ಸುರಪುರ:ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ಬೀದರ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸವಿತಾ ಸಮಾಜದ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.
ಭವನವನ್ನು ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ,ಸಕ್ಕರೆಯಂತ ಯಾವುದಾದರೂ ಸಮುದಾಯ ಇದೆ ಎಂದರೆ ಅದು ಸವಿತಾ ಸಮಾಜವಾಗಿದೆ ಎಂದರು.ಸವಿತಾ ಸಮಾಜ ಸದಾಕಾಲ ನನ್ನೊಂದಿಗಿದೆ,ಅದರಂತೆ ನಾನುಕೂಡ ಈ ಸಮಾಜದ ಜೊತೆಯಲ್ಲಿ ಸದಾಕಾಲ ಇರುವುದಾಗಿ ತಿಳಿಸಿದರು.ಮುಂದೆಯೂ ಏನಾದರು ಕೆಲಸಗಳಿದ್ದರೆ ಗಮನಕ್ಕೆ ತಂದಲ್ಲಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಅನೇಕ ಕಸಬುಗಳಿಗೆ ಇಂದುತೊಂದರೆ ಎದುರಾಗಿದೆ.ಅದರಂತೆ ನಿಮ್ಮ ಕಸುಬಿಗೂ ಕಾರ್ಪರೆಟ್ ಧಣಿಗಳಿಂದ ತೊಂದರೆ ಎದುರಾಗಿದೆ.ಆದ್ದರಿಂದ ಈ ಪೈಪೋಟಿ ಮೆಟ್ಟಿ ನಿಂತು ಕಸುಬನ್ನು ಮುಂದುವರೆಸಲು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ತುಂಬಾ ಮುಖ್ಯವಾಗಿದೆ.ಆದ್ದರಿಂದ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಗಮನಹರಿಸುವಂತೆ ತಿಳಿಸಿದರು.
ಬೇರೆ ಯಾವುದೇ ವೃತ್ತಿಗಳಲ್ಲಿ ನಿಮ್ಮ ವೃತ್ತಿ ಶ್ರೇಷ್ಠವಾದುದಾಗಿದೆ.ಯಾಕೆಂದರೆ ಜನ ಸಾಮಾನ್ಯನಾಗಲಿ,ನರೇಂದ್ರ ಮೋದಿಯವರಾಗಲಿ ಸುಂದರವಾಗಿ ಕಾಣಬೇಕಾದರೆ ಅದಕ್ಕೆ ನಿಮ್ಮ ಮುಂದೆ ತಲೆ ಬಗ್ಗಿಸಲೆಬೇಕು ಎಂದು ಸಮಾಜದ ವೃತ್ತಿಯ ಬಗ್ಗೆ ಅಭಿಮಾನದ ಮಾತನ್ನಾಡಿದರು.
ಅಲ್ಲದೆ ಈ ಹಿಂದೆಯೂ ತಾವೆಲ್ಲ ನಿಮ್ಮ ಸ್ವಂತಃ ಹಣ ದಿಂದ ಚುನಾವಣೆಯಲ್ಲಿ ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ,ಅದರಂತೆ ಮುಂದೆಯೂ ತಾವು ನನ್ನ ಜೊತೆಗೆ ನಿಲ್ಲುವಂತೆ ಮತ್ತು ವಿರೋಧಿಗಳು ಏನೆ ಅಪಪ್ರಚಾರ ಮಾಡಿದರು ತಲೆಕೆಡಿಸಿಕೊಳ್ಳಬೇಡಿ ಎಂದರು.ಅಲ್ಲದೆ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ತಾವೆಲ್ಲರು ಸೇರಿ ಯಶಸ್ವಿಗೊಳಿಸಿದ್ದಿರಿ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಚಿನ್ನಾಕಾರ ಮಾತನಾಡಿ,ನಮಗೆ ಸಮುದಾಯ ಭವನ ಬೇಕೆಂದು ಕೇಳಿದಾಗ ಶಾಸಕ ರಾಜುಗೌಡ ಅವರು ಒಂದೇ ಮಾತಿಗೆ ಒಪ್ಪಿಕೊಂಡರು,ಅಲ್ಲದೆ ನಿವೇಶನ ಖರೀದಿಗೆ ಹಣವಿಲ್ಲದಾಗ ಸ್ವತಃ ತಮ್ಮ ಹಣವನ್ನು ನೀಡಿ ನಿವೇಶನ ಕೊಡಿಸಿದ್ದಾರೆ.ಅಲ್ಲದೆ ಇಂದು 17 ಲಕ್ಷ ರೂಪಾಯಿಗಳ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ.ಅದಕ್ಕಾಗಿ ಇಡೀ ಸಮಾಜ ಶಾಸಕರಿಗೆ ಆಭಾರಿಯಾಗಿದೆ ಎಂದರು.
ಅಲ್ಲದೆ ಶಾಯರಿ ಒಂದನ್ನು ಹೇಳಿ,ಕಾಳು ಕಾಳಿನ ಮೇಲೆ ತಿನ್ನುವವನ ಹೆಸರು ಬರೆದಿರುತ್ತದಂತೆ,ಅದರಂತೆ 2023ಕ್ಕೆ ಮತ್ತೆ ಶಾಸಕರಾಗಲು ರಾಜುಗೌಡರ ಹೆಸರು ಬರೆದಿದೆ ಎಂದು ಅಭಿಮಾನದ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡ ಹೆಚ್.ಸಿ ಪಾಟೀಲ್ ಸೇರಿದಂತೆ ಅನೇಕರು ಮಾತನಾಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ಸದಸ್ಯರಾದ ವೇಣುಮಾಧವ ನಾಯಕ,ನರಸಿಂಹಕಾಂತ ಪಂಚಮಗಿರಿ,ರಾಜಾ ರಂಗಪ್ಪ ನಾಯಕ, ಅಯ್ಯಪ್ಪ ಅಕ್ಕಿ,ಶಂಕರ ನಾಯಕ,ಶರಣು ನಾಯಕ ಬೈರಿಮಡ್ಡಿ,ಮಲ್ಲು ದಂಡಿನ್,ಭೀಮಣ್ಣ ಬೇವಿನಾಳ ಸೇರಿದಂತೆ ಸವಿತಾ ಸಮಾಜದ ಅನೇಕ ಮುಖಂಡರು ಹಾಗೂ ನೂರಾರು ಜನರು ಭಾಗವಹಿಸಿದ್ದರು.ರಾಜು ಅಜ್ಜಕೊಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಸಂಗೀತ ಶಿಕ್ಷಕ ಅಶೋಕ ಸ್ವಾಗತಿಸಿದರು.