12 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0
9

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಬಣಗಾರ ಪೌಂಡೇಶನ್ ಸುರಪುರ ಇವರುಗಳ ವತಿಯಿಂದ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾ ಜಾಲವಾದಿ ಮಾತನಾಡಿ, ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಬಣಗಾರ ಪೌಂಡೇಶನ್ ಸುರಪುರ ಇವರುಗಳ ಸಹಯೋಗದಲ್ಲಿ ಮಾ12 ರಂದು ಬೆಳಿಗ್ಗೆ 10.30ಗಂಟೆಗೆ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಮಹಿಳಾ ಕವಯತ್ರಿಯರ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಣಗಾರ ಫೌಂಡೇಷನ್ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರನ್ನು ಗುರುತಿಸುವ ಕಾರ್ಯ ಕೈಗೊಂಡಿರುವುದು ಉತ್ತಮ ಕಾರ್ಯವಾಗಿದೆ ಇಂದು ಇನ್ನುಳಿದ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಲಿ ಎಂದ ಅವರು ಮಹಿಳೆಯರು ಕಡ್ಡಾಯವಾಗಿ ಶಿಕ್ಷಣವಂತರಾಗಬೇಕು ಹಾಗೂ ಸ್ವಾವಲಂಬಿಗಳಾಗಿ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು ಆಗ ದೇಶ ಪ್ರಗತಿಯತ್ತ ಹೋಗಲು ಸಾಧ್ಯ ಎಂದರು.

ರಾಣಿ ಪುಷ್ಪಲತಾ ರಾಜಾ ಮುಕುಂದ ನಾಯಕ ಉದ್ಘಾಟಿಸುವರು ನ್ಯಾಯವಾದಿ ಜಯಲಲಿತಾ ವಿರೇಂದ್ರ ಪಾಟೀಲ ಅಧ್ಯಕ್ಷತೆ ವಹಿಸುವರು, ಶಿವಲೀಲಾ ಮುರಾಳ ಹುಣಸಗಿ ಸಾಹಿತಿಗಳು ವಿರಚಿತ “ಹಾದಿ ತಂಪು” ಕವನ ಸಂಕಲನ ಬಿಡುಗಡೆಗೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ವಂದನಾ ವಿಜಯಕುಮಾರ ಬಣಗಾರ, ವಿಮಲಾಕ್ಷಿ ಅರವಿಂದ ಸಿಂದಗಿ ಪತಂಜಲಿ ಮಹಿಳಾ ಯೋಗ ಶಿಕ್ಷಕಿ, ನಿರ್ಮಲಾ ಸೂಗುರೇಶ ವಾರದ, ಡಾ.ಸವಿತಾ ಶಿರಗೋಜಿ, ನ್ಯಾಯವಾದಿ ಛಾಯಾ ಮನೋಹರ ಕುಂಟೋಜಿ, ಮುಖ್ಯ ಶಿಕ್ಷಕಿ ಹಸೀನಾಬಾನು, ಕು.ಐಶ್ವರ್ಯ ದೇವಿಕೇರಿ ಆಗಮಿಸುವರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಾಧಾಬಾಯಿ ಜೋಷಿ(ಧಾರ್ಮಿಕ), ಶಕುಂತಲಾ ಜಾಲವಾದಿ(ಶಿಕ್ಷಣ), ಜಯಶ್ರೀ ಪ್ರಕಾಶ ಪಾಟೀಲ, ಅರುಣಾ ಚಿನ್ನಾಕಾರ(ಶಿಕ್ಷಣ), ನಿರ್ಮಲಾ ರಾಜಗುರು(ಸಂಗೀತ), ಸವಿತಾ ನಾಗರಾಜ ಗಿರಣಿ(ಪೋಲಿಸ್), ಶಾರದಾ ಡಿ.ಕುಲಕರ್ಣಿ, ವಿಜಯಲಕ್ಷ್ಮೀ ಯಾದವ್(ಗಾಯನ), ಪ್ರಿಯಾಂಕ ವಿಶ್ವಕರ್ಮ(ಸಂಗೀತ), ಸುಮಂಗಲಾ.ಎಂ(ಸಮಾಜ ಸೇವೆ) ಹಾಗೂ ಸುವರ್ಣಾ ಅರ್ಜುಣಗಿ(ಶಿಕ್ಷಣ) ಇವರುಗಳನ್ನು ಸನ್ಮಾನಿಸಲಾಗುವುದು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಭಾಗ್ಯವತಿ ಕೆಂಭಾವಿ ವಹಿಸುವರು ಕವಯತ್ರಿಯರಾದ ಶಿವಲೀಲಾ ಮುರಾಳ, ನೀಲಮ್ಮ ಮಲ್ಲೆ, ಉಮಾದೇವಿ.ಪೋ.ಪಾಟೀಲ, ಪಾರ್ವತಿ ದೇಸಾಯಿ, ಶಕುಂತಲಾ ಹಡಗಲಿ, ಸರಸಿಜಾ ರಾಜನ್, ಲಲಿತಾ ಹಣಮಂತ ಯಾದವ್ ಹಾಗೂ ಲಕ್ಷ್ಮೀ ಭೀಮರಾಯ ಕುಂಬಾರ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಉಪಾಧ್ಯಕ್ಷೆ ನ್ಯಾಯವಾದಿ ಜಯಲಲಿತಾ ಪಾಟೀಲ, ಫೌಂಡೇಷನ್ ಅಧ್ಯಕ್ಷ ವಸಂತಕುಮಾರ ಬಣಗಾರ ಹಾಗೂ ಉಪನ್ಯಾಸಕ ವಿಜಯಕುಮಾರ ಬಣಗಾರ ಮಾತನಾಡಿದರು, ಲೇಖಕ ಪ್ರಕಾಶಚಂದ ಜೈನ, ಸಜ್ಜನಕುಮಾರ ಕಲ್ಯಾಣಶೆಟ್ಟಿ, ಸಂತೋಷ ಬಣಗಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here