ಆಳಂದ: ತಾಲೂಕಿನ ನರೋಣಾ ಗ್ರಾಮದಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಕ್ರಾಂತಿಕಾರಿ ಯುವಕ ಸಂಘ ಆಶ್ರಯದಲ್ಲಿ ತಾಲೂಕ ಮಟ್ಟದ ವಿವಿಧ ಕ್ರೀಡಾಕೂಟ ನಡೆಯಿತು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನ ಆಯೋಜಿಸಿದ್ದ ಕ್ರೀಡಾಕೂಟವನ್ನು ಬೇಡಜಂಗಮ ಸಂಘದ ಅಧ್ಯಕ್ಷ ಗುರುಸಿದ್ಧಯ್ಯ ಮಠಪತಿ ಉದ್ಘಾಟಿಸಿ, ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಸದೃಢತೆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಸೋಲು ಗೆಲವು ಲೆಕ್ಕಿಸದೆ ಮೊದಲು ಭಾಗವಹಿಸಿವುದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಚಿಚ್ಕೋಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಿವಪುತ್ರ ರಾಗಿ, ಚಂದ್ರಕಾಂತ ಕೋರೆ, ಕೈಲಾಸ ರಾಗಿ ಅಂಬುಬಾಯಿ ಕಲಶಟ್ಟಿ, ಅರುಣ ಕುಮಾರ್ ಬೈರಗೊಂಡ, ನಾಗಪ್ಪ ಎಸ್ ದೇವಂತಿಗಿ, ಎಸ್‍ಡಿಎಂಸಿ ಉಪಾಧ್ಯಕ್ಷ ಜಯಶ್ರೀ, ದೈಹಿಕ ಶಿಕ್ಷಕಿ ಅಕ್ಕಮಹಾದೇವಿ ಮನೋಹರ ಮತ್ತಿತರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ಕ್ರೀಡಾ ತಂಡಗಳು ಭಾಗವಹಿಸಿ ಆಯೋಜಿತ ವಾಲಿಬಾಲ್ ಕಬ್ಬಡಿ, ರನ್ನಿಂಗ್, ಗುಂಡು ಎಸೆತ ಸ್ಫರ್ಧೆ ವಿಜೆತರಿಗೆ ಬಹುಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.