ಸುರಪುರ:ಗುಲರ್ಬ ವಿಶ್ವ ವಿದ್ಯಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕಲಬುರ್ಗಿ ವಿಭಾಗಿಯ ಸಹ ಪ್ರಮುಖ ಡಾ:ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ವಿವಿ ಸ್ಥಾಪನೆಯಾಗಿ 40 ವರ್ಷಗಳಾಗುತ್ತಿವೆ,ವಿಶ್ವ ವಿದ್ಯಾಲಯ ಶಿಕ್ಷಣದ ಕಾಶಿಯಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಬದಲು ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದರು.
ಸರಿಯಾದ ಸಮಯಕ್ಕೆ ಪರೀಕ್ಷೆಗಳು ನಡೆಸುವುದಿಲ್ಲ,ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಉದ್ದೇಶಪೂರ್ವಕವಾಗಿ ಶೂನ್ಯ ಅಂಕ ಬರುವಂತೆ ಮಾಡುವುದು,ಆವಕ ಶಾಖೆಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ನಿರ್ಲಕ್ಷ್ಯ ಮಾಡುವುದು,ಕುಂಟು ನೆಪ ಹೇಳಿ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯುವುದು,ಪದವಿ ಪರೀಕ್ಷೆ ಕೇಂದ್ರಗಳಿಗೆ ಅರ್ಹತೆ ಇಲ್ಲದ ಉಪನ್ಯಾಸಕರನ್ನು ಬಾಹ್ಯ ಮೇಲ್ವಿಚಾರಕರನ್ನಾಗಿ ನೇಮಕಗೊಳಿಸುವುದು,ಹೊಸ ಪದವಿ ಕಾಲೇಜುಗಳಿಗೆ ನಿಯಮ ಮೀರಿ ಅರ್ಹತೆ ಇಲ್ಲದಿದ್ದರು ಅನುಮತಿ ನೀಡುವುದು ಸೇರಿದಂತೆ ಅನೇಕ ಅಕ್ರಮಗಳು ನಡೆಯುತ್ತವೆ ಎಂದು ಆರೋಪಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಹನುಂತ ಸಿಂಗೆ, ಕಾರ್ಯದರ್ಶಿ ವಿನೋದ ಕುಮಾರ,ಮಾರುತಿ,ದ್ಯಾವಣ್ಣ,ಮಹೆಬೂಬ,ವಿಶ್ವನಾಥ,ಭಾರ್ಗವ ನಾಯಕ,ಪಿಡ್ಡಪ್ಪ,ಶ್ರೀನಿವಾಸ,ಮುಸ್ಕಾನ್,ರಾಧಿಕ,ಕಾವ್ಯ,ಬಸ್ಸಮ್ಮ,ಉಮಾಶ್ರೀ ಸೇರಿದಂತೆ ಅನೇಕರಿದ್ದರು.