ಕತ್ತಲೆಯಿಂದ ಬೆಳೆಕಿನಡೆಗೆ ಸಾಗುವುದೇ ಸಂಕ್ರಾಂತಿ

0
16

ಮೂರು ಪ್ರಕಾರಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತವೆ ಎಂದು ಹೇಳಿದ ಡಾ. ನರಸಿಂಹಲು ವಡವಾಟಿಯವರು ಒಂದು ವ್ಯಾವಹಾರಿಕ ಸಂಗೀತ ಕಾರ್ಯಕ್ರಮ, ಇನ್ನೊಂದು ಪ್ರೀತಿಪೂರ್ವಕ ಸಂಗೀತ ಕಾರ್ಯಕ್ರಮ, ಮತ್ತೊಂದು ವೃತ್ತಿಪೂರ್ವಕ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಗಾಯನ ಮತ್ತು ಕ್ಲಾರಿನೆಟ್ ವಾದನ ನಡೆಸಿ ಜನರು ಸಂಗೀತದ ನಾದದಲ್ಲಿ ಮುಳುಗೇಳುವಂತೆ ಮಾಡಿದರು. ಡಾ. ರೇವಯ್ಯ ವಸ್ತ್ರದಮಠ ಹರ್ಮೋನಿಯಂ ನುಡಿಸಿದರು. ಗೋಪಾಲ ಗುಡಿಬಂಡೆ ತಬಲಾ ಸಾಥ್ ನೀಡಿದರು.

ಕಲಬುರಗಿ: ವ್ಯಾಪಕ ಕತ್ತಲೆಯ ಬಂಧನದಿಂದ ಪ್ರಖರ ಬೆಳಕಿನ ಕಡೆಗೆ ನಡೆಯುವುದೇ ಸಂಕ್ರಾಂತಿ. ಮಾನವೀಯತೆ ನೆಲೆಗಳಲ್ಲಿ ನಿಸ್ವಾರ್ಥದ ಅಹಂಕಾರದಲ್ಲಿ ಕಳೆದು ಹೋಗಿರುವ ನಾವುಗಳು ಬಸವ ಪ್ರಜ್ಞೆ ಕಡೆ ಮುನ್ನಡೆಯಬೇಕು ಎಂದು ಬೆಂಗಳೂರು ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳು ತಿಳಿಸಿದರು.

Contact Your\'s Advertisement; 9902492681

ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಲಿಂ. ಸೋವiನಥಪ್ಪ ಬಸವಣ್ಣಪ್ಪ ಖೂಬಾ ಸ್ಮರಣಾರ್ಥ 738ನೇ ಅರಿವಿನ ಹಾಗೂ ವಚನ ಸಂಕ್ರಾಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾರ್ಥದ ಕತ್ತಲೆಯಿಂದ ನಿಸ್ವಾರ್ಥದ ಬೆಳಕಿನೆಡಗೆ ಸಾಗುವುದೇ ನಿಜವಾದ ಸಂಕ್ರಾಂತಿಯಾಗಿದ್ದು, ಮನೆಯಲ್ಲಿ ಹಬ್ಬ ಆಚರಿಸಿದಂತೆ ಮನದಾಳದ ನೆಲೆಸಿರುವ ಕತ್ತಲೆಯನ್ನೋಡಿಸುವ ಕೆಲಸ ಸದಾ ನಡೆಯುತ್ತಿರಬೇಕು ಎಂದು ಆಶಿಸಿದರು.

ಇದೇವೇಳೆಯಲ್ಲಿ ಕ್ಲ್ಲಾರಿನೆಟ್ ವಾದಕ ಪಂಡಿತ ಡಾ. ನರಸಿಂಹಲು ವಡವಾಟಿ ಅವರಿಗೆ ವಚನ ಸಂಗೀತ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಡವಾಟಿ, ಇದೊಂದು ಸಾರ್ಥಕ ಸಂಗೀತ ಸೇವೆ ಎಂದು ಸಂತೋಷ ವ್ಯಕ್ತಪಡಿಸಿದರು. ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಡಾ. ಜಯಶ್ರೀ ದಂಡೆ ಮಾತನಾಡಿದರು.

ತಮಿಳುನಡಿನ ನಾಗಸಂದ್ರದ ಸಿದ್ಧಲಿಂಗ ಸ್ವಮೀಜಿ ಮಾತನಾಡಿದರು. ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ ರಾಜೇಂದ್ರ ಖೂಬಾ ಉಪಸ್ಥಿತರಿದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here