬಾರಿ ಬಿತ್ತನೆ ಮಾಡಿz್ದÉೀವು. ರಸಗೊಬ್ಬರಕ್ಕೆ ವಸಾಕಷ್ಟು ಹಣ ವೆಚ್ಚ ಮಾಡಿz್ದÉೀವೆ. ಈಗ ನೆಟೋ ರೋಗ ಸೇರಿದಂತೆ 3 ರೋಗ ಏಕಕಾಲಕ್ಕೆ ಬಂದು ತೊಗರಿ ಸತ್ಯಾನಾಶ ಆಗಿದೆ. ನಮ್ಮ ಬದುಕು ಬರ್ಬಾದ ಆಗಿದೆ. ಈ ಬಾರಿ ಮಳೆ ಹಾಗೂ ನೆಟೆ ರೋಗದಿಂದ ನಾವು ಸಂಪೂರ್ಣ ಹಾಳಾಗಿz್ದÉೀವೆ. ಸರ್ಕಾರ ಪರಿಹಾರ ನೀಡದೆ ಹೋದಲ್ಲಿ ನಮ್ಮ ಬದುಕು ದುರ್ಭರವಾಗಲಿದೆ ಎಂದು ರೈತರು ಎಲ್ಲರು ಗೋಳಾಡಿದರು.
ಕಾಂಗ್ರೆಸ್ ಪಕ್ಷ ನೆಟೆ ರೋಗದ ವಿಚಾರವಾಗಿ ಹೋರಾಟ ಶುರು ಆಡಿದೆ. ಬೆಳಗಾವಿ ಸದನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ನಮ್ಮ ಮುಕಂಡರು ಮಾಡಲಿದ್ದಾರೆ. ರೈತರಿಗೆ ನ್ಯಾಯ ಸಿಗೋವರೆಗೂ ನಾವು ಹೋರಾಟ ಮಾಡುತ್ತೇವೆಂದು ಅಲ್ಲಂಪ್ರಭು ಪಾಟೀಲ್ ಪಕ್ಷದ ಪರವಾಗಿ ತೊಗರಿ ರೈತರಿಗೆ ಭರವಸೆ ನೀಡಿದರು.