ಕಾಡಾ ಕಚೇರಿ ಸ್ಥಳಾಂತರ ವಿರೋಧಿಸಿ ಹೆಚ್.ಡಿ ಕುಮಾರಸ್ವಾಮಿ ಸೇನೆ ಪ್ರತಿಭಟನೆ

0
47

ಸುರಪುರ: ಕೆಬಿಜೆಎನ್‍ಎಲ್ ವ್ಯಾಪ್ತಿಯಲ್ಲಿ ಬರುವ ಬೊಮ್ಮನಹಳ್ಳಿ ಗ್ರಾಮದ ಟ್ಯಾಂಕ್ ಫಿಲ್ಲಿಂಗ್ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಬೇಕು ಹಾಗೂ ಹಸನಾಪುರ ಕ್ಯಾಂಪಿನ ಕಾಡಾ ಕಚೇರಿ ಸ್ಥಳಾಂತರಗೊಳಿಸಬಾರದು ಎಂದು ಆಗ್ರಹಿಸಿ ಎಚ್.ಡಿ.ಕುಮಾರಸ್ವಾಮಿ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಕೆಬಿಜೆಎನ್‍ಎಲ್ ಭೀ.ಗುಡಿ ವಲಯದ ಎಸ್‍ಬಿಸಿ ಪಾಲನೆ ಮತ್ತು ಪೋಷಣಾ ವಿಭಾಗದ ವ್ತಾಪ್ತಿಯಲ್ಲಿ ಬರುವ ಟ್ಯಾಂಕ್ ಫಿಲ್ಲಿಂಗ್ ಕಾಮಗಾರಿಗೆ ಅರ್ಜಿ ಸಲ್ಲಿಸಿರುವ ಗುತ್ತಿಗೆದಾರರ ದಾಖಲೆ ಬೋಗಸ್ ಆಗಿದ್ದು ಈ ಕುರಿತು ಲೋಕಾಯುಕ್ತ ತನಿಖೆ ಕೈಗೊಳ್ಳಬೇಕು ಅಲ್ಲಿಯವರೆಗೆ ಟೆಂಡರ್ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಹಸನಾಪುರ ಕ್ಯಾಂಪಿನ ಕಾಡಾ ಕಚೇರಿಯನ್ನು ಬಾಗಲಕೋಟೆಗೆ ಸ್ಥಳಾಂತಗೊಳಿಸುವ ಹುನ್ನಾರ ನಡೆದಿದ್ದು ಇದು ಈ ಭಾಗದ ರೈತರಿಗೆ ಮಾಡುತ್ತಿರುವ ಮೋಸವಾಗಿದೆ ಕಚೇರಿಯನ್ನು ಸ್ಥಳಾಂತಗೊಳಿಸಬಾರದು ಎಂದು ಆಗ್ರಹಿಸಿದರು.

ಕಾಡಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಶಿವರಾಜ, ದೇವಪ್ಪ ರತ್ತಾಳ, ಅಂಬ್ರೇಶ, ಕೇಶವ ನಾಯಕ, ಹಣಮಂತ್ರಾಯ, ದಾವಲಸಾಬ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here