ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಅನುಷ್ಠಾನ: ಹೆಚ್.ಡಿ.ಕೆ

0
17

ಶಹಾಬಾದ:ಸ್ವಂತ ಬಲದ ಸರ್ಕಾರ ರಚನೆ ಮಾಡುವ ಅವಕಾಶವನ್ನು ಜನರು ಜೆಡಿಎಸ್‍ಗೆ ನೀಡಿದರೆ, ಐದು ವರ್ಷಗಳಲ್ಲಿ ಪಂಚರತ್ನ ಯೋಜನೆಗಳನ್ನುಅನುಷ್ಠಾನಗೊಳಿಸುತ್ತೆನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಅವರು ಪಂಚರತ್ನ ರಥಯಾತ್ರೆ ಸೇಡಂ ವಿಧಾನಸಭೆ ಚುನಾವಣಾ ಪ್ರಚಾರ ಕೈಗೊಂಡು ಅಫಜಲಪುರ ಮತಕ್ಷೇತ್ರದ ಪ್ರಚಾರಕ್ಕೆ ಹೋಗುವ ಮಾರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಎಚ. ಡಿ. ಕುಮಾರಸ್ವಾಮಿ ರವರನ್ನು ಶಹಾಬಾದನ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಭವ್ಯವಾಗಿ ಸ್ವಾಗತಿಸಿ ಮತ್ತು ಸನ್ಮಾನಿಸಿ ಬರಮಾಡಿಕೊಂಡರು.

Contact Your\'s Advertisement; 9902492681

ಜನಸಂಪರ್ಕ ಸಭೆ, ರ್ಯಾಲಿ, ಗ್ರಾಮ ವಾಸ್ತವ್ಯದ ಮೂಲಕ ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಲಾಗುತ್ತಿದೆ ಎಂದರು.

ಮನವಿಗಳ ಮಹಾಪುರ :ಕಲಬುರಗಿ ಗ್ರಾಮೀಣ ಮತಕ್ಷೇತ್ರ ಕ್ಕೆ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಣಮಂತ ಸನಗುಂದಿ ಯವರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕೆಂದು ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು, ಕುಡು ಒಕ್ಕಲಿಗದ 3.25 ಲಕ್ಷ ಜನಸಂಖ್ಯೆಯಿದ್ದು, ಜಿಲ್ಲೆಯಲ್ಲಿ ಸುಮಾರು 165 ಹಳ್ಳಿಗಳಲ್ಲಿ ವಾಸವಾಗಿದ್ದಾರೆ.ಆದ್ದರಿಂದ ಕೂಡುಒಕ್ಕಲಿಗ ಸಮಾಜವನ್ನು 3ಎ ಜಾತಿ ಪಟ್ಟಿಗೆ ಸೇರಿಸಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಣ್ಣ ಗೌಡ ಪಾಟೀಲ ಮನವಿ ಸಲ್ಲಿಸಿದರು. ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಜೆಡಿಎಸ ಪಕ್ಷದ ಪ್ರಣಾಳಿಕೆಯಲ್ಲಿನ ಸದಾಶಿವ ಆಯೋಗದ ವರದಿ ಜಾರಿ ಇದನ್ನು ಹಿಂಪಡೆಯಬೇಕು ಎಂದು ಕಳ್ಳೊಳಿ ಕುಸಾಳೆ ಮನವಿ ಮಾಡಿದರು.

ಹಡಪದ ಸಮಾಜ ವನ್ನು ಪ. ಜಾ/ಪ.ಪಂ ಕ್ಕೆ ಸೇರಿಸಬೇಕೆಂದು ರಾಜ್ಯ ಸಂ. ಕಾರ್ಯದರ್ಶಿ ಬಸವರಾಜ ಹಡಪದ ಹಳ್ಳಿ ರವರು ಮನವಿ ಸಲ್ಲಿಸಿದರು.

ಹನಮಂತ ಸನಗುಂದಿ, ಮಹ್ಮದ ಉಬೇದುಲ್ಲಾ, ರಾಜ ಮಹ್ಮದ, ಬಸವರಾಜ ಮಯೂರ, ಮಹೇಬೂಬ ಗೋಗಿ, ಸುಭಾಸ ಸಾಕರೆ, ಮಲ್ಲಿಕಾರ್ಜುನ ಹಳ್ಳಿ, ವಿಜಯಲಕ್ಷ್ಮಿ ಬಂಗರಗಿ, ಜಬ್ಬಾರ, ಹೀರಾಲಾಲ ಪವಾರ, ಆರೋಗ್ಯ ಸ್ವಾಮಿ, ಶ್ರೀಧರ ಕೊಲ್ಲೂರ, ಬಸವರಾಜ ದಂಡಗುಳಕರ, ವಿಶ್ವನಾಥ ಮರತೂರ, ಹನುಮಾನ ಕಾಂಬಳೆ, ಶ್ರೀನಿವಾಸ ದಂಡಗುಲಕರ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here