ಶರಣರ ಅನುಭಾವದಿಂದ ಬದುಕು ಹಸನವಾಗುತ್ತದೆ

0
12

ಭಾಲ್ಕಿ; ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿರುವ 463 ನೆಯ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಶರಣ ಬಿಬ್ಬಿ ಬಾಚಯ್ಯನವರ ಸ್ಮರಣೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ, ಬಸವಾದಿ ಶರಣರು ಬೋಧಿಸಿದ ವಚನಗಳು ಅನುಭಾವದ ಮಹಾಸಾಗರವಾಗಿವೆ. ಅನುಭಾವದಿಂದ ಹೊರಹೊಮ್ಮಿದ ವಚನಗಳ ಅಧ್ಯಯನ ಮತ್ತು ಆಚರಣೆಗಳಿಂದ ನಮ್ಮ ಬದುಕು ಹಸನವಾಗುತ್ತದೆ. ಅದನ್ನು ಮತ್ತೆ ಮತ್ತೆ ಮೇಲಕು ಹಾಕು ಸದುದ್ದೇಶದಿಂದ ಪ್ರತಿ ತಿಂಗಳು ಶಿವಾನುಭವಗೋಷ್ಠಿಯನ್ನು ಮಾಡಲಾಗುತ್ತಿದೆ. ಶಿವಾನುಭವಗೋಷ್ಠಿಯಲ್ಲಿ ಭಾಗಿಯಾಗುವ ಮೂಲಕ ನಾವು ಶರಣರ ಚಿಂತನೆಗಳನ್ನು ನೆನೆಪಿಸಿಕೊಳ್ಳಬೇಕು. ಅದನ್ನು ನಮ್ಮ ಬದುಕಿನಲ್ಲಿ ಆಚರಿಸುವ ಪ್ರಯತ್ನ ಪಡಬೇಕು. ಅಂದಾಗಲೇ ಶರಣರು ಬಯಸಿದ ಕಲ್ಯಾಣ ರಾಜ್ಯವನ್ನು ನಿರ್ಮಾಣವಾಗುತ್ತದೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಅನುಭಾವ ನೀಡಿದ ಶರಣಸಾಹಿತಿಗಳಾದ ವಿಶ್ವರಾಧ್ಯ ಸತ್ಯಂಪೇಟೆ ಅವರು ಶರಣ ಬಿಬ್ಬಿ ಬಾಚಯ್ಯನವರ ಜೀವನ ದರ್ಶನವನ್ನು ಮಾಡಿಸಿದರು. ಬಿಬ್ಬಿ ಬಾಚಯ್ಯನವರು ಬಸವ ಸಮಕಾಲೀನ ಮಹಾಶರಣರು, ಅವರು ಪ್ರಸಾದ ಮಹಿಮೆಯನ್ನು ತೋರಿಸಿದ್ದಾರೆ. 100 ಕ್ಕಿಂತಲೂ ಹೆಚ್ಚಿನ ವಚನಗಳು ಬರೆದಿದ್ದಾರೆ. ಅವರ ವಚನಗಳಲ್ಲಿ ಬಸವಾದಿ ಶರಣರ ಸ್ತುತಿ ಮತ್ತು ಪ್ರಸಾದ ತತ್ವದ ನಿರೂಪಣೆಯನ್ನು ಒಳಗೊಂಡಿದೆ. ಅವರು ಮಾಡುವ ಕಾಯಕ ಬಹುಮಹತ್ವದ್ದು, ಕಲ್ಯಾಣ ಪರಿಸರದಲ್ಲಿ ಗಣಪರ್ವಗಳನ್ನು ನಡೆಯುತ್ತಿದ್ದವು, ಬಿಬ್ಬಿ ಬಾಚಯ್ಯನವರು ಅಂತಹ ಪರ್ವಗಳಲ್ಲಿ ಭಾಗಿಯಾಗಿ ಅಲ್ಲಿ ಹೆಚ್ಚಾಗಿರುವ ಪ್ರಸಾದವನ್ನು ತೆಗೆದುಕೊಂಡು ಬಂದು ಹಸಿದವರಿಗೆ ಪ್ರಸಾದ ಉಣಬಡಿಸುವ ಪವಿತ್ರ ಕಾಯಕ ಮಾಡುತ್ತಿದ್ದರು ಎಂದು ನುಡಿದರು.

Contact Your\'s Advertisement; 9902492681

ಮನೆಗೊಂದು ಅನುಭವಮಂಟಪ ಕಾರ್ಯಕ್ರಮ ಹಮ್ಮಿಕೊಂಡಿರುವ ಶರಣೆ ಅರ್ಚನಾ ಅಜಯಕುಮಾರ ಬುಕ್ಕಾ, ಶರಣೆ ಕಾವೇರಿ ಬಸವರಾಜ ಗೊರನಾಳೆ, ಶರಣೆ ಸಂತೋಷಿ ಸಂಗಮೇಶ ಹುಣಜೆ, ಶರಣೆ ಭಾಗ್ಯವತಿ ಧನರಾಜ ಬಂಬುಳಗೆ, ಶರಣೆ ಚಂದ್ರಮ್ಮ ವೈಜಿನಾಥ ಸಾವಳೆ, ಶರಣೆ ಚಂದ್ರಕಲಾ ಪ್ರಭು ಡಿಗ್ಗೆ, ಶರಣೆ ನಿರ್ಮಲಾ ರಮೇಶ ಜಮಾದಾರ, ಶರಣೆ ಗೀತಾ ಸುಭಾಷ ಮಾಶೆಟ್ಟೆ, ಶರಣೆ ಸಂಗೀತಾ ಸುರೇಶ ಪುರಂತ, ಶರಣೆ ಸುಮನ್ ಧನರಾಜ ಕಾಕನಾಳೆ ಮುಂತಾದವರಿಗೆ ಸನ್ಮಾನಿಸಲಾಯಿತು. ನಿರೂಪಣೆ ವೀರಣ್ಣ ಮಾಡಿದರು. ವಚನ ಗಾಯನ ಯಲ್ಲನಗೌಡ ಮತ್ತು ರಾಜು ಜುಬರೆ ಅವರಿಂದ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here