ಕಲಬುರಗಿ: ಬಸವ ನಗರದಲ್ಲಿ 2017-18 ನೇ ಸಾಲಿನ ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವಿಧ ಸಮುದಾಯಗಳ ವಸತಿ ನಿಲಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶ್ರೀ ಬೀರಪ್ಪ ದೇವಸ್ಥಾನ ಟ್ರಸ್ಟ್ನ್ ಬಸವ ನಗರ ಬ್ರಹ್ಮಪುರ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಹಾಗೂ ಕುರಬ ಸಮಾಜದ ನಿವೃತ ಅಧಿಕಾರಿಗಳಿಗೆ ಸನ್ಮಾನ ಸಮಾರಂಭವನ್ನು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಉದ್ಘಾಟಿಸಿದರು.
ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಪಾಲಿಕೆ ಸದಸ್ಯರಾದ ರೇಣುಕಾ ಹೋಳ್ಕರ್, ಗುರುರಾಜ ಪಟ್ಟಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಗುರುನಾಥ ಪೂಜಾರಿ, ಟ್ರಸ್ಟ ಅಧ್ಯಕ್ಷರಾದ ದೇವೀಂದ್ರಪ್ಪ ನಾಯಿಕೋಡಿ ವಸಂತ ಬನ್ನೂರಕರ, ರವಿ ಪೂಜಾರಿ, ಪರಮೇಶ ಆಲಗೂಡ, ಶರಣು ಬೇಲೂರ, ರವಿ ಕಟ್ಟಿಮನಿ, ಶೀವು ಕೊಟ್ಟರಗಿ, ರಮೇಶ ಕನಗೋಂಡ, ನಿಂಗಣ್ಣ ಮತ್ತಿಮೂಡ, ಡಾ. ಶಂಕರ ಬಾಳಿ ಇದ್ದರು.