ಕನ್ನಡಿಗರು ತೊಂದರೆಯಲ್ಲಿದ್ದರೆ ಸಹಾಯಕಕ್ಕೆ ಕರವೇ ಸದಾ ಮುಂದೆ: ಶರಣು ಗದ್ದುಗೆ

0
40

ಯಾದಗಿರಿ: ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆಗಾಗಿ ಅಷ್ಟೇ ಅಲ್ಲದೇ ಕನ್ನಡಿಗರು ತೊಂದರೆಯಲ್ಲಿದ್ದರೆ ಅವರನ್ನು ರಕ್ಷಣೆ ಮಾಡಲು ಕರವೇ ಸದಾ ಸನ್ನದ್ಧ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ ಹೇಳಿದರು.

ಪ್ರವಾಹಕ್ಕೆ ಒಳಗಾದ ಕುಟುಂಬದವರಿಗೆ ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಕರವೇ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ನೀಡಲಾದ ಅಪಾರ ಪ್ರಮಾಣದ ದಿನಸಿ ಪದಾರ್ಥಗಳನ್ನು ಹಸ್ತಾಂತೆರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ರವರು ದಿನಸಿಗಳನ್ನು ಹೊತ್ತು ಹೊರಟು ನಿಂತ ಪ್ರಯಾಣದ ವಾಹನಕ್ಕೆ ಚಾಲನೆ ನೀಡಿದರು. ಪ್ರವಾಹ ಸಮಸ್ಯೆ ಪರಿಹಾರ ಕುರಿತು ಡಿ ಸಿ ಕುರ್ಮರಾವ್ ಅವರ ಜೊತೆಗೆ ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕರವೇ ಅದ್ಯಕ್ಷ ರಾಮಾಂಜನೇಯ. ಚಂದ್ರಶೇಖರ, ನಾಗರಾಜ, ಶ್ರೀನಿವಾಸ, ಸಿದ್ದುರಡ್ಡಿ, ಶರಣು ಇಟಗಿ, ರಾಜು, ಮುಂತಾದವರಿದ್ದರು.

ಬಳ್ಳಾರಿ ಜಿಲ್ಲಾ ಕರವೇ ಘಟಕ ಯಾದಗಿರಿ ಜಿಲ್ಲೆಯ ಸಂತ್ರಸ್ತರಿಗಾಗಿ ನೀಡಿದ ೬ ಕ್ವಿ ಅಕ್ಕಿ, ೨ ಕ್ವಿ ರವಾ, ೨ ಕ್ವಿ ಬೇಳೆ, ೪೦೦ ಸಾಬುನು, ೫೦೦ ಬಟ್ಟೆಗಳು, ೧ ಕ್ವಿ ಸಕ್ಕರೆ, ೪೦೦ ಪೆಸ್ಟ,  ೪೦೦ ಬ್ರಷ್, ೧೦೦ ಕೆಜಿ ಎಣ್ಣಿ, ೫೦ ನೀರಿನ ಬಾಟಲ್‌ನ ಬಾಕ್ಸ್‌ಗಳು, ೨ ಕ್ವಿ ಈರುಳ್ಳಿ ಸೇರಿದಂತೆ ಇನ್ನಿತರೆ ದಿನಸಿ ವಸ್ತುಗಳನ್ನು ನೀಡಿದ ದೇಣಿಗೆ ಸಾಮಾನುಗಳು ಜಿಲ್ಲೆಯ ನೆರೆ ಪರಿಹಾರ ಕೇಂದ್ರಗಳಿಗೆ ರವಾನೆಯಾದವು ಎಂದು ಶರಣು ಗದ್ದುಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here