ಭಾಲ್ಕಿ: 1 ನೇ ಜನೆವರಿ ರಂದು ಹೊಸ ವರ್ಷದ ಆಗಮನಕ್ಕೆ ಯುವಕರಲ್ಲಿ ಅತ್ಯಂತ ಹರ್ಷ, ಉಲ್ಲಾಸ, ಉತ್ಸಾಹ ತುಂಬಿರುತ್ತದೆ. ಹೊಸ ವರ್ಷದ ಹರ್ಷಕ್ಕೆ ನಾವು ನಮ್ಮ ಸಂಸ್ಕøತಿಯನ್ನು ಮರೆಯುವುದು ಬೇಡ. ಭಾರತೀಯ ಸಂಸ್ಕøತಿಯ ಮಹಾಪುರುಷರು ಮತ್ತು 12ನೇ ಶತಮಾನದ ಬಸವಾದಿ ಶರಣರು ದೇಹವೇ ದೇವಾಲಯವೆಂದು ಹೇಳಿದ್ದಾರೆ.
ಹೊಸ ವರ್ಷದ ಹರ್ಷದಲ್ಲಿ ನಾವು ನಮ್ಮ ದೇಹಕ್ಕೆ ಕೆಡಾಗುವ ಹಾಗೆ ನಡೆದುಕೊಳ್ಳುವುದು ಮತ್ತು ನಮ್ಮ ಪರಂಪರೆ ಇಲ್ಲದ ಆಚರಣೆಗಳನ್ನು ಮಾಡುವುದು ನಮಗೆ ಅನೇಕ ಅರ್ಥದಿಂದ ನಷ್ಟಗಳನ್ನು ಉಂಟು ಮಾಡುತ್ತವೆ. ಶರಣರ ದೃಷ್ಟಿಯಲ್ಲಂತು ಪ್ರತಿ ದಿನವೂ, ಪ್ರತಿ ಕ್ಷಣವು ಹೊಸತನದಿಂದಲೇ ಕೂಡಿರುತ್ತದೆ. ಈ ಕ್ಷಣ, ಈ ದಿನ ಮತ್ತೊಮ್ಮೆ ಬರುವುದಿಲ್ಲ. ಪಾಶ್ಚಾತ್ಯಯ ಸಂಸ್ಕøತಿಯ ಅನುಕರಣೆಯಿಂದ ನಾವು 1ನೇ ಜನೆವರಿ ಹೊಸ ವರ್ಷ ಆಚರಿಸುತ್ತವೆ. ಆದರೆ ಭಾರತೀಯ ಸಂಸ್ಕøತಿಯ ಪ್ರಕಾರ ಯುಗಾದಿ ನಮಗೆ ಹೊಸ ವರ್ಷದ ಆಚರಣೆಯನ್ನು ತಿಳಿಸುತ್ತದೆ.
ಅದಕ್ಕಾಗಿ ನಾವು ಹೊಸ ವರ್ಷದ ನೆಪದಲ್ಲಿ ಇಲ್ಲಸಲ್ಲದ ಆಚರಣೆಗಳನ್ನು ಮಾಡದೇ ನಮ್ಮಲ್ಲಿ ಜೀವನುತ್ಸಾಹ ತುಂಬುವ ರಚನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಮಾಡಿದರೆ ಅದು ನಮಗೂ ಮತ್ತು ಸಮಾಜಕ್ಕೂ ಹಿತಕರವಾಗಿ ಪರಿಣಮಿಸುತ್ತದೆ. ಆ ದಿಶೆಯಲ್ಲಿ ವಿಶೇಷವಾಗಿ ಯುವಕರು ಹೊಸ ವರ್ಷದ ಹರ್ಷಕ್ಕೆ ನಮ್ಮ ಸಂಸ್ಕøತಿಯ ಸ್ಪರ್ಶ ನೀಡುವ ಮೂಲಕ ಆಚರಿಸಬೇಕೆಂದು ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.