ಕಲಬುರಗಿ : ಬಸವಕಲ್ಯಾಣ ತಾಲ್ಲೂಕಿನ ಬೇಲೂರಿನಲ್ಲಿ ನಡೆದ ಪ್ರಥಮ ಗ್ರಂಥಾಲಯ ಸಮ್ಮೇಳನ ಪೂಜ್ಯ ಉರಿಲಿಂಗಪೆದ್ದಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೂರು ಜನ ಸಾಧಕರಿಗೆ ಕರುನಾಡು ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇತಿಹಾಸ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಭಾಷಣಕಾರರಾಗಿ ಜನಗಳಿಗೆ ಅಂಬೇಡ್ಕರ್, ಬುದ್ಧ, ಬಸವ ಇವರ ವಿಚಾರಗಳನ್ನು ಪ್ರಸ್ತುತ ಪಡಿಸಿದರಿಂದ ಸರ್ಕಾರಿ ಮಹಾವಿದ್ಯಾಲಯದ ಇತಿಹಾಸ ಸಹ ಪ್ರಾಧ್ಯಾಪಕ ಡಾ. ವಿಜಯಕುಮಾರ ಸಾಲಿಮನಿ ಅವರಿಗೆ ಮತ್ತು ಕನ್ನಡ ಸಾಹಿತ್ಯ ಕಲೆ ಸಂಸ್ಕೃತಿ ಜಾನಪದ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪಂಡಿತ ಬಿ. ಕೆ ಅವರಿಗೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ ಬಡಿಗೇರ ಅವರ ಪ್ರಾಚೀನ ಭಾರತದ ಇತಿಹಾಸ ಮತ್ತು ಪುರಾತತ್ವ, ಸಂಶೋಧನಾ ಸೇವೆಯನ್ನು ಪರಿಗಣಿಸಿ ಇನ್ನಿತರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರಿಗೆ ಇಂದು ನಡೆದ ಪ್ರಥಮ ಗ್ರಂಥಾಲಯ ಸಮ್ಮೇಳನ ಮತ್ತು ಉರಿಲಿಂಗಪೆದ್ದಿ ಉಸ್ತವದಲ್ಲಿ ಕರುನಾಡ ಸಿರಿ ಪ್ರಶಸ್ತಿಯನ್ನು ಉರಿಲಿಂಗಪೆದ್ದಿ ಮಠದ ಪೀಠಾಧಿಪತಿಗಳಾದ ಪಂಚಾಕ್ಷರಿ ಸ್ವಾಮೀಜಿ ಅವರು ನೀಡಿ ಗೌರವಿಸಿದರು.