ಡಿ.19 ರಂದು ಶ್ರೀಚಿಂತಾಮಣಿ ಪಾಶ್ರ್ವನಾಥಭಗವಾನ ಜಯಂತಿ

0
18

ಕಲಬುರಗಿ: ಸುಕ್ಷೇತ್ರ ಹುಣಸಿಹಡಗಿಲ ಗ್ರಾಮದ 1008ಶ್ರೀ ಚಿಂತಾಮಣಿ ಪಾಶ್ರ್ವನಾಥ ಭಗವಾನರ ಜಯಂತೋತ್ಸವ ಹಾಗೂ ವಾರ್ಷಿಕ ಧಾರ್ಮಿಕ ಉತ್ಸವ ಇದೇ ಡಿ.19ರಂದು ಅದ್ದೂರಿಯಾಗಿ ಜರುಗಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಕೂಡ ಇದೆ ಡಿ.19ರ ಸೋಮವಾರ ಶ್ರೀಭಗವಾನರ ಜಯಂತ ಹಾಗೂ ಸಂಕಷ್ಟ ಹರಣಿ ಶ್ರೀ ಜಗನ್ಮಾತೆ ಪದ್ಮಾವತಿ ದೇವಿಯ ವಾರ್ಷಿಕ ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಪೂಜ್ಯ ಡಾ.ಮಹಾವೀರ ಪ್ರಭಾಚಂದ್ರ ಶಾಸ್ತ್ರೀಜಿ ಕುಲತಿಲಕ ಸೋಲಾಪರ ಆವರ ದಿವ್ಯ ಮಾರ್ಗದರ್ಶನದಲ್ಲಿ ಜರುಗಲಿದೆ.

Contact Your\'s Advertisement; 9902492681

ಶ್ರೀಮಂದಿರದ ಪೂಜಾಕೃತ್ತುಗಳಾದ ಶ್ರೀಪ್ರಕಾಶ ರಾಜಕುಮಾರ ಪಂಡಿತ ಸಹೋದರರ ಸಮ್ಮುಖದಲ್ಲಿ ನಾಳೆ ಡಿ.18ರಂದು ಅಭಿಷೇಕ, ಸಹಸಾನಾಮ ಕುಂಕುಮಾರ್ಚನೆ ಮತ್ತು ಸಂಜೆ 6-30ಕ್ಕೆ ಉತ್ಸವದ ಮೆರವಣಿಗೆ.ಗ್ರಾಮದ ಶ್ರೀ ಅಲ್ಲಮಪ್ರಭು ದೇವಸ್ಥಾನದ ಪೂಜ್ಯಗುಂಡೇರಾವ ಮುತ್ತಾ, ಅವರ ಸಾನಿಧ್ಯದಲ್ಲಿ ರಾತ್ರಿ 8ರಿಂದ ಧಾರ್ಮಿಕ ಕೀರ್ತನೆ. ಭಜನೆ ನಡೆಯಲಿದೆ.

ಡಿ.19ರ ಬೆಳಿಗ್ಗೆ 8-30ಕ್ಕೆ ಧ್ವಜಾರೋಹಣ.9-30ಕ್ಕೆ ಕುಂಬದ ಮೆರವಣಿಗೆ 10-30ಕ್ಕೆ ಜಲಯಾತ್ರೆ ಚಡಾವು ನಂತರ ಗಣ್ಯಮಾನ್ಯರಾದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸುರೇಶ ತಂಗಾ ಮರೆಪ್ಪ ಶ್ರೀಪಾಲ ಮುನೊಳ್ಳಿ, ಗಣಪತರಾವ ಗಂಗಾರಾಮ ಹಜಾರೆ, ಚಂದ್ರಕಾಂತ ಭೋಜೆ ಪಾಟೀಲ, ಪರಗೌಡ ಶಿರಗುಪ್ಪಿ, ದಿಲೀಪ ನೇಮಿನಾಥರಾವ ಕಿವಡೆ ಅವರ ಸನ್ಮಾನ. ಮಧ್ಯಾಹ್ನ 12-45ಕ್ಕೆ ಮಹಾಭಿಷೇಕ, 1ಕ್ಕೆ ಮಹಾಪ್ರಸಾದ, 3-30ಕ್ಕೆ ಪಲ್ಲಕ್ಕಿ ಶೋಭಾಯಾತ್ರೆ, ರಾತ್ರಿ ಶ್ರೀಪಾಶ್ರ್ವನಾಥಭಗವಂತರತೊಟ್ಟಿಲು ಕಾರ್ಯಕ್ರಮ, ನಂತರ ಭಜನೆ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here