ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ

0
17

ಶಹಾಬಾದ: ಮತದಾರರು ಜನವಿರೋಧಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಸರಕಾರ ತರಲು ಮುಂದಾಗಿದ್ದು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಜೆಡಿಎಸ ಪಕ್ಷದ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಜಿ. ಶ್ರೀರಾಮಯ್ಯ ಹೇಳಿದರು.

ಅವರು ರವಿವಾರ ನಗರದಲ್ಲಿ ಜೆಡಿಎಸ ಪಕ್ಷದ ಕಾರ್ಮಿಕ ಘಟಕದ ವತಿಯಿಂದ ಆಯೋಜಿಸಲಾದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಮಿಕ ವರ್ಗ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಆದರೆ, ಆಳುವ ಸರ್ಕಾರ ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನುಗಳನ್ನು ನಿರ್ನಾಮಮಾಡಲು ಮುಂದಾಗಿದೆ.ಸರ್ಕಾರ ಕಾರ್ಮಿಕ ರನ್ನ ಅನೌಪಚಾರಿಕವಾಗಿ ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿದೆ. ಕಾರ್ಮಿಕರನ್ನು ಖಾಯಂ ಮಾಡಲು ಸರ್ಕಾರ ರೆಡಿ ಇಲ್ಲ. ಯಾವುದೇ ಸವಲತ್ತುಗಳನ್ನು ಕೇಳಬಾರದು ಎಂದು ಕಾರ್ಮಿಕರನ್ನು ಹತ್ತಿಕ್ಕುತ್ತಿದೆ. ಕಾರ್ಮಿಕರ ಮೇಲಿನ ದಾಳಿಗಳು ಹಿಮ್ಮೆಟ್ಟಿಸಬೇಕಾದರೆ ಈ ಬಾರಿ ಜೆಡಿಎಸ್‍ಗೆ ಅಧಿಕಾರಕ್ಕೆ ತರುವುದರ ಮೂಲಕ ರಾಜ್ಯದಲ್ಲಿ ಬದಲಾವಣೆಯನ್ನು ಕಾಣಿ ಎಂದು ಹೇಳಿದರು.

ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಿರಾಜ ಶಾಬ್ದಿ ಮಾತನಾಡಿ, ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರ ಕಾರ್ಮಿಕ ಮತ್ತು ರೈತರನ್ನು ಬೀದಿಗೆ ತಂದಿದೆ. ಕೋಮುವಾದ, ಜಾತಿವಾದದ ಮೂಲಕ ಜನರ ಐಕ್ಯತೆಯನ್ನು ಒಡೆಯುವ ಕೆಲಸವಾಗುತ್ತಿದೆ. ಇದನ್ನು ನಾವು ತಡೆಯಬೇಕು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಕಾರ್ಮಿಕ ಕಾನೂನುಗಳ ಅಡಿಯಲ್ಲಿ ದೊರಕುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಸರಿತಾ ಠಾಕೂರ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ, ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಕಾಶ ರಿದ್ಲಾನ್, ಜಿಲ್ಲಾ ಉಪಾಧ್ಯಕ್ಷ ಮಹ್ಮದ ಉಬೇದುಲ್ಲಾ ಮಾತನಾಡಿದರು. ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ್ ರಾಜಾ, ನಗರ ಸಭೆಯ ಸದಸ್ಯ ಅಮ್ಜದ ಹುಸೇನ, ಜಿ. ಪಂ. ಮಾಜಿ ಸದಸ್ಯೆ ಮಹಾದೇವಿ ಕೇಸರಟಗಿ, ನಗರ ಅಧ್ಯಕ್ಷ ರಾಜ ಮಹ್ಮದ, ವಿಜಯಲಕ್ಷ್ಮಿ ವೇದಿಕೆ ಮೇಲೆ ಇದ್ದರು.

ಬಸವರಾಜ ಮಯೂರ ನಿರೂಪಿಸಿ, ವಂದಿಸಿದರು. ಯೂಸುಫ ಸಾಹೇಬ, ಮಹ್ಮದ ಅಜರ, ಬಸವರಾಜ ದಂಡಗುಲಕರ,ಶೇಖ ಚಾಂದ ವಾಹೀದಿ, ಹಾಜಿಕರೀಮ, ಶೇಖ ಇಮ್ರಾನ, ಮಹ್ಮದ ಚಾಂದ, ಅಬ್ದುಲ ಜಬ್ಬಾರ ಇತರರು ಇದ್ದರು.

ಬೈಕ್ ರ್ಯಾಲಿ: ನಗರದ ಹಳೇ ಶಹಾಬಾದದಿಂದ ಪ್ರಾರಂಭಗೊಂಡು ಬೈಕ್ ರ್ಯಾಲಿ ರಿಂಗ್ ರಸ್ತೆಯ ಬಸವೇಶ್ವರ ವೃತ್ತ, ಶಾಸ್ತ್ರೀ ವೃತ್ತ, ನೆಹರು ವೃತ್ತ, ಮೂಲಕ ನಗರ ಸಭೆಯ ಮುಂಬಾಗದಲ್ಲಿ ಮುಂಭಾಗದಲ್ಲಿ ಮುಕ್ತಾಯಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here