ವೃತ್ತಿಪರ ಕೋರ್ಸ್‍ಗಳಿಂದ ಉದ್ಯೋಗಾವಕಾಶಗಳು ಹೆಚ್ಚಳ

0
11

ಕಲಬುರಗಿ: ಈಗಿನ ವಿದ್ಯಾರ್ಥಿಗಳು, ಯುವಕರು, ಉದ್ಯೋಗಾಂಕ್ಷಿಗಳು ಸಾಂಪ್ರದಾಯಿಕ ಕೋರ್ಸ್‍ಗಳ ಅಧ್ಯಯನದಜೊತೆತಾಂತ್ರಿಕ, ವೃತ್ತಿಪರತರಬೇತಿ ಕೋರ್ಸ್‍ಗಳನ್ನು ಮಾಡಬೇಕು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಿನ ಪ್ರಮಾಣದಲ್ಲಿದೊರೆಯುತ್ತವೆ. ಅಲ್ಲದೆ ಸ್ವಯಂ ಉದ್ಯೋಗಗಳನ್ನು ಕೂಡಾ ಮಾಡಲು ಸಾಧ್ಯವಿದ್ದು, ನಿರುದ್ಯೋಗಿಯುವಕರುಇದರತ್ತ ಲಕ್ಷ್ಯ ವಹಿಸುವಂತೆ ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯಡಾ.ಸುನೀಲಕುಮಾರಎಚ್.ವಂಟಿ ಸಲಹೆ ನೀಡಿದರು.

ನಗರದಗೋದುತಾಯಿ ನಗರದಲ್ಲಿರುವ ‘ಸಾಯಿ ಪ್ರಸಾದ ಸಮಾಜಕಾರ್ಯಕಾಲೇಜ್’ನಲ್ಲಿ ಈಚೆಗೆ ಏರ್ಪಡಿಸಲಾಗಿದ್ದ‘ಫೈರ್ ಸೇಪ್ಟಿ ಇಂಜಿನಿಯರಿಂಗಡಿಪ್ಲೋಮಾಕೋರ್ಸ್’ನ್ನು ಉದ್ಘಾಟಿಸಿಅವರು ಮಾತನಾಡಿದರು.

Contact Your\'s Advertisement; 9902492681

ಉಪನ್ಯಾಸಕಎಚ್.ಬಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಕೆಲವೇ ಕೋರ್ಸಗಳತ್ತ ಹೆಚ್ಚಿನ ಆಸಕ್ತಿ ವಹಿಸಿ, ಕೆಲವು ವಿಶೇಷ, ವೃತ್ತಿಪರ ಕೋರ್ಸಗಳಿದ್ದರು ಕೂಡಾಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. ಫೈರ್ ಸೇಪ್ಟಿ ಇಂಜಿನಿಯರಿಂಗ್‍ಕೋರ್ಸನಿಂದ ಸಾಕಷ್ಟು ಕಡೆಉದ್ಯೋಗದೊರೆಯುತ್ತವೆ. ಈ ಕೋರ್ಸ ನಮ್ಮಜಿಲ್ಲೆಯಲ್ಲಿಆರಂಭವಾಗಿದ್ದು, ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕುಎಂದರು.

ಕಾರ್ಯಕ್ರಮದಲ್ಲಿ ಎಂ.ಬಿ.ನಿಂಗಪ್ಪ, ಮಹ್ಮದ್‍ಅಫ್ಜಲ್, ಯಲೀಷ್ ಸಿಂಹ್, ಸುನೀಲ್‍ಚೌಧರಿ, ಸುಮಿತ್ರಾಗಾಯಕವಾಡ, ಶಿವಯೋಗಪ್ಪ ಬಿರಾದಾರ, ರವಿ ಬಿರಾಜಾದಾರ, ಇಮಾಮ್ ಪಟೇಲ್, ಅಭಯ ಪ್ರಕಾಶ, ದೇವರಾಜಕನ್ನಡಗಿ, ವಿಠಲ ಕಟ್ಟಿ, ಗಿರೀಶ್‍ಆರ್.ಭಂಕೂರ್ ಸೇರಿದಂತೆಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here