ಸರ್ವಜಾತಿಯವರಿಗೆ ಶರಣರು ದೇವರಾಗಿದ್ದರು

0
84

ಯಾವುದೇ ಜಾತಿ ಇರಲಿ ಎಲ್ಲರನ್ನು ಸಮಾನವಾಗಿ ಕಂಡು ಸರ್ವಜಾತಿಯವರಿಗೆ ಶರಣಬಸವೇಶ್ವರರು ದೇವರಾಗಿದ್ದರು ಎಂದು ಪ್ರಾಧ್ಯಾಪಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಎಲ್ಲರನ್ನು ಸಮಾನತೆ ದೃಷ್ಟಿಯಿಂದ ಕಾಣುತ್ತಲಿದ್ದ ಶರಣರಲ್ಲಿಗೆ ಮುಸಲ್ಮಾನ ಮುಲ್ಲಾನೊಬ್ಬನು ಬಂದು ಗರ್ವದ ಮಾತುಗಳನ್ನು ಆಡುತ್ತಿದ್ದ. ಎಲ್ಲಾ ಜಾತಿಯವರು ಅಲ್ಲಿಯೇ ಇದ್ದ ವಿಭೂತಿಯನ್ನು ಹಣೆಗಚ್ಚಿಕೊಂಡರೂ ಆತ ಅದನ್ನು ತಿರಸ್ಕಾರ ಮಾಡುತ್ತಾನೆ. ಮರುದಿನ ಮುಂಜಾನೆ ಏಳುವಷ್ಟರಲ್ಲಿ ಹಣೆಯ ಮೇಲೆ ಗುಳ್ಳೆಯೆದು ನೋವುಂಟು ಮಾಡುತ್ತವೆ. ಎಲ್ಲಿ ತೋರಿಸಿದರೂ ಕಡಿಮೆಯಾಗುವುದಿಲ್ಲ. ತಾನು ಮಾಡಿದ ತಪ್ಪಿನ ಅರಿವಾಗಿ ಶರಣರ ಹತ್ತಿರ ಬರುತ್ತಾನೆ. ಶರಣ ಎಂದು ಜೋರಾಗಿ ಜಪಿಸುತ್ತಾನೆ. ಶರಣರ ಪಾದವಿಡಿದು ಒಂದೇ ಸಮನೆ ಅಳುತ್ತಾನೆ. ಶರಣರು ವಿಭೂತಿಯನ್ನು ಆತನ ಹಣೆಗಚ್ಚಿದಾಗ ಒಂದು ಕ್ಷಣದಲ್ಲಿ ರೋಗ ಮಾಯವಾಗುತ್ತದೆ. ಕೊನೆವರೆಗೂ ವಿಭೂತಿ ಹಚ್ಚಿಕೊಂಡು ಅವರ ಪರಮ ಭಕ್ತನಾಗುತ್ತಾನೆ.

ಒಂದು ಸಲ ಜೋಗತಿ ಶರಣರಲ್ಲಿಗೆ ಬಂದು ಸಂತಾನ ಕರುಣಿಸಿ ಎಂದು ಕೇಳಿದಾಗ ಶರಣರು ಸಾವಿರ ರೂಪಾಯಿ ಸಲ್ಲಿಸಲು ಹೇಳುತ್ತಾರೆ. ಸಾವಿರ ರೂಪಾಯಿ ಕೊಡುವುದಾಗಿ ಅವಳು ಹೇಳುತ್ತಾನೆ. ಮುಂದೆ ಅವಳಿಗೆ ಗಂಡು ಮಗು ಜನಿಸುತ್ತದೆ. ಆದರೆ ಅದು ಕಣ್ಣು ಮತ್ತು ಕಾಲು ಬಡಿಯುವುದಿಲ್ಲ. ಉಸಿರು ಮಾತ್ರ ಇದೆ. ಅವಳಿಗೆ ತಾನು ಮಾಡಿದ ತಪ್ಪು ನೆನೆಪಾಗುತ್ತದೆ. ಶರಣರಲ್ಲಿಗೆ ಬಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾಳೆ. ಶರಣರು ವಿಭೂತಿ ತಂದೆ ಕೂಸಿನ ಹಣೆಗೆ ಹಚ್ಚಿದಾಗ ಕೂಸು ಕಣ್ಣು ತೆರೆದು ಶರಣರ ಮುಖ ನೋಡುತ್ತದೆ. ಸಾವಿರ ರೂಪಾಯಿ ದಾಸೋಹಕ್ಕರ್ಪಿಸಿ ಹರಕೆ ತಿರಿಸುತ್ತಾಳೆ.

