`ಸಂಕ್ರಾಂತಿಯ ಸಮ್ಮಿಲನ’, ಶ್ರೀ ಮೌನೇಶ್ವರರ ವಚನ ಪುಸ್ತಕ ಜನಾರ್ಪಣೆ 15ಕ್ಕೆ

0
168

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಕ್ರಮಣದ ಪ್ರಯುಕ್ತ ಜ.15 ರ ಬೆಳಗ್ಗೆ 11.30 ಕ್ಕೆ ನಗರದ ಕನ್ನಡ ಭವನದಲ್ಲಿ `ಸಂಕ್ರಾಂತಿಯ ಸಮ್ಮಿಲನ’ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಸಂಗ್ರಹಿಸಿರುವ ಭಾವೈಕ್ಯತೆಯ ಹರಿಕಾರ ಶ್ರೀ ಮೌನೇಶ್ವರರ ವಚನಗಳು ಎಂಬ ಕಿರು ಪುಸ್ತಕವನ್ನು ಜನಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ ತಿಳಿಸಿದ್ದಾರೆ.

16 ನೆಯ ಶತಮಾನದ ಉತ್ತರಾರ್ಧದಲ್ಲಿ ಆಗಿ ಹೋದ ಭಾವೈಕ್ಯತೆಯ ಹರಿಕಾರ ಶ್ರೀ ಮೌನೇಶ್ವರರು ಆಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಜೀವನವನ್ನು ತಿದ್ದಲು ನಿರ್ಭಿಡೆಯಿಂದ ಸಾರಿದ ಕೆಲವು ವಚನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹಿಡಿದಿಟ್ಟು ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಈ ಪುಸ್ತಕದ ಮಾಡಿದ್ದಾರೆ.

Contact Your\'s Advertisement; 9902492681

ಜತೆಗೆ ಸಂಕ್ರಾಂತಿ ಪ್ರಯುಕ್ತವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಹಯೋಜಿಸುವ ಮೂಲಕ ಭಾರತೀಯ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ.
ಕಂಪ್ಯೂಟರ್‍ಗೆ ಕನ್ನಡ ಕಲಿಸಿದ ಹಾಗೂ ಮಾಜಿ ಬಾಹ್ಯಕಾಶ ವಿಜ್ಞಾನಿ ಪ್ರೊ. ಬಿ.ಎ.ಪಾಟೀಲ ಮಹಾಗಾಂವ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here