ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಓದು ಬೆಳಕು ಅಭಿಯಾನದ ಮುಂದುವರಿದ ಭಾಗವಾದ ಚಿಣ್ಣರ ಚಿತ್ತಾರ ಅಭಿಯಾನದ ಅಂಗವಾಗಿ ಮಕ್ಕಳಿಗೆ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಬರುವ ಎಲ್ಲಾ ಶಾಲೆಗಳ 6, 7, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಚಿತ್ರಕಲೆಯಲ್ಲಿ 28 ವಿದ್ಯಾರ್ಥಿಗಳು ಮತ್ತು ಗ್ರಂಥಾಲಯ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ 30 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 58 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರದ ಬಗ್ಗೆ ಚಿತ್ರಕಲೆ ವಿಷಯವನ್ನು ನೀಡಿದರೇ, ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಪ್ರಬಂಧ ಸ್ಪರ್ಧೆ ನೀಡಲಾಗಿ,ಆಯಾ ಶಾಲೆಯ ಮುಖ್ಯ ಗುರುಗಳು ಪ್ರಥಮ, ದ್ವಿತೀಯ ಸ್ಥಾನ ಆಯ್ಕೆ ಮಾಡಲು ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪಂಚಾಯತ್ ಕಾರ್ಯದರ್ಶಿಗಳಾದ ಗುರುಪಾದಪ್ಪ, ಬಿಲ್ ಕಲೆಕ್ಟರ್ ಚಿತ್ರೇಖರ್ ಚೆಸ್ ಬೋರ್ಡ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ರಾಜೇಶ್ವರಿ, ಸುನಂದಾ, ಸಾವಿತ್ರಿ, ಸುನಂದ, ಪ್ರೀಯಾ, ಅಂಬಿಕಾ, ಜಯಶ್ರೀ, ಯಶೋಧ ಮತ್ತು ಗ್ರಂಥಪಾಲಕರಾದ ಪಾರ್ವತಿ ಮಠಪತಿ ಉಪಸ್ಥಿತರಿದ್ದರು.