ಸುರಪುರ: ಮಹಾರಾಷ್ಟ್ರದಲ್ಲಿನ ಕೋಯ್ನಾ ಆಣೆಕಟ್ಟಿನಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿಬಿಟ್ಟಿದ್ದರಿಂದ ಇಂದು ತಾವೆಲ್ಲ ಸಂಕಷ್ಟ ಪಡುವಂತಾಗಿದೆ.ತಾಔಉ ಯಾವುದೆ ರೀತಿಯ ಚಿಂತೆಗೀಡಾಗಬೇಡಿ,ನಿಮ್ಮೊಂದಿಗೆ ನಾನಿರುವೆ ಎಂದು ಶಾಸಕ ನನಸಿಂಹ ನಾಯಕ(ರಾಜುಗೌಡ) ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ನಗರದ ಎಪಿಎಂಸಿಯಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಶೆಳ್ಳಿಗಿ,ಹೆಮ್ಮಡಿಗಿ,ಮುಷ್ಠಳ್ಳಿ ಮತ್ತಿತರೆ ಗ್ರಾಮಗಳ ನೆರೆ ಸಂತ್ರಸ್ತರಿಗೆ ಭೇಟಿ ಮಾಡಿ ಮಾತನಾಡಿ,ಸರಕಾರ ತಮಗೆ ಎಲ್ಲಾ ರೀತಿಯ ನೆರವು ನೀಡಲಿದೆ.ತಮ್ಮ ಬದುಕನ್ನು ಕಟ್ಟಿಕೊಡುವ ಎಲ್ಲಾ ಪ್ರಯತ್ನವನ್ನು ಸರಕಾರ ಮಾಡಲಿದೆ.ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ನಿಮ್ಮೆಲ್ಲರ ಸಂಕಷ್ಟದ ಕುರಿತು ಮನವರಿಕೆ ಮಾಡಿದ್ದು,ಬೆಳೆ ಪರಿಹಾರ ಸೇರಿದಂತೆ ಎಲ್ಲಾ ನೆರವು ದೊರಕಿಸುವುದಾಗಿ ಜನತೆಯಲ್ಲಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ಅಂಕಲಗಿ,ಜಿಲ್ಲಾ ಪಂಚಾಯತಿ ಸದಸ್ಯ ಮರಿಲಿಂಗಪ್ಪ ಕರ್ನಾಳ,ಎಪಿಎಂಸಿ ಸದಸ್ಯ ದುರಗಪ್ಪ ಗೋಗಿಕೇರಾ,ಭೀಮಣ್ಣ ಬೇವಿನಾಳ,ದೇವರಾಜ ಮಕಾಶಿ ,ವಿರುಪಾಕ್ಷಿ ಕೋನಾಳ ಸೇರಿದಂತೆ ಅನೇಕರಿದ್ದರು.