ಶ್ರೀಗಂಧ ಮರ ಆಧಾರಿತ ಕೃಷಿಗೆ ಒತ್ತು ನೀಡಿ

0
132

ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಮತ್ತು ಬೆಂಗಳೂರಿನ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಸಹಯೋಗದೊಂದಿಗೆ ಜರುಗಿದ ಒಂದು ದಿನದ ಶ್ರೀಗಂಧ ಮರ ಆಧಾರಿತ ಅರಣ್ಯ ಕೃಷಿ ಘಟಕಗಳು ಕುರಿತು ತರಬೇತಿ ಕಾರ್ಯಕ್ರಮವನ್ನು ಕಲಬುರಗಿ ಅರಣ್ಯ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಎಸ್. ವೆಂಕಟೇಶನ್ (ಐ.ಎಫ್.ಎಸ್) ರವರು ಉದ್ಘಾಟಿಸಿ ಮಾತನಾಡಿದರು.

ಉತ್ಕøಷ್ಟ ಗುಣಮಟ್ಟದ ಶ್ರೀಗಂಧದ ಉತ್ಪನ್ನಕ್ಕೆ ಹೆಸರು ವಾಸಿಯಾಗಿರುವ ಕರ್ನಾಟಕ ರಾಜ್ಯದ ಶ್ರೀಗಂಧ ಬೆಳೆಯಲ್ಲಿ ಹೆಚ್ಚಿನ ಎಣ್ಣೆ ಅಂಶವಿರುವುದರಿಂದ ಜಗತ್ತಿನಲ್ಲಿಯೇ ಪ್ರಸಿದ್ದಿಯಾಗಿ ಬೇಡಿಕೆಯೂ ಹೆಚ್ಚಿದೆ ಹೀಗಾಗಿ ಶ್ರೀಗಂಧದ ಮರ ಬೆಳೆ ಕುರಿತು ಜಾರಿಯಲ್ಲಿರುವ ನಿರ್ಬಂಧನೆಗಳನ್ನು ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸಡಿಲಗೊಳಿಸಿ ಸಾರ್ವತ್ರಿಕವಾಗಿ ಬೆಳೆಯಲು ಅನುವು ಮಾಡಿಕೊಡಲಾಗಿದೆ ಎಂದರು.

Contact Your\'s Advertisement; 9902492681

ಬೆಂಗಳೂರಿನ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಬಿ.ಎನ್. ದಿವಾಕರ್ ರವರು ಮಾತನಾಡಿ, ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶ್ರೀಗಂಧವನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ನಮ್ಮ ನಾಡನ್ನು ಗಂಧದ ನಾಡೆಂದು ಕರೆಯುತ್ತಾರೆ. ಇಲ್ಲಿನ ಶ್ರೀಗಂಧದ ಹಾರ್ಟ್‍ವುಡ್‍ಗೆ ಅಧಿಕ ಬೆಲೆಯಿದ್ದು ಇದೊಂದು ಆರ್ಥಿಕ ಬೆಳೆಯಾಗಿದೆ. ಹೀಗಾಗಿ ರೈತರು ಆರ್ಥಿಕವಾಗಿ ಸಬಲರಾಗಲು ಕೆವಿಕೆಯ ಸಹಯೋಗದೊಂದಿಗೆ ಶ್ರೀಗಂಧ ಬೇಸಾಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾಡನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ರಾಜು ಜಿ ತೆಗ್ಗಳ್ಳಿ ರವರು ವೈಜ್ಞಾನಿಕವಾಗಿ ಮರ ಬೇಸಾಯ ಪದ್ದತಿ ಅದರಲ್ಲೂ ಶ್ರೀಗಂಧ ಆಧಾರಿತ ಬೇಸಾಯವನ್ನು ಅಳವಡಿಸಿಕೊಳ್ಳುವುದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗಾಗಿ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶ್ರಿಗಂಧ ಬೆಳೆಯನ್ನು ಹೂಡಿಕೆಯ ಬೆಳೆಯಾಗಿ ಪರಿಗಣಿಸಿ ಲಾಭದಾಯಕವಾಗಿ ಅರಣ್ಯ ಕೃಷಿ ಮಾಡಬಹುದು. ಈ ನಿಟ್ಟಿನಲ್ಲಿ ಈ ತರಬೇತಿಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ನಂತರ ಜರುಗಿದ ತಾಂತ್ರಿಕ ತರಬೇತಿ ಅವಧಿಯಲ್ಲಿ ಡಾ. ಬಿ.ಎನ್. ದಿವಾಕರ್‍ರವರು ಲಭ್ಯವಿರುವ ಯೋಜನೆಗಳನ್ನು ಬಳಸಿಕೊಂಡು ಶ್ರೀಗಂಧ ಬೆಳೆಯ ಲಾಭ ನಷ್ಟದ ಪಕ್ಷಿ ನೋಟದ ಕುರಿತು ಮಾಹಿತಿ ನೀಡಿ ರೈತರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಇನ್ನೋರ್ವ ವಿಜ್ಞಾನಿಗಳಾದ ಡಾ. ಎಂ.ವಿ. ದೊರೈ ರವರು ತೋಟ ಪಟ್ಟಿ ಮತ್ತು ಶ್ರೀಗಂಧ ಅರಣ್ಯ ಕೃಷಿ ಕುರಿತು ಮತ್ತು ಶ್ರೀಗಂಧ ನರ್ಸರಿ ತಂತ್ರಜ್ಞಾನಗಳ ಮಾಹಿತಿಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ರವರಾದ ಡಾ. ಎಂ.ಎಂ. ಧನೋಜಿಅಧ್ಯಕ್ಷತೆಯನ್ನು ವಹಿಸಿದರು ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಎಂ. ದೊಡಮನಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ ಬಿ.ವಿ ರವರು ಶ್ರೀಗಂಧ ಬೆಳೆಯಲು ಬೇಕಾದ ಮಣ್ಣಿನ ಗುಣಧರ್ಮಗಳು ಮತ್ತು ಮಣ್ಣು ಪರೀಕ್ಷೆಯ ಕುರಿತು ರೈತರೊಂದಿಗೆ ಚರ್ಚಿಸಿದರು.

ಕಾರ್ಯಕ್ರಮವನ್ನು ಡಾ. ಜಹೀರ್ ಅಹೆಮದ್ ರವರು ನಿರೂಪಿಸದರೇ, ಡಾ. ಮಂಜುನಾಥ ಪಾಟೀಲ್ ಸ್ವಾಗತಿಸಿದರು ಮತ್ತು ಡಾ. ಯುಸುಫ್‍ಅಲಿ ವಂದಿಸಿದರು. ಕೇಂದ್ರದ ಸಿಬ್ಬಂದಿ ವರ್ಗದವರು ಮತ್ತು ಜಿಲ್ಲೆಯ ಎಲ್ಲಾ ತಾಲೂಕಗಳಿಂದ ಆಗಮಿಸಿದ ಸುಮಾರು 120ಕ್ಕೂ ಹೆಚ್ಚು ರೈತರು ಭಾಗವಹಿಸಿ ತರಬೇತಿಯ ಸದುಪಯೋಗಪಡಿಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here