ಬೆಳೆ ನಷ್ಟವಾದ ರೈತರು 72 ಗಂಟೆಯೊಳಗಾಗಿ ವಿಮಾ ಸಂಸ್ಥೆಗೆ ಮಾಹಿತಿ ನೀಡಿ

0
72

ಕಲಬುರಗಿ: ಜಿಲ್ಲೆಯ ೨೦೧೯-೨೦ ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭಿಮಾ (ವಿಮೆ) ಯೋಜನೆಯಡಿ ಮುಂಗಾರು ಹಂಗಾಮಿಗೆ ಬೆಳೆ ವಿಮೆಗೆ ನೊಂದಾಯಿಸಿಕೊಂಡ ರೈತರು ಪ್ರಕೃತಿ ವಿಕೋಪಗಳಾದ ಭೂ ಕುಸಿತ, ಬೆಳೆ ಮುಳುಗಡೆ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದ್ದಲ್ಲಿ ಕೂಡಲೇ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಬೆಳೆಯ ವಿವರಗಳೊಂದಿಗೆ ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು ೭೨ ಗಂಟೆಯೊಳಗಾಗಿ ತಿಳಿಸಬೇಕೆಂದು ಎಂದು ಕಲಬುರಗಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ್ ಸುಗೂರು ಅವರು ತಿಳಿಸಿದ್ದಾರೆ.

ಬೆಳೆ ವಿಮೆಗೆ ನೋಂದಾಯಿಸಿದ ರೈತರಿಗೆ ಸ್ಧಳ, ನಿರ್ದಿಷ್ಟ, ಪ್ರಕೃತಿ ವಿಕೋಪಗಳಾದ ಭೂ ಕುಸಿತ, ಬೆಳೆ ಮುಳುಗಡೆ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ಬೆಳೆ ನಷ್ಟ ಪರಿಹಾರವನ್ನು ಯೋಜನೆಯ ಮಾರ್ಗಸೂಚಿಯನ್ವಯ ಇತ್ಯರ್ಥಪಡಿಸಲಾಗುತ್ತದೆ. ಜಿಲ್ಲೆಯ ನೊಂದಾಯಿಸಿಕೊಂಡ ರೈತರು ವಿಮೆ ಪ್ರಸ್ತಾವನೆ ಸಂಖ್ಯೆ, ಆಧಾರ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪುಸ್ತಕ ವಿವರಗಳೊಂದಿಗೆ ಬೆಂಗಳೂರಿನ ಫ್ಯೂಚರ ಜೆನೆರಲಿ ಜನರಲ್ ಇನ್ಸುರೆನ್ಸ ಕಂಪನಿ ಲಿಮಿಟೆಡ್‌ನ ವಿಮಾ ಸಂಸ್ಥೆಯ ಟೋಲ್ ಫ್ರೀ ದೂರವಾಣಿ ಸಂಖ್ಯೆ 18004257919, 18002664141 ಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕು.

Contact Your\'s Advertisement; 9902492681

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಬೆಳೆ ವಿಮೆ ನೋಂದಣಿ ಮಾಡಿಸಿದ ಬ್ಯಾಂಕುಗಳಿಗೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here