ಕಾಳಗಿ: ಮುಂಬರುವ 2023ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಷ್ಠೇ ಸತ್ಯವಾಗಿದ್ದು, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಅವರು, ಅಪಾರ ಅಂತರದ ಮತಗಳಿಂದ ಎರಡನೇ ಬಾರಿ ಗೆಲುವು ಸಾಧಿಸುವುದರೊಂದಿಗೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಯಾಗಲಿದೆ ಎಂದು ಕಾಳಗಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಕದಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಾಧ್ಯಂತ ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಕೆಲಸಗಳೆ ಡಾ.ಅವಿನಾಶ ಜಾಧವ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ, ಸಕ್ಕರೆ ಕಾರ್ಖಾನೆ ಪ್ರಾರಂಭ, ರೈತರ ಬಹುದಿನದ ಬೇಡಿಕೆಯಾಗಿರುವ ಐನಾಪೂರ ಏತ ನೀರಾವರಿ ಯೋಜನೆ ಅನುಷ್ಠಾನ, ಉತ್ತಮ ರಸ್ತೆಗಳು, ಕಾಳಗಿ ಗ್ರಾಪಂ. ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿದ್ದು, ಪಟ್ಟಣದಲ್ಲಿ ಬೃಹದಾಕಾರದ ಸುಸಜ್ಜಿತ ಬಸ್ ನಿಲ್ದಾಣ, ಕಾಳಗಿ ರೈತರ ನೀರಾವರಿ ಅಭಿವೃದ್ಧಿಪಡಿಸುವುದಕ್ಕಾಗಿ ರೌದ್ರಾವತಿ ನದಿಗೆ ಆರು ಕೋಟಿ ರೂಪಾಯಿಗಳ ವೆಚ್ಚದ ಬ್ರೀಜ್ ಕಂ. ಬ್ಯಾರೇಜ್ ನಿರ್ಮಾಣ, ಪಟ್ಟಣ, ಸಿಸಿ ರಸ್ತೆಗಳ ನಿರ್ಮಾಣ, ರಸ್ತೆ ಅಗಲಿಕರಣ, ವಿವಿಧ ಸಮೂದಾಯಗಳಿಗೆ ಭವನ ನಿರ್ಮಾಣಕ್ಕಾಗಿ ನಿವೇಶನಗಳ ಹಂಚಿಕೆ, ಮಠ-ಮಾನ್ಯಗಳಿಗೆ ಅನುದಾನ, ಸೇರಿದಂತೆ ಶಾಸಕ ಡಾ.ಅವಿನಾಶ ಜಾಧವ ಅವರ ನೂರಾರು ಜನಪರ ಕಾಳಜೀಯ ಯೋಜನೆಗಳು ಐತಿಹಾಕ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ತಿಳಿಸಿದರು.
ಬಿಜೆಪಿ ಯುವ ನಾಯಕ ರಮೇಶ ಕಿಟ್ಟದ, ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ ಜಾಧವ, ವೀರಶೈವ ಲಿಂಗಾಯತ ಮುಖಂಡ ವಿಷ್ಣುಕಾಂತ ಪರುತೆ, ಕೇಸು ಚೌವ್ಹಾಣ, ಕಾಳಶೆಟ್ಟಿ ಪಡಶೆಟ್ಟಿ, ತಾಪಂ.ಮಾಜಿ ಸದಸ್ಯ ಭೀಮರಾವ ರಾಠೋಡ, ಶರಣು ಚಂದಾ ಕೋಡದೂರ, ಜಗದೀಶ ಪಾಟೀಲ, ಕೃಷ್ಣ ಸಿಂಗಶೆಟ್ಟಿ, ಶ್ರೀನಿವಾಸ ಗುರುಮಠಕಲ್, ಮಂಜುನಾಥ ಹೆಬ್ಬಾಳ, ಮಹೇಂದ್ರ ಪೂಜಾರಿ, ಸುಂದರ ಡಿ.ಸಾಗರ ಇದ್ದರು.