ಕಲಬುರಗಿ: ನಗರದ ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ಜಾಗೃತಿ ಅಸೋಸಿಯೇಟ್‍ನ ವತಿಯಿಂದ ಜಾಗೃತಿ ಕಾನೂನು ಸಹಾಯ ಕೇಂದ್ರವನ್ನು ಜಿಲ್ಲಾ ಮತ್ತು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಹೇಮಾವತಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಕೀಲರು ಸದಾ ಸಾಮಾಜಿಕ ನ್ಯಾಯದ ಪರವಾಗಿರಬೇಕು. ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದರು.
ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿ ಕೊಂಡು ನ್ಯಾಯಾಲಯಕ್ಕೆ ಬರುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳ ಕಾರಿಯಾದುದು. ಹಿರಿಯರಿಗೆ ಹಕ್ಕುಗಳಿವೆ. ಅವುಗಳ ಬಗ್ಗೆ ಜಾಗೃತಿ ಇಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು. ಮಹಿಳೆಯರೇ ಈ ಸಹಾಯ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ ಎಂದರು.
ಈ ಸಿದ್ದಾರ್ಥ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಎಸ್. ಚಂದ್ರಶೇಖರ್, ಜಾಗೃತಿ ಕಾನೂನು ಸಹಾಯ ಕೇಂದ್ರದ ಅಧ್ಯಕ್ಷೆ ಅನಿತಾ ಎಂ. ರೆಡ್ಡಿ, ಜಂಟಿ ಕಾರರ್ಯದರ್ಶಿ ವಿಜಯಾ ಎಂ. ಪಾಟೀಲ, ಕಾರ್ಯದರ್ಶಿ ರೇಣುಕಾ ಬಿರಾದಾರ, ಉಪಾಧ್ಯಕ್ಷೆ ಸುನಿತಾ ವಿ.ಎಸ್. ಇದ್ದರು. ಅಶ್ವಿನಿ ಅವರು ನಿರೂಪಿಸಿದರು.