ಪೋತೆ, ಶರ್ಮಾಗೆ ಪ್ರಶಸ್ತಿ ಪ್ರದಾನ

0
156

ಕಲಬುರಗಿ: ಸಾಮಾಜಿಕ ಅಭಿವೃದ್ಧಿಗೆ ನಾಂದಿ ಹಾಡುವ ಮೂಲಕ ಜನರಲ್ಲಿ ಎಚ್ಚರಿಕೆಯನ್ನು ತುಂಬುವ ಕೆಲಸ ಇಂದಿನ ಅಗತ್ಯ ಎಂದು ಗುಲ್ಬರ್ಗ ವಿವಿ ಕುಲಪತಿ ಪೆÇ್ರ. ದಯಾನಂದ ಅಗಸರ ಕರೆ ನೀಡಿದರು.

ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿμÁ್ಠನದ ವತಿಯಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2022ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ ಸ್ಥಾನಮಾನ ತಂದು ಕೊಟ್ಟ ಗಳಗನಾಥ ಮತ್ತು ರಾಜಪುರೋಹಿತರು ಕನ್ನಡದ ಸ್ಥಾನಮಾನ ಮತ್ತು ಅಸ್ಮಿತೆಯನ್ನು ಉಳಿಸಿ ಬೆಳೆಸಿದ ಕೀರ್ತಿ ಹೊಂದಿದ್ದಾರೆ. ಅವರ ಹೆಸರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಕಲಬುರಗಿಯಲ್ಲಿ ಆಯೋಜಿಸಿರುವುದು ಶ್ಲಾಘನೀಯವಾದದು ಕೆಲಸ ಎಂದರು.

Contact Your\'s Advertisement; 9902492681

ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಗೆ ಎರಡು ಚಿನ್ನದ ಪದಕ ಪ್ರಶಸ್ತಿ ಕೊಡುವುದು, ವಿಚಾರ ಸಂಕಿರಣ, ಸಂವಾದ, ಸಮಾವೇಶ ಮುಂತಾದ ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿವಿಯೊಂದಿಗೆ ಪ್ರತಿμÁ್ಠನವು ಒಡಂಬಡಿಕೆ ಮಾಡಿಕೊಳ್ಳುವ ವಿಷಯ ಮಂಡಿಸಿದೆ. ಇದು ಗುಲ್ಬರ್ಗ ವಿವಿಯ ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆಗೆ ಉತ್ತೇಜನ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಕುಲಪತಿ ಪೆÇ್ರ. ಡಿ.ಬಿ. ನಾಯಕ ಮಾತನಾಡಿ, ಸಾಹಿತ್ಯ ಮತ್ತು ಕಲೆ ಸಾಂಸ್ಕೃತಿಕ ವಲಯ ರೂಪಿಸುವುದರ ಜೊತೆಗೆ  ಚರಿತ್ರೆ ಕಟ್ಟಿ ಕೊಡುವ, ಮನುಷ್ಯನನ್ನು ರೂಪಿಸುವ ಕೆಲಸ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರ ಕಲಸು ಮೇಲೋಗರಗೊಂಡಿದ್ದು, ಸೃಜನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಟ್ ಆ್ಯಂಡ್ ಪೇಸ್ಟ್ ಕೆಲಸ ನಡೆಯುತ್ತಿದೆ. ಪ್ರತಿಭೆಯ ಜೊತೆಗೆ ಪ್ರಯತ್ನ ಕೂಡ ಬಹಳ ಮುಖ್ಯ ಎಂದರು.