ಪತ್ತರಿಗಿಡವದು ಪಾಪಿಯೊಬ್ಬ ಹಚ್ಚ್ಯಾನ
ಪಾಪಿಯ ಕೈಗಿಡ ಪತ್ತರಿ | ಕೊಡವಲ್ದು
ಲಿಂಗಪೂಜೆ ಅವು ಸಲ್ಲವು

ಗವಳಿಗೇರ ಮಾಲಿಂಗ ಒಳ್ಳೆಯ ಗುಣಗಳನ್ನು ಪಡೆದು ಶರಣರ ಭಕ್ತನಾಗಿದ್ದ. ಅವನಲ್ಲಿದ್ದ ಹೈನದ ಎಮ್ಮೆಯು ಹಾಲು ಕೊಡದೆ ಒದೆಯುತ್ತಿತ್ತು. ಶರಣರ ಹತ್ತಿರ ಬಂದು ಕೇಳಿದಾಗ ಶರಣು ನಿನ್ನ ಮನೆಯ ಹಿರಿಯರು ಹಾಲಿಗೆ ಅರ್ಧಕ್ಕಿಂತ ಹೆಚ್ಚು ನೀರು ಹಾಕಿ ಮಾರಿದ್ದಾರೆ. ಅಲ್ಲದೆ ಬಡವರು ಹಾಲು, ಮಜ್ಜಿಗೆಗಾಗಿ ಬಂದರೆ ನಾಯಿ ಬಿಟ್ಟು ಕಚ್ಚಿಸಿದ್ದಾರೆ. ಹಾಲು ಕೊಡುವ ದನಕರುಗಳಿಗೆ ಸರಿಯಾಗಿ ಮೇವು ನೀರು ಹಾಕಿಲ್ಲ. ಆ ಪಾಪ ನಿನ್ನ ಮನೆಯಲ್ಲಿ ಹೆಚ್ಚಾಗಿದೆ. ಹೀಗಾಗಿ ದನಗಳು ಹೀಗೆ ಮಾಡುತ್ತಿವೆ ಎಂದು ಹೇಳುತ್ತಾರೆ. ಮುಂದೆ ಮಾಲಿಂಗ ಶರಣರ ಆದೇಶದಂತೆ ವಿಭೂತಿಯನ್ನು ದನಕರುಗಳಿಗೆ ಹಚ್ಚಿ ’ ಓಂನಮಃ ಶಿವಾಯ’ ಎಂದು ದಿನಾಲು ಹಾಲು ಹಿಂಡುವಾಗು ಹೇಳುತ್ತಾನೆ. ಮುಂದೆ ಮಾಲಿಂಗನಿಗೆ ಆದಾಯ ಹೆಚ್ಚಾಗಿ ದಾಸೋಹಕ್ಕೆ ಹಾಲು, ಮಜ್ಜಿಗೆ ಅರ್ಪಿಸುತ್ತಿದ್ದ.

ಶರಣರು ಮಹಾಮನೆಯ ಎದುರಿಗೆ ಇರುವ ಕೆರೆಗೆ ದಿನಂಪ್ರತಿ ಹೋಗುತ್ತಿದ್ದರು. ಅಲ್ಲಿಯ ಮೀನುಗಳನ್ನು ಮಕ್ಕಳಂತೆ ಕಾಣುತ್ತಿದ್ದರು. ಒಂದು ಶರಣ ಮೇಲಿನ ಹೊಟ್ಟೆಕಿಚ್ಚಿಗಾಗಿ ಕೆಲವು ಜನರು ವಿಷತಂದು ಕೆರೆಯಲ್ಲಿ ಚಲ್ಲಿ ಬಿಟ್ಟರು. ಮೀನುಗಳು ಸತ್ತು ಹೋದವು. ಇದು ಶರಣರಿಗೆ ತಿಳಿಯುತ್ತದೆ. ವಿಭೂತಿ ಹಿಡಿದು ಕೆರೆಗೆ ಬಂದು ಸತ್ತು ಬಿದ್ದ ಮೀನುಗಳ ಮೇಲೆ ಹಾಕಿದಾಗ ಮೀನುಗಳೆಲ್ಲವೂ ಜೀವಂತವಾಗಿ ಕೆರೆ ಸೇರಿದವು. ಆ ಕಡೆ ಜೀವಹಿಂಸೆ ಮಾಡಿದವರೆಲ್ಲ ನೆಲಕ್ಕೆ ಬಿದ್ದು ಮೀನುಗಳಂತೆ ಚಡಪಡಿಸುತ್ತಾರೆ. ಶರಣರ ಪಾದಕ್ಕೆ ಅವರನ್ನು ತಂದು ಹಾಕಿದಾಗ ಶರಣರ ಪಾದ ಹಿಡಿದು ಅಳಲುತ್ತಾರೆ. ಕೈಯಲ್ಲಿದ್ದ ವಿಭೂತಿಯ ಚೂರನ್ನು ಅವರ ಬಾಯೊಳಗೆ ಹಾಕಿದಾಗ ಅವರು ಮೊದಲಿನಂತಾಗುತ್ತಾರೆ ಎಂದು ಶರಣರ ಲೀಲೆಗಳನ್ನು ಹೇಳಿದರು.

ಡಾ. ಸುಜಾತಾ ಜಂಗಮಶೆಟ್ಟಿ, ಪ್ರಾಧ್ಯಾಪಕಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here