ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0
24

ಕಲಬುರಗಿ; ನಗರೇಶ್ವರ ಶಾಲೆಯಲ್ಲಿ ಇನಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಇಂಡಿಯಾ ಕಲಬುರಗಿ ವಿಭಾಗ ಹಾಗೂ ಶ್ರೀಲಕ್ಷ್ಮಯ್ಯಾ ಜಾಜಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ. ಆರ್. ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಆರುಂಧತಿ ಪಾಟೀಲ ಮಾತನಾಡಿ ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಮೀರಿ ನಿಲ್ಲಬೇಕು, ಹೆಣ್ಣು ಮಕ್ಕಳಲ್ಲಿ ಮನೋಸ್ಥೈರ್ಯ, ಆತ್ಮವಿಶ್ವಾಸ ಹಾಗೂ ಯಾವುದೇ ಸಮಸ್ಯೆಯನ್ನು ಎದುರಿಸುವ ಧೈರ್ಯ ಕರಗತವಾಗಿರಬೇಕು ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಹಾಗೂ ಸಂಸ್ಕಾರ ಸಹಾಯಕಾರಿಯಾಗುತ್ತವೆ. ಮಹಿಳೆ ಇಂದು ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿ ಉನ್ನತ ಸ್ಥಾನಕ್ಕೆ ಮುಟ್ಟುವ ಗುರಿಯನ್ನು ಹೊಂದಿರಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪದ್ಮಪ್ರಿಯಾ ಪಾಟೀಲ ಹಾಗೂ ಲಕ್ಷ್ಮಯ್ಯಾ ಜಾಜಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಅಂಜನಾದೇವಿ ಬೀರಾದಾರ ಅವರನ್ನು ಅವರ ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇನಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‍ನ ಅಧ್ಯಕ್ಷರಾದ ಸುಭಾಷ ಸೂಗುರ ಅವರು ಮಾತನಾಡಿ ಇಂದು ತಾಂತ್ರಿಕ, ವೈಜ್ಞಾನಿಕ, ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಮಹಿಳೆ ಉನ್ನತ ಸ್ಥಾನಗಳಲ್ಲಿದ್ದು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಅವರ ಈ ಪರಿಶ್ರಮಕ್ಕೆ ಪ್ರೋತ್ಸಾಹ ಹಾಗೂ ಪ್ರೇರಣೆ ಅಗತ್ಯ ಎಂದು ತಿಳಿಸಿದರು. ಗೌರವ ಕಾರ್ಯದರ್ಶಿಗಳಾದ ಹಣಮಯ್ಯ ಬೇಲೂರ ಹಾಗೂ ಲಕ್ಷ್ಮಯ್ಯಾ ಜಾಜಿ ಶಿಕ್ಷಣ ಸಂಸ್ಥೆಯ ಉಪಾದ್ಯಕ್ಷರಾದ ಶ್ರೀಕಾಂತ ಜಾಜಿಯವರು ವಿದ್ಯಾರ್ಧಿಯರನ್ನು ಉದ್ದೇಶಿಸಿ ಮಾತನಾಡಿದರು

ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಂಜನಾದೇವಿ ಬೀರಾದಾರ ಸರ್ವರಿಗೂ ಸ್ವಾಗತಿಸಿದರು, ಅರ್ಥಶಾಸ್ತ್ರ ಉಪನ್ಯಾಸಕರಾದ ನೀಲಮ್ಮ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು, ಇತಿಹಾಸ ಉಪನ್ಯಾಸಕರಾದ ಜಗದೇವಿ ಯವರು ವಂದನಾರ್ಪಣೆ ಮಾಡಿದರು. ಇನಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‍ನ ಸದ್ಯರಾದ ಪ್ರೋ. ಉದಯಶಂಕರ ಬಳ್ಳಾರಿ ಹಾಗೂ ಡಾ. ಚಂದ್ರಕಲಾ ಅವರು ಅತಿಥಿಗಳನ್ನು ಪರಿಚಯಿಸಿದರು.

ಈ ಕಾರ್ಯಕ್ರಮದಲ್ಲಿ ಇನಸ್ಟಿಟ್ಯೂಟ್ ಆಫ್ ಇಂಜಿನಿಯರ್ಸನ ಕಾಶಪ್ಪ ವಾಂಜರಖೇಡ್ ಮಹಾವಿದ್ಯಾಲಯದ ಸೀತಾಬಾಯಿ, ಪ್ರೀತಿ, ಅನೀತಾ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here