ಎಸ್ ನಿಜಲಿಂಗಪ್ಪ ದಂತ ವಿಜ್ಞಾನ ಸಂಶೋಧನಾ ಕೇಂದ್ರದ ಘಟಿಕೋತ್ಸವ

0
17

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೈದರಾಬಾದ್ ಶಿಕ್ಷಣ ಸಂಸ್ಥೆಯು (ಎಚ್‍ಕೆಇ) ತನ್ನ ಅಧೀನದ ಕಲಿಕಾ ಕೇಂದ್ರಗಳಿಗೆ ಅಗತ್ಯವಾದ ಅತ್ಯಾಧುನಿಕ ಸಲಕರಣೆಗಳನ್ನು ಪೂರೈಸಿದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ದಂತ ಮಹಾವಿದ್ಯಾಲಯದಲ್ಲಿ ಎಚ್‍ಕೆಇಯ ಎಸ್ ನಿಜಲಿಂಗಪ್ಪ ದಂತ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

198600 ಆರಂಭವಾದ ಸಂಸ್ಥೆಯ ದಂತ ಕಾಲೇಜು ಉತ್ತಮ ಫಲಿತಾಂಶ ಕಾಯ್ದುಕೊಂಡಿದೆ. ನುರಿತ ಬೋಧಕರಿಂದ ಗುಣಮಟ್ಟದ ಶಿಕ್ಷಣವೂ ಸಿಗುತ್ತಿದೆ’ ಎಂದರು.

ಇವತ್ತು ಪದವಿ ಪಡೆದು ಪ್ರಮಾಣ ವಚನ ಸ್ವೀಕರಿಸಿದರು, ಪ್ರಮಾಣ ವಚನಕ್ಕೆ ಬದ್ಧರಾಗಿ ನಡೆಯಬೇಕು. ಕಲಿಕೆಗೆ ಅಡಿಪಾಯ ಹಾಕಿದ್ದ ಸಂಸ್ಥೆ ಹಾಗೂ ಬೋಧಕರನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು’ ಎಂದರು.

ದಂತ ಕಾಲೇಜು ನಡೆಸಿಕೊಂಡು ಹೋಗುವುದು ಕಷ್ಟಕರವಾದ ಇಂದಿನ ದಿನಗಳಲ್ಲಿ ಎಚ್‍ಕೆಇಗೆ ಪ್ರವೇಶ ಬಯಸಿ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗಾಗಿ 2.5 ಕೋಟಿ ವೆಚ್ಚದ ಸಲಕರಣೆಗಳನ್ನು ಒದಗಿಸಲಾಗಿದೆ. ಕೊಟ್ಟಂತಹ ಸಲಕರಣೆಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಎಚ್ ಕೆಇ ವಿದ್ಯಾರ್ಥಿ ಸ್ನೇಹಿ ಸಂಸ್ಥೆಯಾಗಿದ್ದು, ಉತ್ತರ ಕರ್ನಾಟಕದ ಯಾವುದೇ ದಂತ ಕಾಲೇಜಿನಲ್ಲಿ ಇಲ್ಲದ ಸಿಬಿಸಿಟಿ ನಮ್ಮ ಕಾಲೇಜಿನಲ್ಲಿ ಮಾತ್ರ ಇದೆ. ಒಂದು ಯಂತ್ರಕ್ಕೆ 50 ಲಕ್ಷ ವೆಚ್ಚ ತಗುಲಿದೆ. ದಂತ ಸೇವೆ ದುಬಾರಿಯಾಗಿದ್ದು, ರೋಗಿಗಳು ಕಡಿಮೆ ಖರ್ಚಿನಲ್ಲಿ ಇದರ ಸೇವೆ ಪಡೆದುಕೊಳ್ಳಬೇಕು ಎಂದರು.

ದಂತ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ 2016-17 ಸಾಲಿನಲ್ಲಿ ಅಗ್ರ ಸ್ಥಾನ ಗಳಿಸಿದ ಎಂಟು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 88 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಎಚ್‍ಕೆಇ ಸಂಸ್ಥೆಯ ಕಾರ್ಯದರ್ಶಿ ಡಾ.ಜಗನ್ನಾಥ ಆರ್.ಬಿಜಾಪುರೆ, ಜಂಟಿ ಕಾರ್ಯದರ್ಶಿ ಡಾ.ಮಹಾದೇವಪ್ಪ ವಿ.ರಾಂಪೂರೆ, ಸಂಸ್ಥೆಯ ಸದಸ್ಯರಾದ ಡಾ. ಅನಿಲ್ ಕುಮಾರ ಬಿ. ಪಟ್ಟಣ್, ಡಾ.ಕೈಲಾಶ ಬಿ. ಪಾಟೀಲ, ಡಾ.ರಜನೀಶ್ ಎಸ್.ವಾಲಿ ಸೇರಿದಂತೆ ಇತರರು ಇದ್ದರು. ನಂತರ ಹೈದರಾಬಾದ್ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here