ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚಲು ಪತ್ರಕರ್ತರ ನಿರ್ಧಾರ

0
54

ಯಾದಗಿರಿ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಪ್ರವಾಹದಿಂದ ನಲುಗಿದ ಕುಟುಂಬಗಳ ಸಹಾಯಕ್ಕಾಗಿ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚಲು ನಿರ್ಧರಿಸಲಾಯಿತು.

ಇದೇ ವೇಳೆ ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂಧುಧರ ಸಿನ್ನೂರ, ಸಂತ್ರಸ್ಥರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಜಿಲ್ಲೆಯಲ್ಲಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು ಹೀಗೆ ಸಮಾಜದ ನಾನಾ ಬಗೆಯ ಯುವ ಮುಖಂಡರುಗಳಿಂದ ಕೂಡ ದೇಣಿಗೆ ಸಂಗ್ರಹಿಸಿ ನೆರೆ ಸಂತ್ರಸ್ಥರಿಗೆ ನೀಡೋಣ ಎಂದು ಹೇಳಿದರು.

Contact Your\'s Advertisement; 9902492681

ಇದಕ್ಕೆ ಸಮ್ಮತಿಸಿದ ಹಿರಿಯ ಪತ್ರಕರ್ತರಾದ ಅನೀಲ ದೇಶಪಾಂಡೆ, ಎಸ್.ಎಸ್.ಮಠ ನಗರದಲ್ಲಿ ಕೆಲವು ವ್ಯಾಪಾರಿಗಳಿಂದ ಮತ್ತು ಉದ್ಯಮಿಗಳಿಂದಲೂ ಕೂಡ ಸಹಾಯ ಪಡೆಯೋಣ ಒಟ್ಟಿನಲ್ಲಿ ನೆರೆ ಸಂತ್ರಸ್ಥರಿಗೆ ನೀಡುವ ಮನಸ್ಸಿದ್ದವರು ಯಾರೆ ಇದ್ದರೂ ಅವರು ನಮ್ಮ ಸಂಘವು ದೇಣಿಗೆ ಸಂಗ್ರಹಿಸುವ ಸಂದರ್ಭದಲ್ಲಿ ಬಂದು ದೇಣಿಗೆಯನ್ನು ನೀಡಬಹುದು ಎಂದು ತಿಳಿಸಿದರು. ಪತ್ರಕರ್ತರಾದ ಲಕ್ಷ್ಮೀಕಾಂತ ಕುಲಕರ್ಣಿ, ಮಹೇಶ ಕಲಾಲ ಮಾತನಾಡಿ, ನಗರದಲ್ಲಿ ಸಂಗ್ರಹಿಸಿದ ದೇಣಿಗೆಯನ್ನು ನಮ್ಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗಳಿಗೆ ಸಲ್ಲಿಸೋಣ. ಇದರಿಂದ ಪ್ರಕೃತಿ ವಿಕೋಪದಡಿಯಲ್ಲಿ ಸರ್ಕಾರ ಬಡವರ ನೆರವಿಗೆ ಧಾವಿಸಲು ಇನ್ನಷ್ಟು ಬಲ ಬಂದಂತಾಗುತ್ತದೆ ಎಂದು ಸಲಹೆ ನೀಡಿದರು.

ರವಿಕುಮಾರ ನರಬೋಳಿ, ರವಿ ಕುಲಕರ್ಣಿ ಮಾತನಾಡಿ, ಈಗಾಗಲೇ ಸಾಕಷ್ಟು ಸಮಯವಾಗಿದೆ. ಸುದ್ದಿ ಸಂಗ್ರಹಿಸುವ ಸಮಯದಲ್ಲಿ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚಲು ದಿನಗಳು ಕಳೆದಂತಾಗಿವೆ ನಾಳೇನೇ ನಿಧಿ ಸಂಗ್ರಹಿಸಿ ಸಲ್ಲಿಸೋಣ ಎಂದು ಸಲಹೆ ನೀಡಿದರು. ಪತ್ರಕರ್ತರಾದ ಸಾಗರ ದೇಸಾಯಿ, ರಾಜು ನಲ್ಲಿಕರ್ ಮಾತನಾಡಿ, ಎಲ್ಲ ಸಂಘ ಸಂಸ್ಥೆಗಳ ಮುಖಂಡರಿಗೆ ಮತ್ತು ಜನಪ್ರತಿನಿಧಿಗಳಿಗೆ ನಮ್ಮ ಸಮಯವನ್ನು ತಿಳಿಸೋಣ ಅವರು ಕೂಡ ಅಂದು ಬಂದು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಲಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here