ವಿಶ್ವ ಮಹಿಳಾ ದಿನಾಚರಣೆ: ಸ್ತ್ರೀ ಪುರುಷರು ಸರ್ವ ಸಮಾನರು ನಾಗವೇಣಿ ಧನ್ನಾ

0
28

ಜೇವರ್ಗಿ: ಭಾರತದ ಸಂವಿಧಾನದ ಅಡಿಯಲ್ಲಿ ಸ್ತ್ರೀಯರು ಪುರುಷರು ಸಮಾನವಾಗಿ ಸ್ಥಾನಮಾನಗಳನ್ನು ಹೊಂದಿದ್ದು ಇದರ ಪ್ರಯೋಜವನ್ನು ಪಡೆದುಕೊಳ್ಳಲು ಮಹಿಳೆಯರು ಮುಂದೆ ಬರಬೇಕು ಎಂದು ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕರಾದ ನಾಗವೇಣಿ ಧನ್ನಾ ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಶಿಸು ಅಭಿವೃದ್ಧಿ ಇಲಾಖೆಯ ಕಾರ್ಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಜೇವರ್ಗಿ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಹಿರಿಯ ವಕೀಲರಾದ ಪ್ರಾಣೇಶ ಕುಲಕರ್ಣಿ ಮಾತನಾಡಿ ಇಂದು ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಹಾಗೂ ಕಾನೂನು ಅಡಿಯಲ್ಲಿ ಸುರಕ್ಷತೆಯಿಂದ ಬದುಕಲು ಎಲ್ಲಾ ಅವಕಾಶಗಳನ್ನು ನೀಡಲಾಗಿದೆ ,ಸ್ತ್ರೀ ಪುರುಷರಲ್ಲಿ ಯಾವುದೇ ಬೇಧ ಭಾವ ಇಲ್ಲ ಎಂದು ತಿಳಿಸಿದರು.

ಅತಿಥಿಗಳಾಗಿ ನ್ಯಾಯಾಲಯದ ಸರಕಾರಿ ಸಹಾಯಕ ಅಭಿಯೋಜಕರಾದ ಬಸಲಿಂಗಮ್ಮ ಹಾಗೂ ಶಿಸು ಅಭಿವೃದ್ಧಿ ಯೋಜನ ಅಧಿಕಾರಿಗಳ ಪರವಾಗಿ ಪ್ರಭಾವತಿ ಸಾಲೋಟಿಗಿ ಹಿರಿಯ ಮೇಲ್ವಿಚಾರಕರು ಅಧ್ಯಕ್ಷತೆ ವಹಿಸಿದ್ದರು, ವಕೀಲರಾದ ಎಸ್.ಬಿ ಯಂಕಂಚಿ, ರಾಜು ಮುದ್ದಡಗಿ , ಅಮಾತಪ್ಪ ಮುದ್ದಾ, ತುಳಜಾ ರಾಮ್ ರಾಠೋಡ, ಅಪ್ಪ ಸಾಹೇಬ್ ಕೊಳಕುರ, ಸೇರಿದಂತೆ ಸಮಿತಿಯ ಹುಣಚೇರಾಯ, ಶ್ರೀಕಾಂತ್ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಮೇಲ್ವಿಚಾರಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here