ಧರ್ಮಸಿಂಗ್ ಕಲ್ಯಾಣ ಮಂಟಪ ಉದ್ಘಾಟನೆ ಡಿ. 25ರಂದು

0
59

ಕಲಬುರಗಿ: ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ 81ನೇ ಹುಟ್ಟು ಹಬ್ಬದ ಅಂಗವಾಗಿ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಡಿ. 25ರಂದು ಧರ್ಮಸಿಂಗ್ ಕಲ್ಯಾಣ ಮಂಟಪ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ತಿಳಿಸಿದರು.

ಈ ಸಮಾರಂಭವನ್ನು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದು, ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಜ್ಯೋತಿ ಬೆಳಗಿಸಲಿದ್ದಾರೆ. ಡಿ.ವಿ. ಗುರುಪ್ರಸಾದ ಅವರು ಬರೆದ ಧರ್ಮಾತ್ಮ, ನಾ ಕಂಡಂತೆ ಧರ್ಮಸಿಂಗ್ ಎಂಬ ಕೃತಿಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಬಿಡುಗಡೆ ಮಾಡಲಿದ್ದಾರೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

Contact Your\'s Advertisement; 9902492681

ಕೆಪಿಸಿಸಿ ಕಾಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಬಿ. ಖಂಡ್ರೆ, ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಆರ್. ಧೃವನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ, ಮುಗಳಕೋಡ-ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮಿಗಳು ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಎಂ.ಎಲ್.ಸಿಗಳಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಕೆಪಿಸಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ಮುಖಂಡರಾದ ನಾರಾಯಣರಾವ ಕಾಳೆ, ಸುಭಾಷ ರಾಠೋಡ್, ಲಿಂಗರಾಜ ತಾರ್‍ಫೈಲ್, ಬಸವರಾಜ ಭೀಮಳ್ಳಿ, ನೀಲಕಂಠರಾವ ಪಾಟೀಲ, ರಾಜಶೇಖರ ಸೀರಿ, ಬಾಬುರಾವ ಜಹಾಗೀರದಾರ ಸೇರಿದಂತೆ ಅನೇಕರು ಇದ್ದರು.

ಅತ್ಯಾಧನಿಕ ಅಡುಗೆ ಕೋಣೆ: 100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆಗೆ ಫೌಂಡೇಶನ್ ವತಿಯಿಂದ ಎರಡುವರೆ ಎಕರೆ ಜಾಗ ಸರ್ಕಾರಕ್ಕೆ ಹಸ್ತಾಂತರಿಸಲಾಗಿದ್ದು, ಅದರ ಕಟ್ಟಡ ಕಾಮಗರಿ ಕೂಡ ನಡೆದಿದೆ. ಮಾರ್ಚ್ ವೇಳೆಗೆ ಅದು ಕೂಡ ಉದ್ಘಾಟನೆಯಾಗಲಿದೆ. ಧರ್ಮಸಿಂಗ್ ಕಲ್ಯಾಣ ಮಂಟಪದ ಅಡುಗೆ ಮನೆ ಅತ್ಯಾಧುನಿಕ ಸಲಕರಣೆಗಳಿಂದ ಕೂಡಿದ್ದು, ಅವಶ್ಯಕವಿರುವ ಬಡವರಿಗೆ ಬೇಕಾದ ಅಕ್ಕಿಯನ್ನು ಉಚಿತವಾಗಿ ನೀಡಲಗುವುದು. ಈ ಯೋಜನೆ ನಿರಂತರವಾಗಿ ನಡೆಯಲಿದೆ. ಆದ್ಯತೆಯ ಮೇರೆಗೆ ಉಚಿತವಾಗಿ ಕಲ್ಯಾಣ ಮಂಟಪ ನೀಡಲಾಗುವುದು. ಜೇವರ್ಗಿ ತಾಲ್ಲೂಕಿನ ಸುತ್ತಲಿನ ಪ್ರದೇಶದವರು ಇದರ ಸದುಪ[ಯೋಗಪಡೆದುಕೊಳ್ಳಬೇಕು ಎಂದು ಡಾ. ಅಜಯಸಿಂಗ್ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here