ಸುರಪುರ:ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕಾನೂನಿನ ಅರಿವು ಅರಿತು ಕೊಳ್ಳವ ಅಗತ್ಯವಿದೆ ಎಂದು ನ್ಯಾಯವಾದಿ ಛಾಯಾ ಮನೋಹರ ಕುಂಟೋಜಿ ಮಾತನಾಡಿದರು.
ನಗರದ ರಂಗಂಪೇಟೆಯಲ್ಲಿ ಸುರಕ್ಷಾ ಮಹಿಳಾ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ದಿನಮಾನಗಳಲ್ಲಿ ಬದಲಾಗುತ್ತಿರುವ ಕಾಲದಲ್ಲಿ ಮಹಿಳೆಯರು ತನ್ನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಹೊಂದಿದ್ದಾಳೆ ಎಂದರು.
ಮುಖ್ಯ ಅತಿಥಿಯಾದ ಉಪನ್ಯಾಸಕಿ ಜ್ಯೋತಿ ಸುರೇಶ್ ಮಾಮಡಿ ಅವರು ಮಾತನಾಡಿ, ಮಹಿಳೆಯರಿಗೆ ಸಿಗುವ ಸ್ಥಾನ ಮಾನ ಗಳಿಂದ ತಮ್ಮ ನಡೆ ನುಡಿ ಗಳಿಂದ ಸಮಾಜದಲ್ಲಿ ಮಹಿಳೆಯರು ಗೌರವವನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸುನಂದಾ ಮೌನೇಶ್ ನಾಲವಾರ ಮಾತನಾಡಿ, ಮಹಿಳೆಯರಲ್ಲಿ ಸಹನೆ, ತಾಳ್ಮೆ, ಶಾಂತಿ ಹೀಗೆ ಎಲ್ಲ ಗುಣಗಳು ಕಾಣುತ್ತೇವೆ ಹಾಗೂ ತಮ್ಮ ಕುಟುಂಬದ ಆರೈಕೆ ಕಾಳಜಿ ವಹಿಸುವ ಜೊತೆ ಜೊತೆಗೆ ಹೆಚ್ಚುಆರೋಗ್ಯದತ್ತ ಕೂಡಾ ಕಾಳಜಿ ವಹಿಸಿಕೊಳ್ಳಬೇಕು ಎಂದರು.
ಶಿಕ್ಷಕಿಯರಾದ ಶಮೀನಾ ಸುರಯ್ಯ,ವೀಣಾ ಕೆ.ಶಾಬಾದಿ ಅವರು ಮಾತನಾಡಿದರು. ಮಹಿಳಾ ಮುಖಂಡರಾದ ಸರಸ್ವತಿ ಶಿರವಾಳ,ಸಿದ್ದಮ್ಮ ಶಾಬಾದಿ, ದೇವಮ್ಮ ನಾಲವಾರ,ಮಾಲಾನಬೀ ಜಮಾದಾರ್,ತಾಯಮ್ಮ ನಾಯಕ,ಇಮಾಮಾಬೀ ದೊಡ್ಡಮನಿ, ರೇಷ್ಮಾ ದಡೆಕಲ್,ಬಬಿತಾ,ರೇಖಾ,ಸುನೀತಾ, ನಾಗರತ್ನಮ್ಮ, ನಾಗಮ್ಮ,ತನಾಯಿತ್,ಸೋಪಮ್ಮ ನಾಯಕ,ಗೀತಾ,ಪದ್ಮಾಕ್ಷೀ ರೇಶ್ಮಿ, ಸಂಗೀತಾ,ಆಯಾಷಾ, ತಿಮ್ಮವ್ವ,ಪೂಜಾ, ಲಕ್ಷ್ಮೀ, ಕಲ್ಪನಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.