ಯಡ್ರಾಮಿ ಹಿಂದು ಸಮಾವೇಶ; ಪ್ರಚೋದನಕಾರಿ ಭಾಷಣ ಮುಕ್ತವಾಗಿರಲಿ | ಶಾಸಕ

0
17

ಜೇವರ್ಗಿ: ಯಡ್ರಾಮಿಯಲ್ಲಿ ನಾಳೆ ಜ. 12 ರಂದು ನಡೆಯುವ ಹಿಂದು ಸಮಾವೇಶ ಪ್ರಚೋದನಕಾರಿ ಭಾಷಣಗಳಿಂದ ದೂರವಾಗಿರಲಿ ಎಂದು ಜೇವರ್ಗಿ ಶಾಸಕರು, ವಿರೋಧ ಪಕ್ಷ ಮುಖ್ಯ ಸಚೇತಕರು ಆಗಿರುವ ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಹೇಳಿಕೆ ನೀಡಿರುವ ಅವರು ಆಂದೋಲಾ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಸದರಿ ಹಿಂದು ಸಮಾವೇಶ ಸಂಘಟಿಸಲ್ಪಟ್ಟಿದೆ. ಆದರೆ ಈ ಸಮಾವೇಶದ ವೇದಿಕೆಯಿಂದ ಯಾವುದೇ ಕೋಮು, ಜನ ಸಮುದಾಯವನ್ನೇ ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣಗಳು ಯಾವುದೇ ಕಾರಣಕ್ಕೂ ಕೇಳಿ ಬರೋದು ಬೇಡವೆಂದು ಅವರು ಹೇಳಿದ್ದಾರೆ.

Contact Your\'s Advertisement; 9902492681

ಈಗಾಗಲೇ ತಾವು ಈ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಇಶಾ ಪಂತ ಅವರೊಂದಿಗೆ ಮಾತುಕತೆ ನಡೆಸಿರುವೆ. ಇದಲ್ಲದೆ ಈಶಾನ್ಯ ವಲಯ ಐಜಿಪಿಯವರೊಂದಿಗೂ ಮಾತುಕತೆ ನಡೆಸಿದ್ದು ಸಮಾವೇಶ ಯಾವುದೇ ಕಾರಣಕ್ಕೂ ಜೇವರ್ಗಿಯ ಜಾತ್ಯತೀತ ಪರಂಪರೆಗೆ ಧಕ್ಕೆ ತರದಿರುವಂತೆ ನೋಡಕೊಳ್ಳಬೇಕೆಂದು ಹೇಳಿದ್ದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲೇ 224 ವಿಧಾನ ಸಬಾ ಕ್ಷೇತ್ರಗಳಲ್ಲಿ ಜೇವರ್ಗಿಗೆ ಜಾತ್ಯತೀತ ಕ್ಷೇತ್ರವೆಂಬ ಖಾತಿ ಇದೆ. ಜೇವರ್ಗಿಯಲ್ಲಾಗಲಿ, ಯಡ್ರಾಮಿಯಲ್ಲಾಗಲಿ ದಶಕಗಳಿಂದಲೂ ಯಾವುದೇ ಜಾತಿ- ಕೋಮಿನ ವಿವಾದ ಇಲ್ಲ. ಜೊತೆಗೇ ಎಲ್ಲಾ ಧರ್ಮದವರು ಸಹಬಾಳ್ವೆ ಮಾಡುತ್ತಿರುವ ಪವಿತ್ರ ತಾಲೂಕೂಗಳೆಂದರೆ ಜೇವರ್ಗಿ ಹಾಗೂ ಯಡ್ರಾಮಿ ಆಗಿವೆ. ಶರಣು, ಸಂತರು, ಸೂಫಿಗಳು, ವಚನಕಾರರ ನಾಡಾಗಿರುವ ಇಲ್ಲಿ ಸಾಮರಸ್ಯ ಬೆಳೆದು ಬಂದಿದೆ. ಅದನ್ನು ಪ್ರಚೋದನಕಾರಿ ಮಾತುಗಳಿಂದ ಮುಕ್ಕಾಗಿಸುವಂತಹ ಕೆಲಸ ಯಾರೂ ಮಾಡೋದು ಬೇಡವೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here