ರಂಗಂಪೇಟ ಕೆಪಿಎಸ್ ಶಾಲಾ ಆವರಣದಲ್ಲಿ ಕಲಿಕಾ ಹಬ್ಬ ಆಚರಣೆ

0
15

ಸುರಪುರ: ಹಿಂದಿನ 2-3 ವರ್ಷಗಳಲ್ಲಿ ಕೋವಿಡ್‍ನಿಂದಾಗಿ ಮಕ್ಕಳಲ್ಲಿ ಕಲಿಕೆ ಮಟ್ಟ ಕುಂಠಿತಗೊಂಡು ಕಲಿಕೆಯಲ್ಲಿ ಮಕ್ಕಳು ಬಹಳಷ್ಟು ನಷ್ಟ ಅನುಭವಿಸುಂತಾಯಿತು ಹೀಗಾಗಿ ಶಿಕ್ಷಣ ಇಲಾಖೆಯು ಮಕ್ಕಳನ್ನು ವಿವಿಧ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸುವ ಸಲುವಾಗಿ ಕಲಿಕಾ ಹಬ್ಬವನ್ನು ಹಮ್ಮಿಕೊಂಡಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಕೌಶಲ್ಯ ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ ಹೇಳಿದರು.

ಮಂಗಳವಾರದಂದು ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿ ಕಲಿಕಾ ಹಬ್ಬವು ಮಕ್ಕಳ ಕಲಿಕೆಗೆ ಪೂರಕವಾಗಿದ್ದು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಆನಂದಿಸಲಿ ಎಂಬ ಉದ್ದೇಶ ಹೊಂದಲಾಗಿದೆ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಗೆ ಸಹಕಾರಿಯಾಗುವದರ ಜೊತೆಗೆ ಅವರಲ್ಲಿ ಹೊಸ ಚೇತನ ಮೂಡಿಸಲಿದೆ ಎಂದ ಅವರು ಶಿಕ್ಷಕರು ಕೂಡಾ ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಆ ಮೂಲಕ ಮಕ್ಕಳಲ್ಲಿ ಸೃಜನಾತ್ಮಕತೆ ಹಾಗೂ ಕೌಶಲ್ಯ ಹೆಚ್ಚಿಸಲು ಸಾಧ್ಯ ಮುಂದೆ ಮಕ್ಕಳಲ್ಲಿ ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ ಬೆಳಕಿಗೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಹಿಂದೆ ರಾಮಾಯಣ-ಮಹಾಭಾರತ ಕಾಲದಲ್ಲಿ ಮಂತ್ರಗಳೇ ಪ್ರಮುಖವಾಗಿದ್ದವು ನಂತರದ ದಿನಗಳಲ್ಲಿ ಆಧುನಿಕತೆ ಬೆಳೆದಂತೆಲ್ಲ ಯಂತ್ರಗಳು ಬೆಳೆದವು ಈಗ ನಾವು ತಂತ್ರಾಶ ಯುಗದಲ್ಲಿದ್ದು ಈಗಿನ ಭಾಗ್ಯಶಾಲಿಗಳಾಗಿದ್ದು ತಮ್ಮ ಕಲಿಕೆಯಲ್ಲಿ ತಂತ್ರಾಂಶಗಳ ಸದುಪಯೋಗ ಪಡೆದುಕೊಂಡು ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲ ಬಸವರಾಜ ಕೊಡೇಕಲ್, ಎಸ್‍ಡಿಎಂಸಿ ಅಧ್ಯಕ್ಷ ನಾಸೀರ್ ಅಹ್ಮದ ಕುಂಡಾಲೆ, ಸದಸ್ಯರಾದ ಅರವಿಂದ ಬಿಲ್ಲವ್, ರಮೇಶ ಯಾದವ್, ಶಿಕ್ಷಣ ಸಂಯೋಜಕ ಶಿವಪುತ್ರ, ಬಿಆರ್‍ಪಿ ಖಾದರಪಟೇಲ, ಸಿಆರ್‍ಪಿ ಚನ್ನಪ್ಪ ಕ್ಯಾದಗಿ ಎಪಿಎಫ್‍ನ ಅನ್ವರ್ ಜಮಾದಾರ, ಕೃಷ್ಣ, ವಿವಿಧ ಶಾಲೆಗಳ ಪ್ರಧಾನ ಗುರುಗಳಾದ ಕಮಲಾಬಾಯಿ ಹಿಪ್ಪರಗಿ, ಮುದ್ದಪ್ಪ ಅಪ್ಪಾಗೋಳ, ಯೂನುಸ್ ಬೇಪಾರಿ, ಶಕೀಲ್ ಅಹ್ಮದ, ಮೌನೇಶ ಮ್ಯಾಗೇರಿ ಓಣಿ, ರೇಣುಕಾ ವಾಲಿ, ಬಸಪ್ಪ, ಹೀರು ಚವ್ಹಾಣ, ಶರಣು ಜಾಲಹಳ್ಳಿ, ದೇವಿಂದ್ರಪ್ಪ ಹಾಗೂ ಇತರರು ಉಪಸ್ಥಿತರಿದ್ದರು. ಶ್ರೀನಿವಾಶ ಕುಲಕರ್ಣಿ ನಿರೂಪಿಸಿದರು ಚನ್ನಪ್ಪ ಕ್ಯಾದಗಿ ಸ್ವಾಗತಿಸಿದರು ಹಾಗೂ ಮಲಕಪ್ಪ ವಂದಿಸಿದರು.

ಜಾಥಾಕ್ಕೆ ಚಾಲನೆ: ಕಲಿಕಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಥಾವನ್ನು ಬಿಇಓ ಮಹೇಶ ಪೂಜಾರ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಕಲಾ ತಂಡಗಳು ಜನರ ಮನ ಸೆಳೆದವು ಕನ್ಯಾ ಶಾಲೆಯ ಮಕ್ಕಳಿಂದ ಹಂತಿಪದಗಳು ಹಾಗೂ ಎತ್ತುಗಳ ಕುಣಿತ, ಎಂಪಿಎಸ್ ಶಾಲೆಯ ಲೇಜಿಮ್, ವಿವೇಕಾನಂದ ಶಾಲೆಯ ಡೊಳ್ಳು ಕುಣಿತ ಮುಂತಾದವುಗಳು ನೋಡುಗರ ಮನಸ್ಸು ಸೆಳೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here