ಆಳಂದ: ಕಂಪ್ಯೂಟರ್ ತರಬೇತಿ ಅತ್ಯಗತ್ಯ

0
13

ಆಳಂದ: ಸಫಾಯಿ ಕರ್ಮಚಾರಿ ನಿಗಮ ಹಾಗೂ ಬೆಸಿಕ್ ಹೆಲ್ತ್,ಎಜುಕೇಶನ್,ರೂರಲ್ ಮತ್ತು ಅರ್ಬಲ್ ಡೆವಲಪಮೆಂಟ್ ಸೊಸೈಟಿ ಬೀದರ, ಬೇಸಿಕ್ ಕಂಪ್ಯೂಟರ್ ಕಾರ್ಯಕ್ರಮದ  ವತಿಯಿಂದ ಶನಿವಾರ ಅಳಂದ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಸಗರಿ ಕಾಂಪ್ಲೆಕ್ಸ್ ನಲ್ಲಿರುವ ಕದಂಬ ತರಬೇತಿ ಕೇಂದ್ರದಲ್ಲಿ  ಹಮ್ಮಿಕೊಂಡ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಸಫಾಯಿ ಕರ್ಮಚಾರಿ ನಿಗಮ ಜಿಲ್ಲಾ ನಿರ್ದೇಶಕ ಸುಧೀರ್ ಸಂಗೋಳಗಿಕರ ಮಾತನಾಡಿ,ಎಲ್ಲ ಸಫಾಯಿ ಕರ್ಮಚಾರಿಕ ಮಕ್ಕಳು ಈ ಯೋಜನೆಯ ಸುದುಪಯೋಗ ಪಡೆದುಕೊಳ್ಳಿ, ಧನ ಸಹಾಯ ಇರುತ್ತದೆ.ಉತ್ತಮವಾಗಿ ಕಲಿಯಿರಿ ಎಂದು ಹೇಳಿದರು.

Contact Your\'s Advertisement; 9902492681

ಕಂದಬ ನಿರ್ದೇಶಕ ಸುನೀಲ್ ಹಿರೋಳಿಕರ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದ ಅವರು,ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕೌಶಲ್ಯ ತರಬೇತಿಗಾಗಿ ಹಲವು ಕಾರ್ಯಕ್ರಮಗಳು ಇವೆ.ಉತ್ತಮವಾಗಿ ಕಲಿತು ಸಂಸ್ಥೆಯ ಹೆಸರು ಮುಂದುತನ್ನಿ,ಈ ಕೇಂದ್ರದಲ್ಲಿ ಕಲಿತು ಹಲವರು ಸರ್ಕಾರಿ ಉದ್ಯೋಗದಲ್ಲಿ ಇದ್ದಾರೆ ಎಂದು ಸಂತಸ ಹಂಚಿಕೊಂಡರು.

ಕಂಪ್ಯೂಟರ್ ತರಬೇತಿ ಮುಖ್ಯಸ್ಥ,ದಯಾನಂದ ಜಾಧವ್ ಹಾಗೂ ಪುರಸಭೆ ಅಧ್ಯಕ್ಷೆ ರಾಜೇಶ್ರೀ ಖಜೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರಸಭೆ ಪರಿಸರ ಅಭಿಯಂತರ ರವಿಕಾಂತ್ ಮಿಸ್ಕೀನ್,ಆರೀಪ್,ಚೇತನ,ಮೇಘನಾಥ ಜಾಧವ್,ಪ್ರೇಮ ಕುಮಾರ ಕಂಬಾರ  ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು,ಸಿಬ್ಬಂದಿ ಮತ್ತಿತರರು ಇದ್ದರು.ಸುಜ್ಞಾನಿ ಪೋದ್ದಾರ ನಿರೂಪಿಸಿದರು.ಮೋನಿಕಾ ಕಟಕೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here