ಕಸಾಪದಿಂದ ಶ್ರೀ ಡಾ. ಚೆನ್ನಬಸವ ಪಟ್ಟದ್ದೇವರು ಅವರ 133 ನೇ ಜಯಂತ್ಯೋತ್ಸವ

0
124

ಕಲಬುರಗಿ: ಭಾಲ್ಕಿಯ ಸಂಸ್ಥಾನ ಹಿರೇಮಠದ ಶ್ರೀ ಡಾ.ಚೆನ್ನಬಸವ ಪಟ್ಟದ್ದೇವರು ಅವರು ಎಲ್ಲೆಡೆ ಸದಾ ಕನ್ನಡತನವನ್ನು ಮೂಡಿಸುತ್ತಾ ಎಲ್ಲರಿಗೂ ಕನ್ನಡವನ್ನು ಕಲಿಸುತ್ತಲೇ ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದರು. ಅದರ ಜತೆಗೆ ಶರಣ ಸಂಸ್ಕøತಿ -ಶರಣತತ್ವದ ಪ್ರಸ್ತುತತೆ, ವೈಚಾರಿಕ ಪ್ರಖರತೆ ಕುರಿತು ಜನರಿಗೆ ಮನದಟ್ಟು ಮಾಡಿಕೊಡುವುದರ ಮೂಲಕ ಜನರಲ್ಲಿ ಪರಸ್ಪರ ಸೌಹಾರ್ದ ಭಾವವನ್ನು ಮೂಡಿಸುತ್ತಿದ್ದರು. ಕನ್ನಡ ಮತ್ತು ಶರಣತತ್ವ ಅವರ ಬದುಕಿನ ಉಸಿರಾಗಿಸಿಕೊಂಡಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ ಭಾಲ್ಕಿ ಹಿರೇಮಠದ ಶ್ರೀ ಡಾ. ಚೆನ್ನಬಸವ ಪಟ್ಟದ್ದೇವರು ಅವರ 133 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಶ್ರೀಗಳು ತಮ್ಮ ಬದುಕಿನುದ್ದಕ್ಕೂ ಕನ್ನಡ ನಾಡು-ನುಡಿಗೆ ತಮ್ಮದೇ ಆದ ಶ್ರೇಷ್ಠ ಕೊಡುಗೆಯನ್ನು ನೀಡಿ, `ಕನ್ನಡದ ಪಟ್ಟದ್ದೇವರು’ ಎಂದೇ ಪ್ರಖ್ಯಾತರಾದ ಪೂಜ್ಯರ ಜನ್ಮದಿನವನ್ನು ನಮ್ಮ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ಆಚರಿಸುವ ಮೂಲಕ ಅವರು ಕನ್ನಡಕ್ಕೆ ಸಲ್ಲಿಸಿದ್ದ ಸೇವೆಯನ್ನು ಸದಾ ಕಾಲ ಸ್ಮರಿಸುವ ಕಾರ್ಯ ಮಾಡಲು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಉತ್ತಮ ಹೆಜ್ಜೆ ಇಟ್ಟಿದಂತಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಸಾಹಿತಿಗಳಾದ ಶಕುಂತಲಾ ಪಾಟೀಲ ಜಾವಳಿ, ಕಮಲಾಕರ ಕುಲಕರ್ಣಿ ಮಳಖೇಡ ಪ್ರಮುಖರಾದ ರಾಜುಗೌಡ ನಾಗನಳ್ಳಿ, ಮಲ್ಲಿನಾಥ ನಾಗನಳ್ಳಿ, ಎಂ.ಎಸ್.ಪಾಟೀಲ ನರಿಬೋಳ, ಅಂಬಯ್ಯಾ ಗುತ್ತೇದಾರ, ರಾಜೇಂದ್ರ ಮಾಡಬೂಳ, ಗುಂಡಣ್ಣ ಡಿಗ್ಗಿ, ಸುನೀಲಕುಮಾರ ಯರಗೋಳ, ಜಗದೀಶ ದೇಶಪಾಂಡೆ, ಸಿದ್ದುಗೌಡ ಪಾಟೀಲ, ವಿಜಯಕುಮಾರ ಭೂಮಗಾರ, ಸುರೇಶ, ಹೆಚ್ ಎಸ್ ಬರಗಾಲಿ, ಬಸವಂತರಾಯ ಕೋಳಕೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here