ವಿವಿಧ ಸ್ಪರ್ಧೆಗಳಿಗೆ ವಿಜೇತರಾದ ಮಹಿಳೆಯರಿಗೆ ಆಕರ್ಷಕ ಬಹುಮಾನ ವಿತರಣೆ

0
27

ಕಲಬುರಗಿ: ನಗರದ ಪಬ್ಲಿಕ್ ಗಾರ್ಡನ ಸಮೀಪದ ಜ್ಞಾನ ಕ್ಷೇತ್ರದಲ್ಲಿ ಗುರುದೇವ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗಾಗಿ ಅನಿಲ ರಹಿತ ಅಡುಗೆ, ರಂಗೋಲಿ, ವಚನ ಗಾಯನ ಹಾಗೂ ವಿವಿಧ ಸ್ಪರ್ಧೆಗಳಿಗೆ ವಿಜೇತರಾದ ಮಹಿಳೆಯರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

ಕಲಬುರಗಿ ಆರ್ಟ್ ಆಫ್ ಲಿವಿಂಗ್‍ನ ಪ್ರಮುಖರಾದ ಸಾಧ್ವವಾಣಿ ಅವರು ಮಾತನಾಡುತ್ತಾ ಮಾ.18ರಿಂದ ಮಧ್ಯಾಹ್ನ 12ರಿಂದ 1.30ರ ವರೆಗೆ ಅನಿಲ ರಹಿತ ಅಡುಗೆ, ಮಧ್ಯಾಹ್ನ 3ರಿಂದ ಸಂಜೆ 4ರ ವರೆಗೆ ರಂಗೋಲಿ, ಸಂಜೆ 4ರಿಂದ 6ರ ವರೆಗೆ ವಚನ ಗಾಯನ ಸ್ಪರ್ಧೆಗಳು ಜರುಗಿತು.

Contact Your\'s Advertisement; 9902492681

ಈ ಸ್ಪರ್ಧೆಯಲ್ಲಿ 18 ವಯಸ್ಸಿನ ಮೇಲ್ಪಟ್ಟ ಮಹಿಳೆಯರು ವಿವಿಧ ಸ್ಪರ್ಧೆಗಳಿಗೆ ಭಾಗವಹಿಸಿ ಮಹಿಳಾ ದಿನಾಚರಣೆಯ ಸಮಾರೋಪ ಸಮಾರಂಭ ಬಹುಮಾನ ಪಡೆದರು ಎಂದರು.

ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಸಾದ್ವಿ ಮಧುಬಾಲಾ, ಕವಿತಾ ನಾಯಕ, ಶರಣಮ್ಮ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಮಲ್ಲಮ್ಮ, ಪ್ರಾಧ್ಯಾಪಕಿ ಲತಾದೇವಿ ಪಾಟೀಲ್, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಮೇಲ್ವಿಚಾರಕಿ ಶಿವಲೀಲಾ ಡಾಂಗೆ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಅನುರಾಧ, ಭಾಗ್ಯ ಲಕ್ಷ್ಮಿ ಸುನಂದಾದೇವಿ, ವಿಜಯಲಕ್ಷ್ಮಿ ಮೇಳಕುಂದಿ, ಲೀಲಾವತಿ ಕುಲಕರ್ಣಿ, ಡಾ.ಸುನೀತಾ ಕುಲಕರ್ಣಿ, ಹೈಕೋರ್ಟ್ ನ್ಯಾಯವಾದಿ ಜಯಾನಂದಯ್ಯ ಸ್ವಾಮಿ, ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾದ ಚೆನ್ನವೀರ್, ದತ್ತಾತ್ರೇಯ ಮೋರೆ, ಅಶ್ವಿನಿ, ವಿಕಾಸ್ ಬೋಳಶೆಟ್ಟಿ, ಶ್ರೀನಿವಾಸ್ ರಾವ್ ಕಾಳೆ, ದತ್ತಾಚುಂಚೂರ್, ಗೀತಾ ಕಿಣಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here