ಕಾಯಕ-ದಾಸೋಹ ಪ್ರಜ್ಞೆ ಬೆಳೆಸಿದ ಶರಣ ಸಿದ್ಧರಾಮೇಶ್ವರರು

0
73

ಶಹಾಬಾದ: ಸಿದ್ಧರಾಮೇಶ್ವರರು ಕಾಯಕ, ದಾಸೋಹ ಪ್ರಜ್ಞೆಯನ್ನು ಬೆಳೆಸಿದ ಶರಣ.ಇವರು ನಾಡಿನ ಎಲ್ಲ ಸಮಾಜಕ್ಕೂ ಆದರ್ಶಪ್ರಾಯರು ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ಶನಿವಾರ ನಗರದ ಬಸವೇಶ್ವರ ವೃತ್ತದಲ್ಲಿ ಭೋವಿ ವಡ್ಡರ್ ಸಮಾಜ ಹಾಗೂ ಭೋವಿ ಯುವಕರ ಸಂಘ ವತಿಯಿಂದ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಹನ್ನೇರಡನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಸಿದ್ಧರಾಮೇಶ್ವರರು ಒಬ್ಬರು. ಸಿದ್ಧರಾಮೇಶ್ವರರು ಆ ಕಾಲದಲ್ಲಿಯೇ ಜೀವಿಗಳಿಗೆ ಬದುಕಲು ಕೆರೆಕುಂಟೆಗಳನ್ನು ಕಟ್ಟಿಸಿದ ಮಾನವೀಯತೆಯ ಹರಿಕಾರರು. ಅವರು ತಮ್ಮ ಜೀವನದಲ್ಲಿ ನುಡಿದಂತೆ ನಡೆದವರು.ಅವರ ಬದುಕಿದ ರೀತಿ ಹಾಗೂ ನುಡಿದ ಒಂದೊಂದು ಮಾತುಗಳು ನಮಗೆ ದಾರಿದೀಪವಾಗಲಿವೆ. ಅವರ ಒಂದೊಂದು ವಚನಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿದ್ದೇ ಆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಭೋವಿ ಸಮಾಜದ ತಾಲೂಕಾಧ್ಯಕ್ಷ ಭೀಮರಾವ ಸಾಳುಂಕೆ ಮಾತನಾಡಿ, ಕೆರೆ ಕುಂಟೆಗಳನ್ನು ಕಟ್ಟುವ ಮೂಲಕ ಪ್ರಕೃತಿಯಲ್ಲಿನ ಪಶು,ಪಕ್ಷಿಗಳಿಗೆ ದಾಹ ನೀಗಿಸುವ ಕಾಯಕವನ್ನು ಮಾಡಿದವರು ಸಿದ್ಧರಾಮೇಶ್ವರ ಶರಣರೇ ಮೊದಲಿಗರು.ಇಂದು ಭೋವಿ ಸಮಾಜದ ಬಂಧುಗಳಲ್ಲಿ ಜಾಗೃತಿ ಮೂಡುತ್ತಿದೆ.ಸಮುದಾಯದಲ್ಲಿ ಸಿದ್ಧರಾಮೇಶ್ವರ ಕುರಿತು ಚಿಂತನೆ ನಡೆಯುತ್ತಿದೆ.ಅವರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, ಕಾಯಕಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ವಿಶ್ವದ ಎಲ್ಲಾ ಜೀವರಾಶಿಗಳಿಗೆ ಹೊಟ್ಟೆ ತುಂಬಿಸುವ ಕಾರ್ಯ ಕಾಯಕದಿಂದ ಮಾತ್ರ ಸಾಧ್ಯ. ಕಾಯಕ ಸತ್ಯ ಮತ್ತು ಶುದ್ಧವಾಗಿರಬೇಕು.ಯಾವುದೇ ಅನಾಚಾರದ ಮೂಲಕ ಗಳಿಸುವ ಹಣ ಸತ್ಪಾತ್ರಕ್ಕೆ ಸಲ್ಲುವುದಿಲ್ಲ. ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾಯಕ ಮಾಡುವ ಸಂಸ್ಕøತಿಯನ್ನು ಬೆಳೆಸಿದವರು ಶರಣರು ಎಂದು ಹೇಳಿದರು.

ಉದ್ಯಮಿ ನರೇಂದ್ರ ವರ್ಮಾ ಹಾಗೂ ನಗರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಮಾತನಾಡಿ, ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಸಿದ್ಧರಾಮೇಶ್ವರರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭೋವಿ ಸಮಾಜದ ಯುವಕರು ಹಾಗೂ ಮುಖಂಡರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here