ಭೌತಿಕ ಸಂಪತ್ತಿಗಿಂತ ಭೌದ್ಧಿಕ ಸಂಪತ್ತು ಬಹಳ ಅಗತ್ಯವಿದ್ದು, ಮಾನವೀಯ ಮೌಲ್ಯ ಬೆಳೆಸುವ ಕಾರ್ಯ ಸಾಹಿತ್ಯ, ಶಿಕ್ಷಣ ಕ್ಷೇತ್ರದಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಇದೇವೇಳೆಯಲ್ಲಿ ಗಳಗನಾಥ ಕಾದಂಬರಿಕಾರ ಪ್ರಶಸ್ತಿ ಪಡೆದ ಗಜಾನನ ಶರ್ಮಾ, ನಾ.ಶ್ರೀ. ರಾಜಪುರೋಹಿತ ಸಂಶೋಧಕ ಪ್ರಶಸ್ತಿ ಪಡೆದ ಪೆÇ್ರ. ಎಚ್.ಟಿ. ಪೆÇೀತೆ ಅವರಿಗೆ ತಲಾ 50 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ಗಜಾನನ ಶರ್ಮಾ ಕುರಿತು ಸಿಯುಕೆ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ, ಪೆÇ್ರ. ಎಚ್.ಟಿ. ಪೆÇೀತೆ ಕುರಿತು ವಿಶ್ರಾಂತ ಕುಲಪತಿ ಪೆÇ್ರ. ಮಲ್ಲೇಪುರಂ ವೆಂಕಟೇಶ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿμÁ್ಠನದ ಅಧ್ಯಕ್ಷ ದುಷ್ಯಂತ ನಾಡಗೌಡ ಅವರು ಪ್ರಾಸ್ತಾವಿಕ ಮಾತನಾಡಿ, ಪ್ರತಿμÁ್ಠನದ ಧ್ಯೇಯ ಧೋರಣೆಯನ್ನು ಸಭಿಕರೆದುರಿಗೆ ಪ್ರಸ್ತಾಪಿಸಿದರು.

ಪ್ರಶಸ್ತಿ ಪುರಸ್ಕೃತರಾದ  ಗಜಾನನ ಶರ್ಮಾ, ಪೆÇ್ರ. ಎಚ್.ಟಿ. ಫೆÇತೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರತಿμÁ್ಠನದ ಸದಸ್ಯರಾದ ವಸಂತ ರಾಜಪುರೋಹಿತ, ಹನುಮಂತಗೌಡ ಗೊಲ್ಲರ ವೇದಿಕೆಯಲ್ಲಿದ್ದರು. ಡಾ. ರೇವಯ್ಯ ಒಡೆಯರ ನಿರೂಪಿಸಿದರು. ಗುಲ್ಬರ್ಗ ವಿವಿ ಸಂಗೀತ ವಿಭಾಗದ ಸಿದ್ದಾರ್ಥ ಚಿಮ್ಮಾಯಿದ್ಲಾಯಿ ಹಾಗೂ ಸಂಗಡಿಗರು ಪ್ರಾರ್ಥನೆಗೀತೆ ಹಾಡಿದರು.

ಕನ್ನಡ ಸಾಹಿತ್ಯ, ಸಂಶೋಧನೆಯನ್ನು ಶ್ರೀಮಂತಗೊಳಿಸಿದವರು ಗಳಗನಾಥ ಮತ್ತು ರಾಜಪುರೋಹಿತ. ಅವರಿಬ್ಬರ ಹೆಸರಿನ ನಾಡಿನ ಪ್ರತಿಷ್ಠಿತ ಪ್ರತಿμÁ್ಠನ ಇದು. ಹಿರಿಯ ತಲೆ ಮಾರಿನವರು ಮಾಡಿದ ಕೆಲಸವನ್ನು ಹೊಸ ತಲೆಮಾರಿನವರೊಂದಿಗೆ ಬೆಸೆಯುವ ಕೆಲಸ ಈ ಪ್ರತಿμÁ್ಠನ ಮಾಡುತ್ತಿದೆ. -ಪ್ರೊ. ಮಲ್ಲೇಪುರಂ ವೆಂಕಟೇಶ ಮೂರ್ತಿ, ವಿಶ್ರಾಂತ ಕುಲಪತಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here