“ಓದಿದ್ದನ್ನು ನಾವೇಕೆ ಮರೆಯುತ್ತೇವೆ?” ಪುಸ್ತಕ ಬಿಡುಗಡೆ

0
31

ಕಲಬುರಗಿ: ಗೋದುತಾಯಿ ನಗರದಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖ್ಯಾತ ವಾಗ್ಮಿ ಡಾ. ನಾ ಸೋಮೇಶ್ವರ ಬೆಂಗಳೂರು ಬರೆದ “ಓದಿದ್ದನ್ನು ನಾವೇಕೆ ಮರೆಯುತ್ತೇವೆ?” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮದರ್ ತೆರೆಸಾ ಚಾರಿಟೇಬಲ್ ಟ್ರಸ್ಟಿನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿ ಅವರು ಪುಸ್ತಕ ಬಿಡುಗಡೆಗೊಳಿಸಿದರು.

Contact Your\'s Advertisement; 9902492681

ಈ ಸಮಾರಂಭದಲ್ಲಿ ಡಾ: ನಾ ಸೋಮೇಶ್ವರ ಬೆಂಗಳೂರು ಇವರು ಶಾಲೆಯ ಎಲ್ಲ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ “ಓದಿದ್ದನ್ನು ನಾವೇಕೆ ಮರೆಯುತ್ತೇವೆ?” ಎಂಬ ವಿಷಯದ ಕುರಿತು ನಾವು ಹೇಗೆ ಓದಬೇಕು? ನಾವು ಓದುವ ವಿಧಾನ ಓದಿದರೆ ನೆನಪಿನಲ್ಲಿ ಹೇಗೆ ಇಡಬೇಕು ಹಾಗೂ ಓದಲು ವೈಜ್ಞಾನಿಕ ವಿಧಾನಗಳು ಯಾವವು ಅಲ್ಲದೆ ಮಕ್ಕಳು ಪರೀಕ್ಷಾ ಕೊಠಡಿಗೆ ಹೋದಾಗ ಮರೆಯುವುದು ಏಕೆ? ಎಂಬುದರ ಬಗ್ಗೆ ಅಲ್ಲದೆ ಹಲವಾರು ವೈಜ್ಞಾನಿಕ ವಿಧಾನಗಳನ್ನು ಮಕ್ಕಳಿಗೆ ಸರಿಯಾಗಿ ತಿಳಿಯುವಂತೆ ಹಾಗೂ ಮನಸ್ಸಿಗೆ ಮುಟ್ಟುವಂತೆ ತಿಳಿಸಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ: ಎಸ್. ಎಸ್. ಹೀರೆಮಠ, ಶ್ರೀಮತಿ ಮಹಾನಂದಾ, ಅಖಿಲ ಭಾರತದ ಫಾರಮಸಿ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ ಇದ್ದರು. ಶಾಲೆಯ ಮುಖ್ಯೋಪಾಧ್ಯಾಯ ನಾಗೇಂದ್ರ ಎಂ ಬಡಿಗೇರ್ ಅವರು ಸ್ವಾಗತಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here