ಶಾಲೆ ಬಿಟ್ಟು ಮನೆಯಲ್ಲಿ ಇದ್ದ ಶಾಲಾ ಮಕ್ಕಳನ್ನು ತಮ್ಮ ವಾಹನದಲ್ಲೇ ಶಾಲೆಗೆ ಕರೆದೊಯ್ದ ಜಿಲ್ಲಾಧಿಕಾರಿ

0
12

ಸುರಪುರ: ಮತದಾರ ಪಟ್ಟಿ ಪರಿಷ್ಕರಣೆಯನ್ನು ಮಾಡಲಾಗುತ್ತಿದ್ದು. ಅದರಂತೆ ಚುಣಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ಶುದ್ಧೀಕರಣವನ್ನು ಅಧಿಕಾರಿಗಳು ಸರಿಯಾಗಿ ಮಾಡಿದ್ದಾರೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಲಾಯಿತು. ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

ಸುರಪುರ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸಲ್ಲಿಕೆಯಾದ ಅರ್ಜಿಗಳನ್ನು ಖುದ್ದು ಪರಿಶೀಲಿಸಿ, ಮತದಾರರ ಪಟ್ಟಿ ವಿಶೇಷ ಸಂಕ್ಷೀಪ್ತ ಪರಿಷ್ಕರಣೆಯ ಸೂಪರ್ ಚೆಕ್ಕಿಂಗ್ ಗಾಗಿ ಒಣಕಿಹಾಳ( ಸತ್ಯಂಪೇಟ) ಮತ್ತು ಕೃಷ್ಣಾಪುರ ( ಬಿಜಾಸಪುರ) ಗ್ರಾಮದ ಅರ್ಜಿದಾರರ ಮನೆಗೆ ಜಿಲ್ಲಾಧಿಕಾರಿ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ ಅವರು ಮಾತನಾಡಿದರು.

Contact Your\'s Advertisement; 9902492681

ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ ಇಲ್ಲವೇ ತಪ್ಪಾಗಿದ್ದಲ್ಲಿ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಬಹುದಾಗಿದೆ. ಅದಕ್ಕೆಂದು ಚುನವಣಾ ಆಯೋಗವು ನಮೂನೆ 6, 7 ಮತ್ತು 8 ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನವೆಂಬರ್ 9 ರಿಂದ ಡಿಸೆಂಬರ್ 8ರವರೆಗೆ ಅವಕಾಶ ಕಲ್ಪಿಸಿತ್ತು. ಈ ವೇಳೆ ಎಲ್ಲಾ ಬೂತ್ಮಟ್ಟದ ಅಧಿಕಾರಿಗಳು (ಬಿಎಲ್ಓ) ಮತ್ತು ಬಿಎಲ್ಓ ಮೇಲ್ವಿಚಾರಕರು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಶುದ್ಧೀಕರಿಸುವ ಕಾರ್ಯ ಮಾಡಿದ್ದಾರೆ ಎಂದರು.

ಅರ್ಜಿದಾರರ ಮನೆಗಳಿಗೆ ಭೇಟಿ ನೀಡಿ ಸೂಪರ್ ಚೆಕ್ಕಿಂಗ್ ಮಾಡಿ, ಪರಿಶೀಲನೆಯ ವೇಳೆ ಎಲ್ಲವೂ ಸರಿಯಿದ್ದು, ನಮೂನೆಗಳಿಗೆ ಮನೆಯವರ ಹೆಸರು, ವಿಳಾಸ, ಸಹಿ ಪರಿಶೀಲನೆಯ ಜೊತೆಗೆ ಎರಡು ಕಡೆ ಹೆಸರಿದ್ದಲ್ಲಿ ಅದನ್ನು ಸಂಬಂಧಪಟ್ಟ ಅಧಿಕಾರಿಯ ಜೊತೆ ಮಾತನಾಡಿ ಒಂದು ಕಡೆ ಹೆಸರನ್ನು ತೆಗೆಸಲಾಗುವುದು. ಕೆಲವು ನಮೂನೆಗಳಲ್ಲಿ ಅಧಿಕಾರಿಗಳಿಗೆ ಸಮಯ ಹಾಗೂ ದಿನಾಂಕವನ್ನು ಸರಿಯಾಗಿ ನಮೂದಿಸಲು ಸೂಚಿಸಲಾಗಿದೆ ಎಂದರು.

