ಬಣಗಾರ ಸಮಾಜಕ್ಕೆ ಸಮುದಾಯ ಭವನ ನೀಡುವೆ; ಶಾಸಕ ರಾಜುಗೌಡ

0
18

ಸುರಪುರ:ನಗರದ ರಂಗಂಪೇಟೆಯಲ್ಲಿನ ಜಡೆಯ ಶಂಕರಲಿಂಗ ದೇವಸ್ಥಾನದ 9ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ, ಸಮಾಜದಲ್ಲಿನ ಎಲ್ಲ ಜನರೊಂದಿಗೆ ಸದಕಾಲ ಪ್ರೀತಿ ವಿಶ್ವಾಸದಿಂದ ಬದುಕುವ ಸಮಾಜ ಎಂದರೆ ಅದು ಬಣಗಾರ ಸಮಾಜವಾಗಿದೆ,ಇದು ಸಣ್ಣ ಸಮುದಾಯವಲ್ಲ ತುಂಬಾ ಪ್ರೀತಿ ಸಾಮರಸ್ಯ ತುಂಬಿದ ದೊಡ್ಡ ಮನಸ್ಸಿನ ಸಮಾಜವಾಗಿದೆ ಎಂದರು.ಈ ಸಮಾಜಕ್ಕಾಗಿ ತಾವು ಮನವಿ ಮಾಡಿಕೊಂಡಂತೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಶಾಸಕನಾಗಿ ನಿಮ್ಮ ಸೇವೆ ಮಾಡುವ ಜೊತೆಗೆ ಸಮುದಾಯ ಭವನವನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ: ಸುರೇಶ ಸಜ್ಜನ್ ಮಾತನಾಡಿ,ಬಣಗಾರ ಸಮಾಜ ಮತ್ತು ಸಿಂಪಿಗೆ ಸಮಾಜ ಎರಡು ಸಮಾಜಗಳು ತುಂಬಾ ಅನೋನ್ಯವಾಗಿರುವ ಸಮುದಾಗಳಾಗಿವೆ,ಸಮಾಜದಲ್ಲಿನ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಯಾವುದಾದರೂ ಸಮಾಜ ಇದ್ದರೆ ಅದು ಬಣಗಾರ ಸಮಾಜ ಎಂದು ನಾನು ಹೆಮ್ಮೆಯಿಂದ ಹೇಳುವುದಾಗಿ ತಿಳಿಸಿದರು.

ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಶ್ರೀಗಳು ಸಾನಿಧ್ಯವಹಿಸಿದ್ದರು,ಸಮಾಜದ ಮುಖಂಡ ಶಂಕರಪ್ಪ ಬಣಗಾರ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಮೇಲೆ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಶಂಕರ ನಾಯಕ,ಶ್ರೀನಿವಾಸ ನಾಯಕ ದರಬಾರಿ,ಲಲಿತ ನಾಯಕ,ಅಂಬ್ರೇಶ ನಾಯಕ, ಸಮಾಜದ ಅಧ್ಯಕ್ಷ ಚಂದ್ರಶೇಖರ ಮಸ್ಕಿ,ಪ್ರ.ಕಾರ್ಯದರ್ಶಿ ಚಂದ್ರಶೇಖರ ಮಂಡಾ ಇದ್ದರು.ಕಾರ್ಯಕ್ರಮದಲ್ಲಿ ಮುಖಂಡರಾದ ಮಾನಪ್ಪ ಬಣಗಾರ,ನಾಗರಾಜ ಚಿಂಚೋಳಿ,ಪ್ರಕಾಶ ಬಣಗಾರ,ಸುರೇಶ ಖಾದಿ,ಮಲ್ಕಪ್ಪ ಯರಗೊಳ,ಸಂತೋಷ ನಾಗಲಿಕರ,ರಮೇಶ ಸಿರಗೋಜಿ,ಸಿದ್ದು ಚಿಂಚೋಳಿ,ಕಾಶಿನಾಥ ಸರಡಗಿ,ಬಸವರಾಜ ಬಣಗಾರ,ಬಸವರಾಜ ಸುರಪುರ,ವಿರೇಶ ಸಿರಗೋಜಿ,ನಾಗರಾಜ ಸಿರಗೋಜಿ ಸೇರಿದಂತೆ ಅನೇಕರಿದ್ದರು.ಶಿಕ್ಷಕ ಹೆಚ್,ರಾಠೋಡ ನಿರೂಪಿಸಿದರು,ಸ್ವಾಗತಿಸಿದರು,ಪ್ರಕಾಶ ಬಣಗಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here