ಕಲಬುರಗಿ : ಜಿಲ್ಲೆಯ ಎಲ್ಲಾ ರೈತ ಬಾಂಧವರು, “ಪ್ರಧಾನ ಮಂತ್ರಿ ಫಸಲ ಭೀಮಾ” ಯೋಜನೆ ಅಡಿಯಲ್ಲಿ ಅವರವರ ಬೆಳೆಗಳಿಗೆ ವಿಮಾ ಮಾಡಿಸಿದ್ದು ಇರುತ್ತದೆ. ಹಾಗೂ ಸದ್ಯ ಸದರಿ ರೈತರು ಹೆಚ್ಚಿನ ಮಳೆಯಿಂದ ಹಾಗೂ ನೆಟೆ ರೋಗದಿಂದ ತೋಗರಿ ಬೆಳೆಯ ನಷ್ಟ ಅನುಭವಿಸಿದ್ದು ಇರುತ್ತದೆ. ಎಂದು ನವ ಕರ್ನಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆದರೆ ಸದರಿ ವಿಮಾ ಕಂಪನಿಯವರು ಮಾತ್ರ ರೈತರ ಖಾತೆಗೆ ವಿಮಾ ಹಣ ಜಮಾ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಮಾನ್ಯರೆ ನಿಜವಾದ ನಷ್ಟ ಅನುಭವಿಸಿದ ರೈತನಿಗೆ ಈ ವಿಮಾ ಕಂಪನಿಯವರು ವಿಮಾ ಹಣ ನೀಡುತ್ತಿಲ್ಲ, ರೈತರಿಗೆ ಬಹಳಷ್ಟು ವಂಚನೆ ಮಾಡುತ್ತಿದ್ದಾರೆ. ಆದರೆ ರೈತರ ಕಡೆಯಿಂದ ವಿಮಾ ಹಣ ಮಾತ್ರ ಪ್ರತಿ ವರ್ಷ ಪಾವತಿಸಿಕೊಳ್ಳುತ್ತಿದ್ದಾರೆ. ಬೆಳೆ ನಷ್ಟವಾದ ನಂತರ ಇವರು ಸದರಿ ರೈತರ ಬೆಳೆಗಳ ಬಗ್ಗೆ ಸರಿಯಾಗಿ ಬೆಳೆ ಸರ್ವೆ ಮಾಡುವುದಿಲ್ಲ, ಕುಳಿತಲ್ಲೆ, ಸರ್ವೆ ಮಾಡುತ್ತಾರೆ. ಹಾಗೂ ಸ್ಥಳಕ್ಕೆ ಹೊದರೂ ಕೂಡಾ ಸರಿಯಾಗಿ ಸರ್ವೆ ಮಾಡದೆ ಅಲ್ಲೂ ಸಹ ರೈತರಿಗೆ ವಂಚಿಸುತ್ತಿದಾರೆ. ಹೀಗಾಗಿ ವಿಮೆ ಪಾವತಿಸಿದ ರೈತ ಸಾಕಷ್ಟು ಸಂಕಷ್ಟು ಸಿಲುಕುತ್ತಿದ್ದಾನೆ.
ಮಾನ್ಯರೆ ರೈತರು ವಿಮಾ ಹಣ ಪಾವತಿಸುವಾಗ ಅವರಿಗೆ ಸರಳವಾಗಿ ಬೆಳೆ ನಷ್ಟ ವಿಮಾ ಹಣ ಪಾವತಿಸುತ್ತೇವೆಂದು ಪ್ರಚಾರ ಮಾಡುವ ಈ ವಿಮಾ ಕಂಪನಿಯವರು ಬೆಳೆ ನಷ್ಟವಾದ ತಕ್ಷಣೆ ರೈತರ ಜೊತೆ ಚಲ್ಲಾಟವಾಡುತ್ತಿದ್ದಾರೆ. ಒಂದು ತಾಲೂಕಿನಲ್ಲಿ 11 ಜನ ವಿಮಾ ಅಧಿಕಾರಿಗಳಿದ್ದು, ಆದರೂ ಕೂಡಾ ಸರಿಯಾಗಿ ಸರ್ವೆ ಮಾಡುತ್ತಿಲ್ಲ, ರೈತರೂ ವಿಮೆ ಕಂಪನಿಗೆ ಅಲೆದಾಡಿ ಅಲೆದಾಡಿ ಸುಸ್ತಾಗಿ ಹೋಗಿರುತ್ತಾರೆ.
ಒಟ್ಟಿನಲ್ಲಿ ನಮ್ಮ ಕಲಬುರಗಿ ಜಿಲ್ಲೆಯ ವಿಮಾ ಕಂಪನಿಯು ರೈತರಿಗೆ ತುಂಬಾ ವಂಚನೆ ಮಾಡುತ್ತಿದ್ದು, ಕಾರಣ ಅತ್ಯಂತ ಕಡಿಮೆ ಸಮಯದಲ್ಲಿ ನಮ್ಮ ಸಮಕ್ಷಮದಲ್ಲಿ ವಿಮಾ ಕಂಪನಿಯ ಅಧಿಕಾರಿಗಳಿಗೆ ಕರೆಯಿಸಿ, ರೈತರ ಸಮಕ್ಷಮದಲ್ಲಿಯೇ ಅವರ ವಿಮಾ ಸಮಸ್ಯೆ ಬಗೆ ಹರಿಸಿಕೊಟ್ಟು ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಬರದಂತೆ ವಿಮಾ ಕಂಪನಿಯವರಿಗೆ ಸೂಕ್ತ ಕ್ರಮ ಕೈಕೊಂಡು ವಂಚನೆಗೆ ಒಳಗಾದ ರೈತರಿಗೆ ಕೂಡಲೇ ಮೇಲೆ ತಿಳಿಸಿದ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ವಿಮೆ ಬಿಡುಗಡೆಗೊಳಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಂಘದ ರಾಜ್ಯ ಅಧ್ಯಕ್ಷ ದಯಾನಂದ ಪಾಟೀಲ್, ತಾಲುಕ ಅಧ್ಯಕ್ಷ ಮಲ್ಲಿನಾಥ ಆರ್. ಸೆಂಗಜಿ, ರೈತ ಮುಖಂಡರಾದ ಕಲ್ಯಾಣರಾವ ನಾಗೋಜಿ, ವಿಧ್ಯಾಧರ ಕಾಶಿನಾಥ, ವೀರಯ್ಯ ಎ. ಸ್ವಾಮಿ, ಶಿವಾನಂದ ಆರ್. ಗರೂರ, ಕೂಸಯ್ಯ ಗುತ್ತೇದಾರ, ಮಹೇಶ ಎಚ್ ಇದ್ದರು.