ಒಣಕಿಹಾಳ( ಸತ್ಯಂಪೇಟ) ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ಪರಿಶೀಲನೆ ಒಣಕಿಹಾಳ ( ಸತ್ಯಂಪೇಟ) ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಂಗಡಿಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರದಲೇ ಅಕ್ಕಿ ವಿತರಿಸಬೇಕು. ನಿಗದಿ ಪಡಿಸಿದ ಪ್ರಮಾಣ ಗ್ರಾಹಕರಿಗೆ ನೀಡಬೇಕು. ವಿತರಣೆ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರರೊಂದಿಗೆ ನೀಡುವ ಪ್ರಮಾಣ ಹಾಗೂ ದರವನ್ನು ಕೇಳಿ ತಿಳಿದುಕೊಳ್ಳಬೇಕು. ಅಕ್ಕಿಗೆ ಹೆಚ್ಚಿನ ದರ ಕೇಳಿದಲ್ಲಿ, ನೀಡುವ ಪ್ರಮಾಣ ಕಡಿತಗೊಳಿಸಿದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವೇಳಾಪಟ್ಟಿ ಪ್ರಕಟಿಸಿ: ಅಲ್ಲಿನ ವ್ಯವಸ್ಥಾಪಕರಿಗೆ ಗ್ರಾಹಕರಿಗೆ ವಿತರಣೆ ಮಾಡುವ ವೇಳಾಪಟ್ಟಿ ಪ್ರಕಟಿಸಬೇಕು ಎಂದರು. ನೆಲದ ಮೇಲೆ ಅಕ್ಕಿ ಚೀಲಗಳನ್ನು ಹಾಕುವ ಮೊದಲು ಕೆಳ ಭಾಗಕ್ಕೆ ತಾಡಪಾಲ್ ಹಾಕಿ ನಂತರ ಅಕ್ಕಿ ಚೀಲಗಳನ್ನು ವ್ಯವಸ್ಥಿತವಾಗಿಡಬೇಕು ಎಂದು ಸೂಚಿಸಿದರು. ವ್ಯತ್ಯಾಸಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಅಕ್ಕಿ ಪೊಲಾಗದಂತೆ ಎಚ್ಚರ ವಹಿಸಲು ಸೂಚಿಸಿದರು.

ಶಾಲೆ ಬಿಟ್ಟು ಮನೆಯಲ್ಲಿ ಇದ್ದ ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ದ ಜಿಲ್ಲಾಧಿಕಾರಿ ಇದೇ ಒಣಕಿಹಾಳ ( ಸತ್ಯಂಪೇಟ) ಗ್ರಾಮದಲ್ಲಿ ಜಿಲ್ಲಾಧಿಕಾರಿ ಹೋದಾಗ ಶಾಲೆ ಬಿಟ್ಟು ಮನೆಯಲ್ಲಿ ಇದ್ದ ಶಾಲಾ ಮಕ್ಕಳನ್ನು ಶಾಲೆಗೆ ತಮ್ಮ ವಾಹನದಲ್ಲಿಯೇ ಜಿಲ್ಲಾಧಿಕಾರಿ ಕರೆದೊಯ್ದು, ಶಿಕ್ಷಣದಿಂದ ಮಕ್ಕಳು ಹೊರಗುಳಿಯದಂತೆ ಕ್ರಮ ವಹಿಸಲು ದಿನಾಲು ಶಿಕ್ಷಕರು ಮನೆ ಮನೆಗೆ ಭೇಟಿ ನೀಡಬೇಕು ಎಂದು ಮುಖ್ಯ ಶಿಕ್ಷಕರಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.

ಶಾಲೆಯ ಮಕ್ಕಳಿಗೆ ಒದಗಿಸುತ್ತಿರುವ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿ, ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಲ್ಲಾ ಕೋಣೆಗಳ ಸ್ವಚ್ಛತೆಗೆ ಆದ್ಯತೆ ನೀಡಿ ಶೌಚಾಲಯ , ಕುಡಿಯುವ ನೀರು ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಮಕ್ಕಳೊಂದಿಗೆ ಸಮಾಲೋಚಿಸಿ ಯೋಗಕ್ಷೇಮವನ್ನು ವಿಚಾರಿಸಿದರು , ಅವರಿಗೆ ಅಡುಗೆ ತಯಾರಿಸಿ ಕೊಡುವ ಕೋಣೆಗಳಿಗೆ ಮತ್ತು ದಾಸ್ತಾನು ಕೊಠಡಿಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಅಧಿಕಾರಿ ಪ್ರಭುದೊರೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್, ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ ಶೇಷಲು ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here