ಕಲಬುರಗಿ: ಪ್ರತಿ ವರ್ಷದಂತೆ ನಗರದ ಜಯನಗರ ಶಿವಮಂದಿರದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಇಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಅದ್ದೂರಿಯಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ ಜರುಗಿತು.
ಬೆಳಿಗ್ಗೆ 5 ಗಂಟೆಗೆ ಶಿವನಿಗೆ ರುದ್ರಾಭಿಷೇಕ ನಡೆಯುಯಿತು.ನಂತರ ಭಕ್ತಾದಿಗಳಿಂದ ಅಭಿಷೇಕ ನಡೆಯುತ್ತವೆ.ಬೆಳಿಗ್ಗೆ 10:30ಕ್ಕೆ ಖ್ಯಾತ ಜ್ಯೋತಿಷಿ,ವೇದ ಪಂಡಿತ ಡಾ. ಬಸವರಾಜ ಗುರೂಜಿ ಕಲಗುರ್ತಿ ಅವರ ನೇತೃತ್ವದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಜರುಗಿತು.ನಂತರ ಅವರು ಮಂಗಲ ಕಾರ್ಯ ಕುರಿತು ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ತಿಳಿಸಿದರು.ಈ ಸಮಯದಲ್ಲಿ ವಿಶೇಷವಾಗಿ ನಾದ ಸ್ವರ ಮೊಳಗಿದ್ದು ವಿಶೇಷವಾಗಿತ್ತು.
ಇದಕ್ಕೂ ಮೊದಲು ಶಿವ ಪಾರ್ವತಿ ಭಾವಚಿತ್ರದೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಹಿರಿಯರು ಹಾಗೂ ಭಕ್ತರು ಭಾಗವಹಿಸಿದ್ದರು.
ಶಾಸಕ ಶಶೀಲ್ ನಮೋಶಿ, ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಹೋರಾಟಗಾರ ಲಿಂಗರಾಜ ಸಿರಗಾಪೂರ, ಉಪಾಧ್ಯಕ್ಷ ವಿರೇಶ ದಂಡೋತಿ, ವಿರುಪಾಕ್ಷಿ ವಾಲಿ,ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಪದಾಧಿಕಾರಿಗಳಾದ ಬಸವರಾಜ ಅನ್ವರಕರ, ವಾಸುದೇವ ಮಾಲಿ ಬೀರಾದರ,ಎಂ.ಡಿ.ಮಠಪತಿ, ಭೀಮಾಶಂಕರ ಶೆಟ್ಟಿ, ಸುನೀಲ್ ಬಿಡಪ, ಬಂಡೆಪ್ಪ ಕೇಸೂರ, ಬಸವರಾಜ ಪುರ್ಮ, ಮಲ್ಲಯ್ಯ ಸ್ವಾಮಿ ಬಿದಿಮನಿ, ಅನುರಾಧ ಕುಮಾರಸ್ವಾಮಿ, ಶ್ರೀಮತಿ ಸುಷ್ಮಾ ಬಸವರಾಜ ಮಾಗಿ, ಗೀತಾ ಲಿಂಗರಾಜ, ಅಶೋಕ ಪಾಟೀಲ,ಜಿ.ಜಿ.ವಣಿಕ್ಯಾಳ,ಸಿ.ಎಸ್.ಮಾಲಿಪಾಟೀಲ್, ಪ್ರಶಾಂತ ತಂಬೂರಿ, ವಿಜಯಾ ದಂಡೋತಿ, ಪ್ರಶಾಂತ ತಂಬೂರಿ,ಗುರು ಮುಕರಂಬಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.