ಸುರಪುರ: ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮದ ಜೊತೆಗೆ ಮುತ್ತೈದೆಯರ ಉಡಿ ತುಂಬುವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಿರಿ ಮಠದ ಪೀಠಾಧಿಪತಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ತಿಳಿಸಿದರು.
ತಾಲೂಕಿನ ಲಕ್ಷ್ಮೀಪುರ-ಬಿಜಾಸಪುರ ಮದ್ಯದ ಶ್ರೀಗಿರಿ ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಈಗಾಗಲೇ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ ಆರಂಭಗೊಂಡು ಎರಡು ವಾರಗಳಾಗಿವೆ,ಇಂದು ಶ್ರೀಮಠಕ್ಕೆ ಕಾಶಿ ಪೀಠದ ಕಿರಿಯ ಜಗದ್ಗುರು ಡಾ:ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಆಗಮಿಸಲಿದ್ದು,ಮುಖ್ಯ ರಸ್ತೆಯ ಸ್ವಾಗತ ಕಮಾನಿನಿಂದ ಸಾರೋಟ ಮೆರವಣಿಗೆ ನಡೆಯಲಿದೆ.
ಮಂಗಳವಾರ 17ನೇ ತಾರೀಖು ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಹಾಗೂ 18ನೇ ತಾರೀಖು ಐದು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು 23ನೇ ತಾರೀಖು ಗುಡ್ಡಾಪುರ ದಾನಮ್ಮ ದೇವಿ ಪುರಾಣ ಮಹಾಮಂಗಲೋತ್ಸವದಲ್ಲಿ ಗಂಗಾಧರ ಶಿವಾಚಾರ್ಯ ಶ್ರೀಗಳು ಭಾಗವಹಿಸಲಿದ್ದಾರೆ,24ನೇ ತಾರೀಖು ಸಂಜೆ ಮಹಾರಥೋತ್ಸವ ಹಾಗೂ ರಾತ್ರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಕಾರ್ಯಕ್ರಮಗಳ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರಾದ ಸೂಗುರೇಶ ವಾರದ,ಶಿವರಾಜ ಕಲಕೇರಿ,ಮಲ್ಲು ಹೂಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.