ಭಾರತದಲ್ಲಿ ಮಹಿಳಾ ಶಿಕ್ಷಣಕ್ಕೆ ಪುಲೆ ದಂಪತಿಗಳ ಕೊಡುಗೆ ಅನನ್ಯ

0
11

ಚಿಂಚೋಳಿ: ಆಧುನಿಕ ಸ್ತ್ರೀ ವಾದಿ ಮತ್ತು ಸಾಮಾಜಿಕ ಸುದಾರಣೆ ಶಿಕ್ಷಣ ಸಾಕ್ಷರತೆ ಕ್ಷೇತ್ರದಲ್ಲಿ ಹಾಗೂ ಮಹಿಳೆಯರ ಉನ್ನತಿಗಾಗಿ ಹಗಲಿರುಳೆನ್ನದೆ ಮಹಳೆಯರ ಕಲ್ಯಾಣಕ್ಕಾಗಿ ಜಾಗೃತಿ ಮೂಡಿಸಿದ ಸಾವಿತ್ರಿಬಾಯಿ ಪುಲೆಯವರ ಕೊಡುಗೆ ಅನನ್ಯವಾಗಿದೆ ಎಂದು ಶಿಕ್ಷಣ ಇಲಾಖೆಯ ಸಿ.ಅರ್.ಪಿ ಶಶಿಕಲಾ ರವರು ಸರಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಬಾಂಸೆಪ ಬಹುಜನ ವಿದ್ಯಾರ್ಥಿ ಪೆಡ್ರೇಷನ್ ಆಪ್ ಈ ಕ್ವಾಲಿಟಿ ಸಂಘಟನೆಯ ವತಿಯಿಂದ ಹಮ್ಮಿಕೊಂಡರು.

ಸಾವಿತ್ರಿಬಾಯಿ ಪುಲೆಯವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಂದುವರೆದು ಸಾವಿತ್ರಿಬಾಯಿ ಪುಲೆಯವರು ಮಹಿಳೆಯರಿಗೆ ಶಿಕ್ಷಣ ನೀಡಲು ತನ್ನ ಪತಿಯೊಂದಿಗೆ ಮನೆಯನ್ನು ತ್ಯಜಿಸಿದರು ವಿಧವೆ ಮಹಿಳೆಯರಿಗಾಗಿ ಬಾಣಂತಿಯರಿಗಾಗಿ ಸೇವಾ ಕೇಂದ್ರಗಳನ್ನು ತೆರೆದರು ಬಾಲ್ಯವಿವಾಹದ ವಿರುದ್ದ ಅಭಿಯಾನ ನಡೆಸಿದರು ವಿದವೆಯರ ಮರುವಿವಾಹವನ್ನು ಬೆಂಬಲಿಸಿದರು ಹೀಗೆ ಮಹಿಳಾ ಜಾಗೃತಿಗಾಗಿ ಸಾವಿತ್ರಿಬಾಯಿ ಪುಲೆಯವರು ನೀಡಿದ ಸಾಮಜಿಕ ಕೊಡುಗೆ ಅವಿಸ್ಮರಣಿಯವಾಗಿದೆ ಎಂದು ಸುದಿರ್ಗವಾಗಿ ಉಪನ್ಯಾಸ ನೀಡಿದರು.

Contact Your\'s Advertisement; 9902492681

ನಂತರ ಮುಖ್ಯ ಅತಿಥಿಗಳಾಗಿ ಮಾರುತಿ ಗಂಜಗಿರಿ ಆಶ್ರಮ ಶಾಲೆಯ ಸಹ ಶಿಕ್ಷಕರಾದ ಬಸಂತ ಮಲ್ಲಿಕಾರ್ಜುನ ಆಗಮಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಮಾಜ ಕಲ್ಯಾಣ ಕಾರ್ಯಾಲಯದ ಅಧಿಕ್ಷಕರಾದ ಜನ್ನತಬಿ ಯವರು ವಹಿಸಿದರು ಮೌನೇಶ ಗಾರಂಪಳ್ಳಿ ಹರ್ಷವರ್ಧನ ಚಿಮ್ಮನಕಟ್ಟಿ ನಿರೊಪಿಸಿದರೆ ಕುಮಾರಿ ಭವಾನಿ ಪ್ರಾ್ರಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here