ಎನ್ ಪಿಎಸ್ ನೌಕರರ ಹೋರಾಟಕ್ಕೆ ಎಸ್ಎಫ್ಐ ಬೆಂಬಲ

0
41

ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಎನ್ ಪಿ ಎಸ್ ನೌಕರರ ಪ್ರತಿಭಟನೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ನಿಯೋಗ ಇಂದು ಬೆಂಬಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಅವರು, ನೌಕರರ ನಿವೃತ್ತಿ ನೆಮ್ಮದಿ ಜೀವನವನ್ನು ಹಾಳು ಮಾಡಿದ ಎನ್ ಪಿ ಎಸ್ ಯೋಜನೆಯನ್ನು ರಾಜ್ಯ ಸರಕಾರ ವಾಪಸ್ ಪಡೆದು ಪುನಃ ಓ ಪಿ ಎಸ್ ಯೋಜನೆ ಜಾರಿಮಾಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಸಂವಿಧಾನ ಶಿಲ್ಪಿ ಡಾ.ಬಿ.ಆರ್, ಅಂಬೇಡ್ಕರ್ ರವರ ಮಾತಿನಂತೆ ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಸೇವನೆ ಮಾಡಿದವರು ಘರ್ಜಿಸಲೇಬೇಕು. ಇಲ್ಲಿ ಎಲ್ಲಾ ಉತ್ತಮ ಶಿಕ್ಷಣ ಪಡೆದ ನೌಕರರು ಇಂದು ಅಂಬೇಡ್ಕರ್ ರವರ ಹೇಳಿಕೆಯನ್ನು ಈ ಹೋರಾಟ ನಿಜಾವಾಗಿಸಿದ್ದಾರೆ ಎಂದು ಪ್ರತಿಭಟನಾ ನಿರತ ಹೋರಾಟಗಾರರ ಪ್ರಶಂಶಿಸಿದರು.

1990 ರ ನಂತರ ಉದಾರೀಕರಣ, ಜಾಗತೀಕರಣ ಪ್ರಭಾವದಿಂದಾಗಿ ವಿಶ್ವಸಂಸ್ಥೆ ಮತ್ತು ಐಎಮ್ ಎಫ್ ನ ಭಾಗವಾಗಿ ಇಂದು ಏಷ್ಯಾ ಖಂಡದ ತೃತೀಯ ದೇಶಗಳ ಮೇಲೆ ಬಂಡವಾಳಶಾಹಿ ರಾಷ್ಟ್ರಗಳ ತಾಳಕ್ಕೆ ತಕ್ಕಂತೆ ಕುಣಿದ ನಮ್ಮಂತ ದೇಶಗಳ ಜನರ ಮೇಲೆ ಹೇರತೊಡಿಗಿದ್ದಾರೆ. ಇದರಿಂದ ಶಿಕ್ಷಣ, ಆರೋಗ್ಯ ಹಾಗೂ ನೌಕರರ ಪಿಂಚಣಿ ಸೌಲಭ್ಯ ಹಾಗೂ ರಾಜ್ಯದ ಜನರ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಇರುವ ಅನೇಕ ಯೋಜನೆಗಳನ್ನು ಆಳುವ ಸರ್ಕರಗಳು ಕಡಿತ ಮಾಡವುದು, ರದ್ದು ಮಾಡುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ದೇಶದ ಶ್ರೀಮಂತರಿಗೆ, ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಕೋಟ್ಯಾಂತರ ರೂಪಾಯಿ ಸಾಲವನ್ನು ಮನ್ನಾ ಮಾಡುವ ಮೂಲಕ ಬಂಡವಾಳಶಾಹಿಗಳ ಬೂಟು ನೆಕ್ಕುವ ಕೆಲಸವನ್ನ ಮಾಡುತ್ತಿವೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಜನರ ತೆರಿಗೆ ಹಣವನ್ನು ಸರಕಾರ ಮನ ಬಂದಂತೆ ಖರ್ಚು ಮಾಡಿ ಫೋಲು ಮಾಡುತ್ತಿವೆ. ಚುನಾಯಿತ ಪ್ರತಿನಿಧಿಗಳಾದ ಶಾಸಕ, ಸಚಿವ, ಸಂಸದರು ತಮ್ಮ ವೇತನ, ಸಾರಿಗೆ, ಮನೆ ಬಾಡಿಗೆ, ಪಿಂಚಣಿ, ಪ್ರಯಾಣ ಭತ್ತೆಗಳನ್ನ ಎಲ್ಲಾ ಪಕ್ಷದ ಶಾಸಕರು ಪಕ್ಷಾತೀತವಾಗಿ ವೇತನವನ್ನು ದುಪ್ಪಟ್ಟು ಮಾಡಿಕೊಂಡರು.

ಈ ಸರಕಾರದಲ್ಲಿ ನಿರುದ್ಯೋಗೆಗಳಿಗೆ ಉದ್ಯೋಗ ಇಲ್ಲ, ಸರಕಾರಿ ನೌಕರರಿಗೆ ಭದ್ರತೆ ಇಲ್ಲ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ತಾ ಇಲ್ಲ. ಇದೆಲ್ಲದಕ್ಕೂ ಒಂದೇ ಪರಿಹಾರ ಶಿಕ್ಷಣ ಸಂಘಟನೆ ಹೋರಾಟ ಡಾ. ಬಿಆರ್ ಅಂಬೇಡ್ಕರ್, ಗಾಂಧೀಜಿ ಭಗತ್ ಸಿಂಗ್ ಅವರು ಹಾಕಿಕೊಟ್ಟ ಹೋರಾಟದ ಹಾದಿಯನ್ನು ಹಿಡಿಯೋಣ, ಗೆಲುವನ್ನು ಪಡೆಯೋಣ ಎಂದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಸಂಘಟನೆಯ ರಾಜ್ಯ ಪದಾಧಿಕಾರಿಗಳಾದ ಭೀಮನ ಗೌಡ, ರಮೇಶ ವೀರಾಪೂರು, ಗಣೇಶ್ ರಾಥೋಡ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here