ಶಹಾಬಾದ: ಶರಣಬಸವೇಶ್ವರರು ಕಾಯಕದಿಂದ ಸಂಪಾದಿಸಿದ್ದನ್ನು ಅನ್ನ ಹಾಗೂ ಜ್ಞಾನ ದಾಸೋಹದಲ್ಲಿ ತೊಡಗಿಸಿ ಸಮಾಜಸೇವೆಯನ್ನು ಮಾಡುತ್ತಾ ಬದುಕಬೇಕೆಂದು ಸಂದೇಶವನ್ನು ಸಾರಿ, ಅವರೂ ನುಡಿದ ರೀತಿಯಲ್ಲಿಯೇ ಬದುಕಿ ತೋರಿಸಿದ ಮಹಾತ್ಮರು ಪ್ರವಚನಕಾರರಾದ ಸಿದ್ಧೇಶ್ವರ ವಸ್ತ್ರದ್ ಹೇಳಿದರು.
ಅವರು ಶುಕ್ರವಾರ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ಶರಣಬಸವೇಶ್ವರರ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರನ್ನು ಪ್ರೀತಿಸುವ ಹಾಗೂ ಪರರಿಗೆ ಕೇಡನ್ನು ಬಯಸದಿರುವ ಸಂಸ್ಕøತಿಯನ್ನು ನಾವು ಬೆಳೆಸಿಕೊಂಡು ಬೆಳೆಯಬೇಕು.ತಪ್ಪು ಮಾಡದೇ ಆತ್ಮ ತೃಪ್ತಿಯಿಂದ ಕೆಲಸ ಮಾಡಬೇಕು.ಇದನ್ನೇ ಶರಣಬಸವೇಶ್ವರರು ತಮ್ಮ ಜೀವನದಲ್ಲಿ ನಡೆದುಕೊಂಡು ಬಂದಿದ್ದರು ಎಂದರು.
ಎಂದು ಹೇಳಿದರು.
ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಮಹಿಳಯರು ಭಾಗವಹಿಸಬೇಕು. ಇದರಿಂದ ಮಾನಸಿಕ ಹಾಗೂ ಶಾರೀರಿಕ ಶಾಂತಿ ಲಭಿಸುತ್ತಿದೆ. ಇಂದಿನ ಶರಣಬಸವೇಶ್ವರ ತೊಟ್ಟಿಲೋತ್ಸವ ಸಂಭ್ರಮದಲ್ಲಿ ನಾನು ಪಾಲ್ಗೊಂಡಿರುವುದೇ ನನ್ನ ಭಾಗ್ಯ ಎಂದರು.
ನಂತರ ಶ್ರೀಶರಣ ಬಸವೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ಜನ್ಮದಿನೋತ್ಸವ ನಿಮಿತ್ತ ಶರಣಬಸವೇಶ್ವರರ ಹಾಗೂ ಅವರ ಗುರುಗಳ ತೊಟ್ಟಿಲೋತ್ಸವ ನಡೆಯಿತು.
ಬೆಳಗ್ಗೆ ಶರಣಬಸವೇಶ್ವರರರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ಸಂಜೆ ರಾಜಶೇಖರ ಘಂಟಿಮಠ ಅವರಿಂದ ತೊಟ್ಟಿಲೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ಹಾಗೂ ಅಲ್ಲಮ ದೇಶಮುಖ ಅವರಿಂದ ತೊಟ್ಟಿಲು ಪೂಜೆ, ತೊಟ್ಟಿಲೋತ್ಸವ ನಡೆಯಿತು.
ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ,ಲಿಂಗರಾಜ ಮಲಕೂಡ,ರಾಜಶೇಖರ ಮರಗೋಳ, ಶಿವಕುಮಾರ ಇಂಗಿನಶೆಟ್ಟಿ, ಅಣವೀರ ಇಂಗಿನಶೆಟ್ಟಿ, ಪ್ರಶಾಂತ ಮರಗೋಳ, ಡಾ.ವಿ.ಸಿ.ಇಂಗಿನಶೆಟ್ಟಿ, ವಿಶ್ವರಾಧ್ಯ ಬೀರಾಳ, ಭೀಮಾಶಂಕರ ಕುಂಬಾರ, ಬಸವರಾಜ ಇಂಗಿನಶೆಟ್ಟಿ,ಬಸವರಾಜ ಹುಗ್ಗಿ, ವಿಜಯಕುಮಾರ ಮುಟ್ಟತ್ತಿ, ಶರಣು ಜೇರಟಗಿ, ಮನೋಹರ್ ಮಾಟನಳ್ಳಿ, ಶರಣಯ್ಯ .ಎಮ್.ಆರ್, ರವಿಕುಮಾರ ಅಲ್ಲಂಶೆಟ್ಟಿ, ಅರುಣ ಪಟ್ಟಣಕರ್,ಶಿವಾನಂದ ಪಾಟೀಲ, ಬಸವರಾಜ ಸಾತ್ಯಾಳ, ಈರಣ್ಣ ವಾಲಿ,ವಿಶ್ವನಾಥ ತೆಲಗಬಾಳ, ಶಿವಲಿಂಗಗೌಡ ಹರವಾಳ,ಮಹಿಳಾ ಅಧ್ಯಕ್ಷೆ ಲಕ್ಷ್ಮಿಬಾಯಿ ರಾವೂರ, ಉಮಾದೇವಿ ದಂಡೋತಿ, ಬಿಂದು ಕೋಬಾಳ, ಅಂಜನಾ ಸಿದ್ಧೇಶ್ವರ, ಕಾಶಿಬಾಯಿ ಸಾಲಿಮಠ, ರೂಪಾ ಆಂದೋಲಾ, ರೂಪಾ ದೇವನೂರ, ಪಾರ್ವತಿ ಜಾನವಾಡ, ಸೇರಿದಂತೆ ಮಹಿಳೆಯರು ಇದ್ದರು.