ಕಲಬುರಗಿ: ಪ್ರಶಸ್ತಿಗಳು ಮನುಷ್ಯ ಜವಾಬ್ದಾರಿ ಹೆಚ್ಚಿಸುತ್ತದೆ.ರಾಜಾ ಮಹಾರಾಜರು ತಮ್ಮ ಆಸ್ಥಾನದಲ್ಲಿ ಮಂತ್ರಿ ಸೇನಾಧಿಪತಿಗಳನ್ನು ಸನ್ಮಾನಿಸಿ ಅವರ ಕರ್ತವ್ಯಗಳನ್ನು ನೆನಪಿಸುತ್ತಿದ್ದರು ಎಂದು ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ಮೋಹ್ಮದ ಅಸದ ಅನ್ಸಾರಿ ಹೇಳಿದರು.
ಕಲಬುರಗಿಯ ವಿವಿಧ ಉದ್ದೇಶ ಸಮಾಜ ಸೇವಾ ಸಮಿತಿಯು ಇಂದು ನಗರದ ಹಾಗರಗಾ ರಸ್ತೆಯಲ್ಲಿರುವ ಪ್ರೀನ್ಸ್ ಫಂಕ್ಷನ್ ಹಾಲ್ ನಲ್ಲಿ ಕಲ್ಯಾಣ ನಾಡಿನ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರಿಗೆ ಜನಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ನಿಸ್ವಾರ್ಥದಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು.ಇದರಿಂದ ಅವರ ಮನೋಬಲ ಹೆಚ್ಚಿಸುತ್ತದೆ ಎಂದು ನುಡಿದರು.
ಖ್ಯಾತ ಕವಿಗಳಾದ ಮಕ್ಬುಲ್ ಅಹ್ಮದ್ ನೈಯರ್ ಮಾತನಾಡಿ ಲಿಂಗರಾಜ ಸಿರಗಾಪೂರ ಅವರು ಭಾಷಾ ಬಾಂಧವ್ಯ ಬೆಸೆಯುವ ಕೆಲಸ ಮಾಡಿದ್ದಾರೆ.ಉರ್ದು ಶಾಲೆಗಳಲ್ಲಿ ಕನ್ನಡ ಭಾಷೆ ಪಸರಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು. ರಿಜ್ವಾನ್ ಉರ್ ರೇಹ್ಮಾನ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸಾಜಿದ್ ಅಲಿ ರಂಜೋಳ್ವಿ ಅವರು ವಹಿಸಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ಮಹ್ಮದ್ ಗೆಸುರರಾಜ, ಹಿರಿಯ ಪತ್ರಕರ್ತ ರಿಯಾಜ್ ಖತೀಬ್, ಸಾಹಿತಿ ಚಿಂತಕ ಜಿ.ಜಿ.ವಣಿಕ್ಯಾಳ, ರಫೀಕ್ ಕಮಲಾಪೂರಿ, ಮಹ್ಮದ್ ಆರಿಫುದ್ದಿನ್, ಪತ್ರಕರ್ತ ಮುಬಿನ್ ಜಖ್ಮ್ ,ಸಮಾಜ ಸೇವಕರಾದ ಮಕ್ಬುಲ್ ಅಹ್ಮದ್ ಸಗ್ರಿ ಹಾಗೂ ಬಾಬಾ ಫಕ್ರುದ್ದೀನ್ ಅವರನ್ನು ಸನ್ಮಾನಿಸಲಾಯಿತು.
ಅಬ್ದುಲ್ ರಹೀಂ,ಮೋದಿನ ಪಟೇಲ್, ಸೂರ್ಯಕಾಂತ ಬಾಲಕೊಂದೆ, ಪ್ರಭು ಪಾಟೀಲ್, ಮಂಜುನಾಥ ಸಿರಗಾಪೂರ, ಪ್ರಶಾಂತ ತಂಬೂರಿ, ಅಶೋಕ್ ಕಮಲಾಪುರ,ಎಕ್ಬಾಲ್ ನಿಲಗುಂಡಾ, ರಫೀಕ್ ಕಮಲಾಪೂರಿ,ರಾಷೀಕ್ ರಿಯಾಜ್, ಕಲ್ಯಾಣ ಕುಮಾರ, ರಾಫೀಯಾ ಸಿರೀನ್,ರಾಷೀದಾ ಬೇಗಂ,ಅಹಮದಿ ಬೇಗಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.