ವಿದ್ಯಾಚೇತನ ಸಮಾವೇಶ ಉದ್ಘಾಟನೆ

0
8

ಭಾಲ್ಕಿ: ಅನುಭವ ಇಂದ್ರೀಯ ಸುಖಕ್ಕೆ ಸೀಮಿತವಾದರೆ ಅನುಭಾವವು ಇಂದ್ರಿಯಾತೀತ ಪರಮಸುಖ ನೀಡುವುದಾಗಿದೆ. ಬದುಕಿನಲ್ಲಿ ಉನ್ನತ ಕನಸಿನೊಂದಿಗೆ ಸಂಕಲ್ಪವೂ ಇರಬೇಕು. ಕಾಯಕಕ್ಕೆ ಅನೇಕ ಅವಕಾಶಗಳು ಇದ್ದರೂ ರೈತನಾಗಿ ಕೃಷಿ ಕಾಯಕ ಮಾಡುವುದು ಬಹಳ ಮಹತ್ವ ಇಂದಿಗೂ ಇದೆ. ಆ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರು ಗಮನಿಸಬೇಕಾಗಿದೆ ಎಂದು ಸಂಪಾದಕರು ಮತ್ತು ಸಿ.ಇ.ಓ. ವಿಸ್ತಾರ ಮೀಡಿಯಾ ಬೆಂಗಳೂರಿನ ಹರಿಪ್ರಕಾಶ ಕೋಣೆಮನೆ ನುಡಿದರು. ಅವರು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಹಾಗೂ ವಿದ್ಯಾಚೇತನ ಸಮಾವೇಶದಲ್ಲಿ ತಮ್ಮ ಅನುಭಾವ ನುಡಿಗಳನ್ನು ಹಂಚಿಕೊಂಡರು.

ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಅನುಭವಮಂಟಪ ಬಸವಕಲ್ಯಾಣ ಮತ್ತು ಪೂಜ್ಯ ಡಾ.ಮಹಾಂತಪ್ರಭು ಮಹಾಸ್ವಾಮಿಗಳು ವಿರಕ್ತಮಠ ಶೇಗುಣಸಿ ದಿವ್ಯಸನ್ನಿಧಾನ ವಹಿಸಿದ್ದರು. ಪೂಜ್ಯ ಗುರುಬಸವ ಪಟ್ಟದ್ದೇವರು ದಿವ್ಯ ನೇತೃತ್ವವಹಿಸಿ ಸದಾಶಯ ನುಡಿಗಳನ್ನು ನುಡಿದರು. ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು, ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು, ಪೂಜ್ಯ ಬಸವಲಿಂಗ ಸ್ವಾಮಿಗಳು ಪೂಜ್ಯ ಮಹಾದೇವಮ್ಮ ತಾಯಿ, ಪೂಜ್ಯ ಮೈತ್ರಾದೇವಿತಾಯಿ, ಪೂಜ್ಯ ನೀಲಾಂಬಿಕಾತಾಯಿ, ಸಮ್ಮುಖ ವಹಿಸಿದ್ದರು.

Contact Your\'s Advertisement; 9902492681

ಹೆಚ್ಚುವರಿ ಪೋಲಿಸ್ ಆಯುಕ್ತರು ಬೆಂಗಳೂರು ಐ.ಪಿ.ಎಸ್ ಅಧಿಕಾರಿ ಸಂದೀಪ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಶರಣದರ್ಶನ ಪ್ರವಚನಗೈದ ಪೂಜ್ಯ ಮಾತೆ ಶ್ರೀದೇವಿತಾಯಿ ಜಮಖಂಡಿ ಅವರಿಗೆ ಅಭಿನಂದಿಸಲಾಯಿತು. ಪ್ರಸಕ್ತ ಸಾಲಿನ ಕಾಯಕ ಪ್ರಶಸ್ತಿ ಗಣಪತರಾವ ಖೂಬಾ ಔರಾದ ಅವರಿಗೆ ನೀಡಿ ಗೌರವಿಸಲಾಯಿತು. ನಾಡೋಜ ಎಸ್. ಷಡಕ್ಷರಿ, ನಾಗಣ್ಣಗೌಡ, ಡಾ.ಬಲಬೀರಸಿಂಗ್ ಅವರಿಗೆ ವಿಶೇಷ ಗೌರವ ಸನ್ಮಾನ ನಡೆಯಿತು. ಮುಖ್ಯ ಅತಿಥಿಗಳಾಗಿ ಬಾಬು ವಾಲಿ, ಡಿ.ಕೆ.ಸಿದ್ರಾಮ, ದೇವಯ್ಯ ಗುತ್ತೆದಾರ, ಸದಾನಂದ ಜೋಶಿ, ಶಕುಂತಲಾ ಬೆಲ್ದಾಳೆ, ಚಂದ್ರಕಾಂತ ಶಾಬಾದಕರ, ಮಜರ ಹುಸೇನ್, ನೀಲಮ್ಮ ವಿ.ಕೆ.ಪಾಟೀಲ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೀದರ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಂದ ಷಟ್‍ಸ್ಥಲ ಧ್ವಜಾರೋಹಣ ನೆರವೇರಿತು. ಕರುಣಾ ಸಲಗರ ಅವರ ಗುಬ್ಬಚ್ಚಿ ಗೂಡು ಮತ್ತು ಶಕುಂತಲಾ ಬಚ್ಚಣ್ಣ ಅವರ ಗುರುಸ್ಮರಣೆ ಗ್ರಂಥಗಳು ಮತ್ತು ವಿವಿಧ ಸಂಘಟನೆಗಳ ಕಾಲೆಂಡರ್‍ಗಳು ಲೋಕಾರ್ಪಗೊಳಿಸಲಾಯಿತು. ಅಕ್ಕನಬಳಗದವರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮವರೆಗೆ ಬಸವಪ್ರಭಾತ ಸಂಚಲನ ಸಾಗಿಬಂತು.

ಶರಣೆ ಶುಭಾಂಗಿ ಚನ್ನಬಸವಣ್ಣ ಬಳತೆ ಬಸವಗುರುಪೂಜೆ ನೆರವೇರಿಸಿದರು. ಶಶಿಧರ ಕೋಸಂಬೆ ಸ್ವಾಗತಿಸಿದರು. ಯಲ್ಲನಗೌಡ, ಲೋಕನಾಥ ಚಾಂಗ್ಲೇರ, ವೀರಣ್ಣ ಕುಂಬಾರ, ಶಿವಾಜಿ ಸಗರ, ವಿನಾಯಕ ಚೌಧರಿ ಮುಂತಾದವರಿಂದ ವಚನ ಗಾಯನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು. ನವಲಿಂಗ ಪಾಟೀಲ ನಿರೂಪಿಸಿದರು. ವೀರಶೆಟ್ಟಿ ಬಾವುಗೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here