ಕಲಬುರಗಿ: ಮಂಗಳವಾರ ಕಲಬುರಗಿ ನಗರದ ವಿದ್ಯಾ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಬಾಲಕೀಯರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಅಧಿಕಾರಿಗಳು ಕಾಫಿ ಸವಿಯುತ್ತಾ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ ಡಿ. ಬದೋಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಅವರು ಅವರು ಕೆಲ ಹೊತ್ತು ಮಕ್ಕಳೊಂದಿಗೆ ಬೆರೆತು ಅವರ ಯೋಗಕ್ಷೇಮ ವಿಚಾರಿಸಿದರು.
ನಂತರ ಮಕ್ಕಳ ಶೈಕ್ಷಣಿಕೆ ಚಟುವಟಿಕೆ, ವಸತಿ ನಿಲಯದಲ್ಲಿನ ಸೌಕರ್ಯ ಹಾಗೂ ಸುರಕ್ಷತೆ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು. ನಿಲಯದ ವಿದ್ಯಾರ್ಥಿಗಳು ನಿಲಯಕ್ಕೆ ಬಂದದು ತಮ್ಮೊಂದಿಗೆ ಕಾಫಿ ಸವಿದ ಅಧಿಕಾರಿಗಳೊಡನೆ ಗುಂಪು ಪೆÇೀಟೊ, ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. ವಸತಿ ನಿಲಯದ ವಾರ್ಡನ್, ಇತರೆ ಸಿಬ್ಬಂದಿಗಳು ಇದ್ದರು.